ಹರೆಯದ ಭಾವವೇ “ಆಸರೆ”ಯ ಜೀವ: ಮತ್ತೆ ಮತ್ತೆ ಸದ್ದು ಮಾಡ್ತಿದೆ “ಆಸರೆ”ತುಳು ಆಲ್ಬಂ

ಹರೆಯದ ತುಮುಲ ಭಾವನೆಗಳೇ ಜೀವಾಳವಾಗಿರುವ ಆಸರೆ ತುಳು ಆಲ್ಬಂ ಇತ್ತೀಚೆಗೆ ಬಿಡುಗಡೆ ಗೊಂಡಿದೆ. ಬೀಯಿಂಗ್ ಸೋಶಿಯಲ್ ಹಾಗೂ, ಮಣಿಪಾಲ್ ರೋಟರಿ ಹಿಲ್ಸ್ , manipalchoice.com ನ ಸಹಯೋಗದಲ್ಲಿ ಮಣಿ ಪಾಲದ ಪ್ರಸನ್ನ ಗಣಪತಿ ದೇವಸ್ಥಾನ ಬಳಿಯ ಲೇಕ್ ಗ್ರೌಂಡ್ ನಲ್ಲಿ ನಡೆದ ಕೂತು ಮಾತನಾಡುವ” ಕಾರ್ಯ ಕ್ರಮದಲ್ಲಿ “ಆಸರೆ” ಬಿಡುಗಡೆ ಮಾಡಲಾಯಿತು. ಮಂಗಳೂರಿನ ಮಹಿಳಾ ಸಾಧಕಿ ಮಂಜುಳಾ ರಾವ್ ಹಾಗೂ ಖ್ಯಾತ ನಿರೂಪಕ ಅವಿನಾಶ್ ಕಾಮತ್ ಆಲ್ಬಂ ಬಿಡುಗಡೆಗೊಳಿಸಿದರು. ಕನಸು ಕ್ರಿಯೇಶನ್ ಅಡಿಯಲ್ಲಿ ಮೂಡಿ ಬಂದಿರುವ ಆಸರೆ ತುಳು ಅಲ್ಬಂ […]
ರವಿ ಬಸ್ರೂರ್ ನಿರ್ದೇಶನದ “ಗಿರ್ಮಿಟ್” ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್

ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಹೆಚ್ಚು ಸದ್ದು ಮಾಡಿದ್ದು. ಆ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಆದರೆ, ಈಗ ರವಿ ಬಸ್ರೂರ್ ಅವರ ನಿರ್ದೇಶನದ ಸಿನಿಮಾ ಕೂಡ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಮ್ಯೂಸಿಕ್ ಮಾತ್ರವಲ್ಲ ತಾನು ಒಬ್ಬ ಒಳ್ಳೆಯ ನಿರ್ದೇಶಕ ಎನ್ನುವುದನ್ನು ಈಗಾಗಲೇ ತಮ್ಮ ಕಟಕ ಸಿನಿಮಾದಲ್ಲಿ ಅವರು ಸಾಬೀತು ಮಾಡಿದ್ದಾರೆ. ಆ ಚಿತ್ರದ ನಂತರ ‘ಗಿರ್ಮಿಟ್’ ಎಂಬ ಮತ್ತೊಂದು ಸಿನಿಮಾವನ್ನು ಅವರು ಶುರು ಮಾಡಿದ್ದಾರೆ. ಕೆಜಿಎಫ್-2 ಹಾಡುಗಳ ತಯಾರಿ ಆರಂಭ ಕೆಜಿಎಫ್ […]
‘ರಾಧಾರಮಣ’ ರಾಧಾ ಪಾತ್ರಕ್ಕೆ ಕಿರುತೆರೆಯ ಮತ್ತೋರ್ವ ನಟಿ ಕಾವ್ಯ ಗೌಡ ಎಂಟ್ರಿ

ಕಲರ್ಸ್ ಕನ್ನಡ ವಾಹಿನಿ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ರಾಧಾರಮಣ. ಹಿಂದಿನ ಕಾಲದ ಮುದುಕ, ಮುದುಕಿಯರಿಂದ ಹಿಡಿದು ಈಗಿನ ಕಾಲದ ಯುವತಿ, ಯುವಕರ ವರೆಗೂ ರಾತ್ರಿ 9 ಗಂಟೆಯಾದ್ರೆ ಟಿವಿ ಮುಂದೆ ಹಾಜರ್ ಆಗಿ ನೋಡುವ ಧಾರಾವಾಹಿ ಇದಾಗಿದ್ದು, ಅದಕ್ಕೆ ರಾಧಾರಮಣ ಧಾರಾವಾಹಿ ಟಿ.ಆರ್.ಪಿಯಲ್ಲೂ ಮುಂದಿದೆ. ರಾಧಾ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ರಾಧಾ ಮಿಸ್ ಖ್ಯಾತಿಯ ಶ್ವೇತಾ ಪ್ರಸಾದ್ ಈಗ ಸೀರಿಯಲ್ ನಿಂದ ಹೊರಬಂದಿದ್ದಾರೆ. ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಶ್ವೇತಾ ಪ್ರಸಾದ್ ಅವರ ಈ ನಿರ್ಧಾರ ಬಹಿರಂಗವಾಗುತ್ತಿದ್ದ […]
ಪ್ರಧಾನಿ ಮೋದಿ ಬಯೋಪಿಕ್ ರಿಲೀಸ್ ಗೆ ದಿನಾಂಕ ಫಿಕ್ಸ್..

ನವದೆಹಲಿ: ಬಹು ನಿರೀಕ್ಷೆಯ ಮೋದಿ ಬಯೋಪಿಕ್ ರಿಲೀಸ್ ಗೆ ಕಾಲ ಕೂಡಿ ಬಂದಿದೆ. ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಮೋದಿ ಸಿನಿಮಾ ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ತೆರೆಗೆ ಬರುತ್ತಿದೆ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ದೇಶವೆ ಕಾತುರದಿಂದ ಕಾಯುತ್ತಿರುವ ಲೋಕ ಸಭಾ ಚುನಾವಣೆಯ ಫಲಿತಾಂಶ ಮೇ 23ಕ್ಕೆ ಹೊರಬೀಳಿದ್ದು, ಅದರ ಮರುದಿನವೆ ಮೇ 24ಕ್ಕೆ ಮೋದಿ ಬಯೋಪಿಕ್ ತೆರೆಗೆ ಬರುತ್ತಿದೆ. ಈ ಬಗ್ಗೆ ಚಿತ್ರತಂಡವೆ […]
ನಿರ್ದೇಶಕ ವಿಗ್ನೇಶ್ ಜತೆ ನಟಿ ನಯನತಾರಾ ನಿಶ್ಚಿತಾರ್ಥ!

ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ದೇಶಕ ವಿಗ್ನೇಶ್ ಜತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತನ್ನ ಬಹುದಿನದ ಗೆಳೆಯ, ನಿರ್ದೇಶಕ ವಿಗ್ನೇಶ್ ಶಿವನ್ ಜತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, 2020ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‍ನಲ್ಲಿ ಹರಿದಾಡುತ್ತಿದೆ. ನಯನತಾರಾ ಗೆಳೆಯ ವಿಗ್ನೇಶ್ ಜತೆಗೆ ಹಲವು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ನಿಶ್ಚಿತಾರ್ಥ ಆಗುತ್ತಿರುವ ವಿಷಯ ಕಾಲಿವುಡ್‍ನಲ್ಲಿ ಸದ್ಯ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಯನತಾರಾ ಆಗಲಿ ವಿಗ್ನೇಶ್ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. […]