ಕುತೂಹಲ ಹೆಚ್ಚಿಸಿದ ‘ದಳಪತಿ 68’ : ವಿಜಯ್ 10 ನಿಮಿಷದ ವಿಂಟೇಜ್ ಲುಕ್ಗಾಗಿ 6 ಕೋಟಿ ಖರ್ಚು

ಇತ್ತೀಚೆಗಷ್ಟೇ ‘ಲಿಯೋ’ ಚಿತ್ರದ ಮೂಲಕ ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಹೀರೋ ಸದ್ಯ ‘ದಳಪತಿ 68’ ವರ್ಕಿಂಗ್ ಟೈಟಲ್ನಲ್ಲಿ ತಯಾರಾಗುತ್ತಿರುವ ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸುತ್ತಿದ್ದಾರೆ. ಹೈ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಪ್ರಾರಂಭವಾಗಿದೆ. ಅದರ ಭಾಗವಾಗಿ ವಿಜಯ್ 3D VFX ಸ್ಕ್ಯಾನ್ ಅನ್ನು ಯುಎಸ್ನಲ್ಲಿ ತೆಗೆದುಕೊಂಡಿದ್ದಾರೆ. ತಮಿಳು ಚಿತ್ರರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ ಸಾಲು ಸಾಲು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.ದಳಪತಿ […]
ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರಿಂದ ಅಪೂರ್ವ ನಿರ್ದೇಶನದ ‘ಓ ನನ್ನ ಚೇತನ’ ಚಿತ್ರದ ಟ್ರೇಲರ್ ಅನಾವರಣ

ಮಕ್ಕಳ ಕುರಿತ ಕಥೆಯಾಧಾರಿತ ಈ ಸಿನಿಮಾದ ಟ್ರೇಲರ್ ಅನ್ನು ಅವರು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಬಳಿಕ ಮಾತನಾಡಿದ ಕ್ರೇಜಿಸ್ಟಾರ್, ‘ಓ ನನ್ನ ಚೇತನ’ ಸಿನಿಮಾದ ಟ್ರೇಲರ್ ಪ್ರೇಮಲೋಕ, ಶಾಂತಿ ಕ್ರಾಂತಿಯ ಚಿತ್ರದ ಅದ್ಭುತ ಸನ್ನಿವೇಶಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್, ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ. ‘ಅಪೂರ್ವ’ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ನಟಿಸಿ ನಿರ್ದೇಶಿಸಿದ ಸಿನಿಮಾ. ಈ ಚಿತ್ರದಲ್ಲಿ ಅಪೂರ್ವ ಎಂಬ ಪ್ರತಿಭಾವಂತ ಕಲಾವಿದೆಯನ್ನು ಕನ್ನಡ ಚಿತ್ರರಂಗಕ್ಕೆ […]
ವಿಕ್ಕಿ ಕೌಶಲ್ ಸಿನಿಮಾದ ಬಜೆಟ್ 55 ಕೋಟಿ ರೂ. :54 ಕೋಟಿ ಗಳಿಸಿದ ಸ್ಯಾಮ್ ಬಹದ್ದೂರ್

ಭಾರತ ದೇಶದ ಮೊದಲ ಫೀಲ್ಡ್ ಮಾರ್ಷಲ್, ಆರ್ಮಿ ಜನರಲ್ ಸ್ಯಾಮ್ ಮಾಣಿಕ್ ಶಾ ಅವರ ಜೀವನವನ್ನು ಆಧರಿಸಿ ನಿರ್ಮಾಣ ಮಾಡಲಾದ ಸಿನಿಮಾವೇ ‘ಸ್ಯಾಮ್ ಬಹದ್ದೂರ್’. ಸ್ಯಾಮ್ ಮಾಣಿಕ್ ಶಾ ಅವರು 1971ರಲ್ಲಿ ನಡೆದ ಮಹತ್ವದ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವಿಕರಿಸಿದೆ.55 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಸ್ಯಾಮ್ ಬಹದ್ದೂರ್ ಸಿನಿಮಾ ವಿಶ್ವದಾದ್ಯಂತ ಒಟ್ಟು 53.8 ಕೋಟಿ ರೂಪಾಯಿ […]
ಅಂತಿಮ ದರ್ಶನ ಪಡೆದ ಸಿನಿತಾರೆಯರು : ನಟಿ ಲೀಲಾವತಿ ಪಾರ್ಥಿವ ಶರೀರ

ಬೆಂಗಳೂರು: ಬೆಂಗಳೂರಿನ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಇರಿಸಲಾಗಿರುವ ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನಟ, ನಟಿಯರು ಹಾಗೂ ಗಣ್ಯರು ಪಡೆದರು. ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಬೆಂಗಳೂರಿನ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಇರಿಸಲಾಗಿರುವ ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನಟ, ನಟಿಯರು ಹಾಗೂ ಗಣ್ಯರು ಪಡೆದರು. ನಟಿ ಲೀಲಾವತಿಗೆ ಕಿಚ್ಚ ಸುದೀಪ್, ಸೇರಿ ಹಲವರಿಂದ ಶ್ರದ್ಧಾಂಜಲಿ: ಹಿರಿಯ […]
ಸಾರ್ವಜನಿಕರಿಂದ ಅಂತಿಮ ದರ್ಶನ : ಅಂಬೇಡ್ಕರ್ ಮೈದಾನದಲ್ಲಿ ನಟಿ ಲೀಲಾವತಿ ಪಾರ್ಥಿವ ಶರೀರ

ಮುಂಜಾನೆ 5:30 ರಿಂದ 10:30ರ ವರೆಗೂ ಸಾರ್ವಜನಿಕರು ಆಗಮಿಸಿ ನಟಿಯ ಅಂತಿಮ ದರ್ಶನ ಪಡೆದರುರವೀಂದ್ರ ಕಲಾಕ್ಷೇತ್ರಕ್ಕೂ ಮುನ್ನ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ನಟಿ ಪಾರ್ಥಿವ ಶರೀರ ಇರಿಸಲಾಗಿತ್ತು. . . ಈಗಾಗಲೇ ಚಿತ್ರರಂಗದ ಹಲವರು ನಟಿಯ ಅಂತಿಮ ದರ್ಶನ ಪಡೆದಿದ್ದಾರೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು, ಸಾರ್ವಜನಿಕರು ಬರುತ್ತಿದ್ದಾರೆ. ಬಳಿಕ ಅಲ್ಲಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥೀವ ಶರೀರವನ್ನು ತರಲಾಯಿತು. ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 2:30 ರವರೆಗೆ ದರ್ಶನಕ್ಕೆ ಅವಕಾಶವಿದೆ. […]