“ರತ್ನನ್ ಪ್ರಪಂಚ” ಕ್ಕೆ ಎಂಟ್ರಿ ಕೊಡ್ತಿದ್ದಾರೆ ನಟಿ ಉಮಾಶ್ರೀ:

“ರತ್ನ ನ್ ಪ್ರಪಂಚ”ಅನ್ನೋ ಹೊಸ ಮೂವಿ ಬಗ್ಗೆ ಸಿನಿಮಾ ಅಭಿಮಾನಿಗಳು ಈಗಾಗಲೇ ಕೇಳಿರುತ್ತೀರಿ. ರೋಹಿತ್ ಪಡಕಿಯ “ರತ್ನನ್ ಪ್ರಪಂಚ” ದಲ್ಲಿ ಧನಂಜಯ್ ಮತ್ತು ರೆಬಾ ಮೋನಿಕಾ ಜಾನ್ ಪ್ರಮುಖ ತಾರಾಂಗಣದಲ್ಲಿರುವುದು ಸಾಮಾನ್ಯ ಸಂಗತಿ. ಆದರೆ ಇದೀಗ ಸುದ್ದಿಯಾಗ್ತಿರೋದು ನಟಿ ಉಮಾಶ್ರೀ. ಯಸ್ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದಾರೆ. ಈ ಹಿಂದೆ “ಲವ್ ಯು ಆಲಿಯಾ” ಚಿತ್ರದಲ್ಲಿ ನಟಿಸಿ ಆ ಮೇಲೆ ಸಿನಿಮಾದಿಂದ ದೂರ ಉಳಿದಿದ್ದ ಉಮಾಶ್ರೀ […]
‘ಆದಿಪುರುಷ್’ ಚಿತ್ರದಲ್ಲಿ ಪ್ರಧಾನಿ ಮೋದಿ ನಟನೆ.?

ಹೈದರಬಾದ್: ‘ರಾಮಾಯಣ’ ಕಥೆಯನ್ನು ಇಟ್ಟಕೊಂಡು ನಿರ್ದೇಶಕ ಓಂ ರಾವುತ್ ‘ಆದಿಪುರುಷ್’ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು 3ಡಿ ತಂತ್ರಜ್ಞಾನದಡಿ ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬಳಿಕ ಕನ್ನಡ, ತಮಿಳು, ಮಲಯಾಳ ಸೇರಿದಂತೆ ಕೆಲವು ವಿದೇಶಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ. 500 ಕೋಟಿ ರೂ. ವೆಚ್ಚದಡಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.2022ಕ್ಕೆ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ನಟನೆ.? ಈ ನಡುವೆ ಚಿತ್ರತಂಡ ಅಚ್ಚರಿಯ […]
ಕೆಜಿಎಫ್ 2 ಚಿತ್ರದಲ್ಲಿ ಅನಂತ್ ನಾಗ್ ಬದಲು ಪ್ರಕಾಶ್ ರೈ?: ನಿರ್ದೇಶಕ ಹೇಳಿದ್ದು ಏನು

ಬೆಂಗಳೂರು: ಕೆಜಿಎಫ್ 2 ಚಿತ್ರದಲ್ಲಿ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರಿಸಲಿದ್ದಾರೆ ಎಂಬ ವದಂತಿಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದಾರೆ. ವಿವಾದಕ್ಕೆ ಕಾರಣ ಏನು.? ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರೈ ಚಿತ್ರವನ್ನು ಚಿತ್ರತಂಡ ಟ್ವೀಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟ ಚರ್ಚೆಯನ್ನು ಹುಟ್ಟುಹಾಕಿತ್ತು. ಕೆಜಿಎಫ್ ಮೊದಲ ಭಾಗದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರೆಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಕೆಲವರು ನಾವು ಸಿನಿಮಾವನ್ನು […]
ಸೇನಾಧಿಕಾರಿಯಾಗಲು ಹ್ಯಾಟ್ರಿಕ್ ಹೀರೋ ರೆಡಿ: ಸೆಟ್ಟೇರಲಿದೆ ಒಂದು ಅದ್ಧೂರಿ ಆಕ್ಷನ್, ರೊಮ್ಯಾನ್ಸ್ ಚಿತ್ರ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಹೊಸ ಚಿತ್ರಕ್ಕಾಗಿ ಸೇನಾಧಿಕಾರಿಯಾಗಲು ಸಿದ್ದತೆ ನಡೆಸಿದ್ದಾರೆ. ಕನ್ನಡ ಮತ್ತು ತೆಲುಗು ದ್ವಿಭಾಷೆಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರಕ್ಕೆ ಹೈದಾರಾಬಾದ್ ಮೂಲದ ಉದ್ಯಮಿ ಶ್ರೀಕಾಂತ್ ಧುಲಿಪುಡಿ ಬಂಡವಾಳ ಹಾಕುತ್ತಿದ್ದು ಇದೊಂದು ಬಹುನಿರೀಕ್ಷಿತ ಚಿತ್ರ ಎನ್ನಲಾಗುತ್ತಿದೆ. ನವ ನಿರ್ದೇಶಕ ರಾಮ್ ಧುಲಿಪುಡಿ ಸಾರಥ್ಯದಲ್ಲಿ ಬರಲಿರುವ ಈ ಸಿನಿಮಾದಲ್ಲಿ ಆಕ್ಷನ್, ರೊಮ್ಯಾನ್ಸ್, ಸೆಂಟಿಮೆಂಟ್ ಎಲ್ಲವೂ ಇದೆಯಂತೆ. ಎಲ್ಲರಿಗೂ ಇಷ್ಟವಾಗುವ ಕತೆ, ಸನ್ನಿವೇಶಗಳಿವೆಯಂತೆ. ಕನ್ನಡ ಮತ್ತು ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ತಯಾರಿಸಲು ನಿರ್ಧೇಶಕರು ಮುಂದಾಗಿದ್ದಾರೆ. ಸೇನೆಯ ಯೂನಿಫಾರ್ಮ್ ನಲ್ಲಿ […]
ಒಂದಷ್ಟು ಪ್ರಶ್ನೆಗಳ ಜೊತೆಗೆ ಕಾಡುವ ಮೋಹಕ ಕಿರುಚಿತ್ರ “ಯಕ್ಷ ಪ್ರಶ್ನೆ”:ಅಂತದ್ದೇನಿದೆ ಈ ಸಿನಿಮಾದಲ್ಲಿ?

ನೂರಾರು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟಿಸುತ್ತ,ಪ್ರತಿಯೊಂದು ಪಾತ್ರವನ್ನು ಕಾಡಿಸುತ್ತ ತುಳುನಾಡಿನ ಸೊಗಡು,ಪರಂಪರೆ, ಪ್ರಾಕೃತಿಕ ವೈಭವಗಳನ್ನು ಕಣ್ಣೊಳಗೆ ಶಾಶ್ವತವಾಗಿ ಮೂಡಿಸುವ ಕಿರುಚಿತ್ರ “ಯಕ್ಷಪ್ರಶ್ನೆ”. ಸಂತೋಷ್ ಎಂ ಪುಚೇರ್ ಅವರು ನಿರ್ದೇಶಿಸಿರುವ “ಯಕ್ಷಪ್ರಶ್ನೆ ಜು.9 ರಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದೆ.ಆ ಕಿರುಚಿತ್ರದ ಕುರಿತು ಉಡುಪಿXPRESS ನ ಕಿರುನೋಟ ಈ ಹೊಸ ಕಾಲಘಟ್ಟದಲ್ಲಿ ಹೊಸ ಹೊಸ ಕನಸುಗಳನ್ನು ಹೊತ್ತು ಒಂದಷ್ಟು ಹೊಸ ಮನಸ್ಸುಗಳು ಸೇರಿ ನಿರ್ಮಿಸಿದ ಕಿರುಚಿತ್ರಗಳು ರಾಶಿ ರಾಶಿಯಾಗಿ ಬರುತ್ತಲೇ ಇದೆ.ಅವುಗಳಲ್ಲಿ ಒಂದಷ್ಟು ಕಿರುಚಿತ್ರಗಳು ಹಾಗೆ ಒಂದು ಹೀಗೆ […]