ಪುಷ್ಪಾ 2, ಜ. 30 ರಂದು OTT ಯಲ್ಲಿ ರಿಲೀಸ್: ದಾಖಲೆ ಮೊತ್ತಕ್ಕೆ ಸೇಲ್ ಆಯ್ತಾ ಸಿನಿಮಾ!

ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಸದ್ದು ಮಾಡುತ್ತಲೇ ಇದೆ. ಆದ್ರೂ ಚಿತ್ರ ರಿಲೀಸಾಗಿ ತುಂಬಾ ದಿನಗಳಾಗಿರುದರಿಂದ ಓಟಿಟಿಯಲ್ಲಿ ಆದಷ್ಟು ಬೇಗ ಚಿತ್ರ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ, ಈ ನಡುವೆ ಜನವರಿ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್ನಲ್ಲಿ ಪುಷ್ಪ 2 ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಯಾಗಿ 56 ದಿನಗಳಾದ ಬಳಿಕ ಓಟಿಟಿಗೆ ಬರಲಿದೆ. ಜನವರಿ 17 ರಂದು ಚಿತ್ರತಂಡ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಪುಷ್ಪ 2 ಗೆ […]
ನವಿರಾದ ಸಂಸಾರದ ಕತೆ ಹೇಳಲು ಹೊರಟ “ಟಾಮ್ and ಜೆರ್ರಿ ಸಂಸಾರ”: ರಿಲೀಸಾಯ್ತು ಚೆಂದದ ಟ್ರೈಲರ್

ಸಂಸಾರದ ಕತೆಯನ್ನು ಒಂದಷ್ಟು ಪ್ರೀತಿ, ಹಾಸ್ಯದ ಕಚಕುಳಿಯೊಂದಿಗೆ ನೀಡುವ ಮತ್ತು ಈ ಹೊಸ ತಲೆಮಾರಿನ ತಲ್ಲಣ ತವಕಗಳನ್ನು ನವಿರಾದ ಭಾವದೊಂದಿಗೆ ನಿರೂಪಿಸಲಿರುವ “ಟಾಮ್ & ಜೆರಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಒಂದಷ್ಟು ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ, ಸದ್ದು ಮಾಡುತ್ತಿದೆ. ಗಂಡ-ಹೆಂಡತಿಯ ದಾಂಪತ್ಯ ಜೀವನದ ಘಟನೆಗಳನ್ನು ಪೋಣಿಸುತ್ತ, ಹಾಸ್ಯದ ಕಚಕುಳಿ ನೀಡುತ್ತ ಮುಂದೇನಾಗಲಿದೆ, ಬರೀ ಇಷ್ಟನ್ನೇ ಅಲ್ಲ ಇನ್ನೂ ಏನನ್ನೋ ಹೇಳಲು ಸಿನಿಮಾ ತಂಡ ಪ್ರಯತ್ನಿಸಿದಂತೆ ಈ ಟ್ರೈಲರ್ ಚೂರು ಹಿಂಟ್ ಬಿಟ್ಟುಕೊಟ್ಟಿದೆ. ಆದ್ರೆ ಕುತೂಹಲ ಬಿಟ್ಟು […]
ಪ್ರೇಕ್ಷಕನ ಎದೆಯೊಳಗೆ ವಿಭಿನ್ನ ಲೋಕ ಸೃಷ್ಟಿಸಿದ “ದಸ್ಕತ್”: ನೋಡಿದ ಮೇಲೂ ಮತ್ತೆ ಮತ್ತೆ ಕಾಡುವ ಒಂದು ಅದ್ಬುತ ಅನುಭವ

ಬರಹ: ಪ್ರಸಾದ ಶೆಣೈ ” ದಸ್ಕತ್” ತನ್ನ ಗ್ರಾಮ್ಯ ಜೀವನದ ಸಮೃದ್ಧ ಫೀಲ್ ಕೊಡುವ, ನಮ್ಮೂರಿನ ಕತೆಯೇ ಇದು ಅನ್ನುವ ಭಾವ ಮೂಡಿಸುವ ಒಂದೊಳ್ಳೆಯ ತುಳು ಸಿನಿಮಾ. ಸತ್ವಯುತವಾದ ಕತೆಯನ್ನು ಅದೆಷ್ಟು ಸಹಜವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಕೇಪುಳಪಲ್ಕೆಯ ಹಸಿರು, ಅಲ್ಲಿನ ರಾತ್ರಿ, ಅಲ್ಲಿನ ಭಾಷೆ, ಅಲ್ಲಿನ ಹಾಡು, ಅಲ್ಲಿನ ಮೌನ, ಅಲ್ಲಿನ ಪಂಚಾಯತ್ ಕಚೇರಿ, ಎಲ್ಲಿಗೋ ಕರೆದೊಯ್ಯುವ ಅಲ್ಲಿನ ಪುಟ್ಟ ಪುಟ್ಟ ಮನೆಗಳು, ಅಲ್ಲಿನ ಆಚರಣೆ, ಅಲ್ಲಿನ ಹುಲಿವೇಷ, ಎಲ್ಲವೂ ನೋಡುತ್ತ ನೋಡುತ್ತ ನಮ್ಮದಾಗುತ್ತ ಹೋಗುತ್ತದೆ. ಅದೆಷ್ಟು […]
ಮುಂಬೈ:ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ದುಷ್ಕರ್ಮಿಗಳಿಂದ ಚಾಕು ಇರಿತ; ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಜ.16ರಂದು ನಡೆದ ಬಗ್ಗೆ ವರದಿಯಾಗಿದೆ. ಬಾಂದ್ರಾ (ಪಶ್ಚಿಮ) ದಲ್ಲಿರುವ ಅವರ ನಿವಾಸದೊಳಗೆ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ 2-3 ಬಾರಿ ಇರಿದ ಪರಿಣಾಮ ನಟ ಗಾಯಗೊಂಡಿದ್ದಾರೆ. ಮುಂಬೈ ನ ಲೀಲಾವತಿ ಆಸ್ಪತ್ರೆಯಲ್ಲಿ ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ.16ರ ಗುರುವಾರ ಮುಂಜಾನೆ 2:30 ರ ಸುಮಾರಿಗೆ ನಟ ತನ್ನ ಇತರ ಕುಟುಂಬ ಸದಸ್ಯರೊಂದಿಗೆ ತನ್ನ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತದೆ. […]
ಅಲ್ಲು ಅರ್ಜುನ್ ವಿರುದ್ಧ ಕೇಸ್ ಮೇಲೆ ಕೇಸ್: ಈಗ ಮತ್ತೊಂದು ಕೇಸ್ ದಾಖಲು

ಪುಷ್ಪ 2 ಖ್ಯಾತಿ ಅಲ್ಲು ಅರ್ಜುನ್ ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸಿನಿಮಾ ಮೂಲಕ ಅಲ್ಲ, ಇನ್ನೊಂದು ಕೇಸ್ ಮೂಲಕ, ಹೌದು. ಪುಷ್ಪಾ 2 ಸಿನಿಮಾದಲ್ಲಿ, ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಲ್ಲು ಅರ್ಜುನ್ ವಿರುದ್ದ ದೂರು ನೀಡಿದ್ದಾರೆ. ಪುಷ್ಪ 2’ ಚಿತ್ರದಲ್ಲಿರುವ ರಕ್ತಚಂದನ ಕಳ್ಳಸಾಗಣೆ ಮಾಡುವ ಪುಷ್ಪರಾಜ್ ಹಾಗೂ ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೇಖಾವತ್ ನಡುವಿನ ಘರ್ಷಣೆ ಬಗ್ಗೆ. ಹಾಗು ಚಿತ್ರದಲ್ಲಿ ಬಳಸಿರುವ ಬಹುತೇಕ […]