ಕಾಂತಾರ ಖ್ಯಾತಿಯ ನಟಿಯ ‘ಜುಗಲ್ ಬಂದಿ’ ಟ್ರೇಲರ್ ರಿಲೀಸ್

ಹೊಸಬರ ವಿನೂತನ ಪ್ರಯತ್ನವಿರುವ ‘ಜುಗಲ್ ಬಂದಿ’ (Jugal Bandi) ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ದಿವಾಕರ ಡಿಂಡಿಮ (Diwakar Dindama) ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಹೆಜ್ಜೆ ಇಡಲಿದ್ದು, ಅದಕ್ಕೂ ಮುನ್ನ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ ಚಿತ್ರತಂಡ. ಡಿಂಡಿಮ ಪ್ರೊಡಕ್ಷನ್ಸ್ ನಡಿ ನಿರ್ಮಾಣವಾದ ಈ ಚಿತ್ರ ಹಲವು ಕಥೆಗಳ ಜುಗಲ್ ಬಂದಿ. […]
ರಾಜಮೌಳಿ ಅವರ RRR ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ

ಲಾಸ್ ಏಂಜಲೀಸ್: ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ
ಶಿವರಾತ್ರಿ ಪ್ರಯುಕ್ತ ಅಪ್ಪನ ಜತೆ ಸೇರಿ ಮನೆಯಲ್ಲಿಯೇ ಹೋಮ ಹಾಕಿಸಿದ ರಾಗಿಣಿ ದ್ವಿವೇದಿ

ಸದಾ ಬೋಲ್ಡ್ ಲುಕ್‌ನಲ್ಲಿ ಕಂಗೊಳಿಸುವ ರಾಗಿಣಿ, ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಂಕ್ರಾಂತಿ ದಿನದಂದು ಸೀರೆಯುಟ್ಟು ದೇವಸ್ಥಾನಗಳಿಗೆ ತೆರಳಿದ್ದ ರಾಗಿಣಿ ಇದೀಗ,ಶಿವರಾತ್ರಿ ಪ್ರಯುಕ್ತ ಅಪ್ಪನ ಜತೆ ಸೇರಿ ಮನೆಯಲ್ಲಿಯೇ ಹೋಮ ಹಾಕಿಸಿದ ರಾಗಿಣಿ ದ್ವಿವೇದಿ. ಶಿವರಾತ್ರಿ ಪ್ರಯುಕ್ತ ಮನೆಯಲ್ಲಿ ಹೋಮ ಹವನ ಹಾಕಿಸಿದ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.(Instagram/ Ragini Dwivedi
2024 ರಲ್ಲಿ ಬರಲಿದೆ ಕಾಂತಾರ ಭಾಗ-1: ಪ್ರೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ

ಬಹುಚರ್ಚಿತ ಮತ್ತು ವಿಶ್ವದಾದ್ಯಂತ ಜನಮನ್ನಣೆ ಗಳಿಸಿದ ಕಾಂತಾರ ಚಿತ್ರವು ಯಶಸ್ವಿ ನೂರು ದಿನಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಕಾಂತಾರದ ಪೂರ್ವಾಭಾವಿ ಕಥೆಯನ್ನೊಳಗೊಂಡ ಕಾಂತಾರ ಪ್ರೀಕ್ವಲ್ ಅನ್ನು 2024ರಲ್ಲಿ ತೆರೆಗೆ ತರಲಿರುವುದಾಗಿ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಥಿಯೇಟರ್‌ಗಳಲ್ಲಿ “ಕಾಂತಾರ”ದ ಶತದಿನೋತ್ಸವವನ್ನು ಆಚರಿಸಲು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಬಹು ನಿರೀಕ್ಷಿತ ಚಿತ್ರದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಅಪಾರ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ತುಂಬಾ ಸಂತೋಷದಲ್ಲಿದ್ದೇವೆ. ದೈವದ ಆಶೀರ್ವಾದದಿಂದ […]
ತುಳು ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿದ ‘ಶಕಲಕ ಬೂಂ ಬೂಂ’: ಎರಡನೇ ವಾರವು ಭರ್ಜರಿ ಪ್ರದರ್ಶನ

ಜನ ಮೆಚ್ಚಿದ ಚಿತ್ರ ಶಕಲಕ ಬೂಂ ಬೂಂ ತುಳು ಚಿತ್ರರಂಗದಲ್ಲಿ ಏಕತಾನೆತೆಯಿಂದ ವಿಭಿನ್ನತೆಗೆ ಕೊಂಡೊಯ್ಯುವ ಸಾಹಸವನ್ನು ಯು.ಎನ್ ಸಿನಿಮಾಸ್ ಉಡುಪಿ ಮಾಡಿದಲ್ಲದೆ ಚಿತ್ರದ ಕಥೆ,ನಿರ್ಮಾಣ,ಛಾಯಗ್ರಹಣ,ಹಾಡುಗಳು ಎಲ್ಲರ ಮನ ಮುಟ್ಟುತ್ತಿರುವುದು ಅತೀವ ಸಂತಸದ ವಿಚಾರ. ಚಿತ್ರ ವೀಕ್ಷಿಸಿದ ಎಲ್ಲರೂ ಅತ್ಯುತ್ತಮ ಚಿತ್ರ ,ಒಳ್ಳೆಯ ಸಂದೇಶ ಹಾಗೂ ಸಾಮಾಜಿಕ ಕಳಕಳಿಯನ್ನು ಹೊತ್ತು ವಿಭಿನ್ನವಾಗಿದೆ ಎಂದು ಪ್ರಶಂಸಿರುವರು.ಶ್ರೀಶ ನಾಯಕ್ ಎಳ್ಳಾರೆ ಯುವ ನಿರ್ದೇಶಕ ನಿರ್ದೇಶಿಸಿದ ಪ್ರಥಮ ಚಿತ್ರವಾದರೂ ಅತ್ಯದ್ಭುತವಾಗಿ ನಿರ್ದೇಶಿಸಿರುವರು. ತುಳು ಚಿತ್ರರಂಗದಲ್ಲಿ ನೂತನ ಪ್ರತಿಭೆಗಳನ್ನು ರಂಗಕ್ಕೆ ಪರಿಚಯಿಸಿದಲ್ಲದೇ ನೈಜವಾದ ಅಭಿನಯ […]