‘ಎಲ್ಜಿಎಂ’ ಚಿತ್ರದ ಟೀಸರ್ ಔಟ್ : ಕ್ರಿಕೆಟ್ ದಂತಕಥೆ ಧೋನಿ ಚೊಚ್ಚಲ ನಿರ್ಮಾಣದ ಸಿನಿಮಾ
ಕೆಟ್ ದಂತಕಥೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ‘ಎಲ್ಜಿಎಂ’ ಚಿತ್ರದ ಮೂಲಕ ನಿರ್ಮಾಪಕರಾಗಿ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕ್ರಿಕೆಟಿಗ ಎಂಎಸ್ ಧೋನಿ ಅವರ ಮೊದಲ ನಿರ್ಮಾಣದ ‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತಮಿಳಿನ ‘ಲೆಟ್ಸ್ ಗೆಟ್ ಮ್ಯಾರೀಡ್’ (ಎಲ್ಜಿಎಂ) ಚಿತ್ರವನ್ನು ತಲೈವಾ ನಿರ್ಮಿಸುತ್ತಿದ್ದಾರೆ. ಮೈದಾನದಲ್ಲಿ ಬ್ಯಾಟ್ ಹಿಡಿದು ಫೋರ್, ಸಿಕ್ಸ್ ಬಾರಿಸುತ್ತಿದ್ದ ನಾಯಕ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ನಟ ಹರೀಶ್ ಕಲ್ಯಾಣ್ ಮತ್ತು ಇವಾನಾ […]
‘ಧೂಮಂ ಟ್ರೇಲರ್ ಬಿಡುಗಡೆಗೆ ಮುಹೂರ್ತ ನಿಗದಿ , ಹೊಂಬಾಳೆ ಫಿಲ್ಮ್ಸ್ನ ಬಹುನಿರೀಕ್ಷಿತ ‘..ಚಿತ್ರ
‘ಹೊಂಬಾಳೆ ಫಿಲ್ಮ್ಸ್’ ಕನ್ನಡದ ಪ್ರಖ್ಯಾತ ಸಿನಿಮಾ ಪ್ರೊಡಕ್ಷನ್ ಹೌಸ್. ಸದ್ಯ ಈ ಚಿತ್ರ ನಿರ್ಮಾಣ ಸಂಸ್ಥೆ ಮುಟ್ಟಿದ್ದೆಲ್ಲವೂ ಚಿನ್ನ.ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಧೂಮಂ’ ಸಿನಿಮಾದ ಟ್ರೇಲರ್ ಇನ್ನೆರಡು ದಿನಗಳಲ್ಲಿ ತೆರೆಕಾಣಲಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಮಲಯಾಳಂನ ಬಹುಬೇಡಿಕೆಯ ನಟ ಫಹಾದ್ ಫಾಸಿಲ್ ಜೊತೆ ಕೈಜೋಡಿಸಿದ್ದಾರೆ. ‘ಧೂಮಂ’ ಹೊಂಬಾಳೆ ಫಿಲ್ಮ್ಸ್ನ ಮುಂಬರುವ ಬಹುನಿರೀಕ್ಷಿತ ಚಿತ್ರ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಕೆಲ ದಿನಗಳ ಹಿಂದೆ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ […]
ರಾಯರು ಬಂದರು ಮನೆಗೆ ಕನ್ನಡದಲ್ಲಿ ಬರ್ತಿದೆ ಗುಜರಾತಿ ಸಿನೆಮಾ…
ಸುಧಾರಾಣಿ ಹಾಗೂ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಹಾಗೂ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದ ಮೈಸೂರು ಮಲ್ಲಿಗೆ ಸಿನಿಮಾದ ಗೀತೆ ಇದಾಗಿದೆ. ಮೈಸೂರು ಮಲ್ಲಿಗೆ ಚಿತ್ರ 1992ರಲ್ಲಿ ಬಿಡುಗಡೆಯಾಗಿತ್ತು. ಖ್ಯಾತ ನಿರ್ದೇಶಕ ಎಸ್. ನಾಗಾಭರಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸುಧಾರಾಣಿ, ಗಿರೀಶ್ ಕಾರ್ನಾಡ್, ಮಂಜು, ಸುಂದರರಾಜ್, ದತ್ತಣ್ಣ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಾಯರು ಬಂದರು ಮಾವನ ಮನೆಗೆ.. ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲೊಂದು. ಇದೇ ರಾಯರು ಬಂದರು ಮಾವನ ಮನೆಗೆ ಹಾಡಿನ ಸಾಲಿನ ಶೀರ್ಷಿಕೆಯಡಿ ಸಿನೆಮಾವೊಂದು […]
ಗೂಫಿ ಪೈಂಟಲ್ ಮಹಾಭಾರತದ ‘ಶಕುನಿ’ ಪಾತ್ರಧಾರಿ ನಿಧನ
ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಗೂಫಿ ಅವರನ್ನು ವಾರಗಳ ಹಿಂದೆ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಅವರು ಮೃತಪಟ್ಟಿದ್ದಾರೆ. ಅವರ ಸೋದರ ಸಂಬಂಧಿ ಹಿತೇನ್ ಪೈಂತಲ್ ಅವರು ಈ ನೋವಿನ ಸಂಗತಿ ಹಂಚಿಕೊಂಡಿದ್ದಾರೆ. ದುರದೃಷ್ಟವಶಾತ್ ಗೂಫಿ ಇನ್ನಿಲ್ಲ. ಅವರು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು. ಯಾವುದೇ ನೋವಿಲ್ಲದೆ ಅವರು ಮೃತಪಟ್ಟರು’ ಎಂದು ಹಿತೇನ್ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಗೂಫಿಗೆ ಅನಾರೋಗ್ಯ ಕೈ ಕೊಟ್ಟ ಬಗ್ಗೆ ವರದಿ ಆಗಿತ್ತು. ಅವರು ಆಸ್ಪತ್ರೆಯಿಂದ […]
ಮಲಯಾಳಂ ನಟ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ಮೃತ ; ಕಂಬನಿ ಮಿಡಿದ ಚಿತ್ರರಂಗ!
ಕೇರಳ: “ಸೋಮವಾರ ಮುಂಜಾನೆ 4.30ಕ್ಕೆ ಕೈಪಮಂಗಲಂನಲ್ಲಿ ಕೊಲ್ಲಂ ಸುಧಿ, ಉಲ್ಲಾಸ್ ಅರೂರ್, ಬಿನು ಅಡಿಮಾಲಿ ಮತ್ತು ಮಹೇಶ್ ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಟ್ರಕ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ. ಶೀಘ್ರವೇ ನಾಲ್ವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಕೊಲ್ಲಂ ಸುಧಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಉಳಿದ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸರು ಸ್ಥಳೀಯ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತ […]