ಮಕ್ಕಳಿಗಾಗಿ 10 ಸಾವಿರ ಟಿಕೆಟ್ ಖರೀದಿಸಿದ ರಾಮ್ ಚರಣ್

ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಬಹುಬೇಡಿಕೆ ನಟಿ ಕೃತಿ ಸನೋನ್ ಅಭಿನಯದ ‘ಆದಿಪುರುಷ್’ ಸಿನಿಮಾ ಬಿಡುಗಡೆಗೆ ಇನ್ನೈದು ದಿನಗಳು ಮಾತ್ರ ಬಾಕಿ ಉಳಿದಿವೆ. ರಾಮ್ ಚರಣ್ ಹಿಂದುಳಿದ ಮಕ್ಕಳು ಮತ್ತು ಅಭಿಮಾನಿಗಳಿಗೆ 10,000 ಟಿಕೆಟ್‌ಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಈ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಶಿಖರದಷ್ಟಿದೆ. ಸೆಲೆಬ್ರಿಟಿಗಳು ಸಹ ಓಂ ರಾವುತ್ ನಿರ್ದೇಶನದ ಪೌರಾಣಿಕ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ತೆಲಂಗಾಣದ ಸರ್ಕಾರಿ […]

ಒಂದು ವರ್ಷ ಪೂರೈಸಿದ ರಕ್ಷಿತ್​ ಶೆಟ್ಟಿ ಸಿನಿಮಾ: Charlie 777 ‘ಚಾರ್ಲಿ’ಯನ್ನು ಅಪ್ಪಿ ಒಪ್ಪಿಕೊಂಡ ದಿನ

Charlie 777: ಅಂದು ಜೂನ್​ 10, ಇಡೀ ಕರ್ನಾಟಕಕ್ಕೆ ‘ಚಾರ್ಲಿ’ ಪರಿಚಯವಾದ ದಿನ. ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿಯವರ ನಟನೆಗೆ ಕನ್ನಡಿಗರು ಮತ್ತೊಮ್ಮೆ ಮನಸೋತ ದಿನ.ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಅಭಿನಯದ ‘ಚಾರ್ಲಿ 777’ ಸಿನಿಮಾ ಒಂದು ವರ್ಷ ಪೂರೈಸಿದೆ. ಕಿರಣ್​ ರಾಜ್​ರಂತಹ ಅದ್ಭುತ ನಿರ್ದೇಶಕ ಸ್ಯಾಂಡಲ್​ವುಡ್​ಗೆ ಎಂಟ್ರಿಯಾದ ದಿನ​. ಹೌದು, ಕಳೆದ ವರ್ಷ ಇದೇ ದಿನದಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ ಚಿತ್ರ ‘ಚಾರ್ಲಿ 777’, ಇಂದು ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಯಾವುದೇ […]

ವಿನಯ್​ ರಾಜ್​ಕುಮಾರ್​ಗೆ ಸ್ಟಾರ್​ ತಾರೆಯರು ಸಾಥ್​ ‘ಗ್ರಾಮಾಯಣ’ ಚಿತ್ರಕ್ಕೆ ಅದ್ದೂರಿ ಚಾಲನೆ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್‌ಗಿರಿ ಗಿಟ್ಟಿಸಿಕೊಂಡಿರುವ ನಟ ವಿನಯ್ ರಾಜ್​ಕುಮಾರ್ ಸದ್ಯ ‘ಗ್ರಾಮಾಯಣ’ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಅಶ್ವಿನಿ ಪುನೀತ್ ರಾಜ್​ಕುಮಾರ್ ಕ್ಯಾಮರಾ ಚಾಲನೆ ಮಾಡಿದರು. ನಟ ವಿನಯ್​ ರಾಜ್​ಕುಮಾರ್ ಅಭಿನಯದ ‘ಗ್ರಾಮಾಯಣ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ನಟ ರಾಘವೇಂದ್ರ […]

ಚಿತ್ರಮಂದಿರಗಳಲ್ಲಿ ಆಗಸ್ಟ್ 11ಕ್ಕೆ OMG2 “ನಾವು ಬರುತ್ತಿದ್ದೇವೆ, ನೀವೂ ಬನ್ನಿ, “: ಅಕ್ಷಯ್ ಕುಮಾರ್

ಸಿನಿಮಾ ಯಶಸ್ಸು ವಿಚಾರವಾಗಿ ಕೊಂಚ ಹಿನ್ನೆಡೆ ಕಂಡಿರುವ ಬಾಲಿವುಡ್​ ಬೇಡಿಕೆ ನಟ ಅಕ್ಷಯ್​ ಕುಮಾರ್​ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘OMG 2’. ಆಗಸ್ಟ್ 11ಕ್ಕೆ ಅಕ್ಷಯ್​ ಕುಮಾರ್​ ಅಭಿನಯದ ‘OMG 2’ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಆಧ್ಯಾತ್ಮಿಕ ಸಿನಿಮಾವಾದ ಓ ಮೈ ಗಾಡ್ (Oh My God 2) ಚಿತ್ರದ ಮುಂದಿವರಿದ ಭಾಗ. ಈ ಸಿನಿಮಾ ಅಪ್​ಡೇಟ್ಸ್​ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಬಾಲಿವುಡ್​ ನಟ ಗುಡ್​ ನ್ಯೂಸ್ ಕೊಟ್ಟಿದ್ದಾರೆ. ಚಿತ್ರ ತಯಾರಕರು ಅಕ್ಷಯ್ ಕುಮಾರ್ ನಾಯಕರಾಗಿರುವ ತಮ್ಮ ಸಿನಿಮಾದ […]

ಹೈದರಾಬಾದ್​ನಲ್ಲಿ ನಾಳೆ ಅದ್ದೂರಿಯಾಗಿ ನಡೆಯಲಿದೆ ನಟ ವರುಣ್​ ತೇಜ್​ – ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ

ತೆಲುಗು ನಟ ವರುಣ್​ ತೇಜ್​ ಮತ್ತು ನಟಿ ಲಾವಣ್ಯ ತ್ರಿಪಾಠಿ ಮದುವೆ ವಿಚಾರ ಸದ್ಯ ಟಾಲಿವುಡ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ. ಇವರಿಬ್ಬರು ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ನಟ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ನಾಳೆ ಹೈದರಾಬಾದ್​ನಲ್ಲಿ ನಡೆಯಲಿದೆ. ಜೂನ್​ 9 ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಅದರಂತೆ ಈ ಜೋಡಿ ನಾಳೆ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. […]