‘ಕಿಚ್ಚ 46: ಸುದೀಪ್ ಮುಂದಿನ ಸಿನಿಮಾದ ಟೀಸರ್ಗೆ ಮುಹೂರ್ತ ಫಿಕ್ಸ್

ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಶೀಘ್ರದಲ್ಲೇ ಘೋಷಿಸುವುದಾಗಿ ನಟ ಸುದೀಪ್ ಹೇಳಿದ್ದರು. ಇದೀಗ ಕಿಚ್ಚನ 46ನೇ ಸಿನಿಮಾ ಚಿತ್ರತಂಡ ಹೊಸ ಅಪ್ಡೇಟ್ವೊಂದನ್ನು ನೀಡಿದೆ.’ಕಿಚ್ಚ 46′ ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿರೋ ವಿಚಾರ. ಕಳೆದ ಸುಮಾರು ಏಳೆಂಟು ತಿಂಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಅಂತೆ – ಕಂತೆಗಳು ಕೇಳಿಬರುತ್ತಲೇ ಇವೆ.ನಟ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಟೀಸರ್ ಜುಲೈ 2 ರಂದು ಬಿಡುಗಡೆಯಾಗಲಿದೆ. ‘ಕಿಚ್ಚ 46’ ಮೇಲೆ ಹೆಚ್ಚಿದ ನಿರೀಕ್ಷೆ: ಬಹು ಸಮಯದಿಂದ ಕನ್ನಡ […]
ನಿರ್ದೇಶಕ ಖ್ಯಾತ ನಟ, ಸಿವಿ ಶಿವಶಂಕರ್ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಾಹಿತಿಯೂ ಆಗಿದ್ದ ಸಿ.ವಿ. ಶಿವಶಂಕರ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೂನ್ 27 ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಸಿ.ವಿ. ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮಧ್ಯಾಹ್ನ ಊಟ ಮುಗಿಸಿ ಪೂಜೆ ಮಾಡಿದ ಬಳಿಕ ಹಾರ್ಟ್ ಅಟ್ಯಾಕ್ ಆಯಿತು’ ಎಂದು ‘ಯಾವುದೇ ಗಂಭೀರವಾದ ಆರೋಗ್ಯ […]
ಸ್ಯಾಂಡಲ್ವುಡ್ಗೆ ಸಂಚಿತ್ಎಂಟ್ರಿ: ‘ಜೂನಿಯರ್ ಕಿಚ್ಚ’ ಚೊಚ್ಚಲ ಸಿನಿಮಾಗೆ ಸ್ಟಾರ್ ನಟರ ಬೆಂಬಲ

ನಟ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ಚೊಚ್ಚಲ ಸಿನಿಮಾದ ಟೈಟಲ್ ಮತ್ತು ಕ್ಯಾರೆಕ್ಟರ್ ಗ್ಲಿಂಪ್ಸ್ ಅನಾವರಣಗೊಂಡಿದೆ. ಇವರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಹೆಸರಿಡದ ಚಿತ್ರಕ್ಕೆ ಅದ್ದೂರಿ ಪೂಜೆ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ದೊರಕಿದೆ. ಇದೀಗ ಸಂಚಿತ್ ನಟನೆ ಹಾಗೂ ನಿರ್ದೇಶನ ಮಾಡ್ತಿರುವ ಈ ಸಿನಿಮಾಗೆ ಟೈಟಲ್ […]
ಶೂಟಿಂಗ್ ಸಮಯದಲ್ಲಿ ಗಾಯಗೊಂಡ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್

ಕೊಚ್ಚಿ: ಸಿನಿಮಾ ಶೂಟಿಂಗ್ ವೇಳೆ ಮಲಯಾಳಂ ಚಿತ್ರ ನಟ ಪೃಥ್ವಿರಾಜ್ ಸುಕುಮಾರನ್ ಅವರ ಕಾಲಿಗೆ ಗಾಯವಾಗಿದೆ. ಮರಯೂರಿನಲ್ಲಿ ‘ವಿಲಾಯತ್ ಬುದ್ಧ’ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಪೃಥ್ವಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಶಸ್ತ್ರಚಿಕಿತ್ಸೆ ನಡೆಯಲಿದೆ. ಮರಯೂರು ಬಸ್ ನಿಲ್ದಾಣದಲ್ಲಿ ಘರ್ಷಣೆಯ ಚಿತ್ರೀಕರಣದ ವೇಳೆ ಪೃಥ್ವಿರಾಜ್ ಕಾಲು ಜಾರಿ ಬಿದ್ದಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನೊಳಗಿನ ಸಂಘರ್ಷವನ್ನು ಚಿತ್ರೀಕರಿಸುವ ವೇಳೆ ಈ ಘಟನೆ ಸಂಭವಿಸಿದೆ. ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ […]
.ಸಾಂಗ್ನಿಂದಲೇ ಸೌಂಡ್ ಮಾಡುತ್ತಿದೆ ‘ಬೆಂಗಳೂರು ಬಾಯ್ಸ್’

ಬೆಂಗಳೂರು: ‘.ಸಾಂಗ್ನಿಂದಲೇ ಸೌಂಡ್ ಮಾಡುತ್ತಿದೆ ‘ಬೆಂಗಳೂರು ಬಾಯ್ಸ್’ಬೆಂಗಳೂರು ಬಾಯ್ಸ್’ ಹಾಡುಗಳು ಹಾಗು ಟ್ರೈಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರ. ‘ಬೆಂಗಳೂರು ಬಾಯ್ಸ್’ ಚಿತ್ರದ ಯೌವ್ವನ ಎಂಬ ಹಾಡು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗುತ್ತಿದೆ. ಚಿತ್ರ ತಂಡ ಇದೇ ಖುಷಿಯಲ್ಲಿ ಪಾರ್ಟಿ ಮಾಡಿದೆ.ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್ ಹಾಗು ರೋಹಿತ್ ಮುಖ್ಯಭೂಮಿಕೆಯಲ್ಲಿರೋ ಬೆಂಗಳೂರು ಬಾಯ್ಸ್ ಚಿತ್ರದ ನನ್ನ ಯೌವನ ಎಂಬ ಹಾಡು ಹಿಟ್ ಆಗಿದ್ದು, ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಪಾಯಿಂಟ್ ಆಗಿದೆ.ಈ […]