ನಟ ಶಿವರಾಜ್​ಕುಮಾರ್​ ದಂಪತಿಯಿಂದ ಜೂ. 24ಕ್ಕೆ ಗ್ಲೋಬಲ್ ಮಾಲ್ ಡಿವೈನಿಟಿ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಪಂತರಪಾಳ್ಯದ ಮೈಸೂರು ರಸ್ತೆಯಲ್ಲಿ (ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ) ಗ್ಲೋಬಲ್ ಡಿವೈನಿಟಿ ಮಾಲ್ ಇದೇ ಜೂನ್ 24 ರಂದು ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ. ಸಿಲಿಕಾನ್​ ಸಿಟಿ, ಉದ್ಯಾನನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನಲ್ಲಿ ವಿಶ್ವದರ್ಜೆಯ ಗ್ಲೋಬಲ್ ಡಿವಿನಿಟಿ ಮಾಲ್ ಉದ್ಘಾಟನೆಗೆ ಸಜ್ಜಾಗಿದೆ.ಡಿಸಿಎಂ ಡಿಕೆಶಿ ಮಾಲೀಕತ್ವದ ಗ್ಲೋಬಲ್ ಡಿವೈನಿಟಿ ಮಾಲ್ ಜೂನ್ 24 ರಂದು ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಖ್ಯಾತ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ […]

ದ್ವಿಭಾಷೆಯಲ್ಲಿ ದ್ವಿವೇದಿ ಸಿನಿಮಾ ರಿಲೀಸ್ ಗೆ ರೆಡಿ, ರಾಗಿಣಿಯ ‘ಶೀಲಾ’ ಸಿನಿಮಾ ಫಸ್ಟ್​ ಲುಕ್

ಬೆಂಗಳೂರು: ಈ ಶೀಲ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವೀರ ಮದಕರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ, ತನ್ನದೇ ಬೇಡಿಕೆ ಹೊಂದಿರುವ ನಟಿ ರಾಗಿಣಿ ದ್ವಿವೇದಿ. ಸದ್ಯ ಕನ್ನಡ, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳನ್ನು ಮಾಡುತ್ತಿರುವ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುಭಾಷೆಯಲ್ಲಿ ನಟಿಸುತ್ತಿದ್ದ ಕನ್ನಡದ ನಟಿ ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಶೀಲಾ […]

₹10 ಲಕ್ಷ ವೆಚ್ಚದಲ್ಲಿ ಅಪ್ಪು ಅಭಿಮಾನಿಯಿಂದ ಗ್ರಂಥಾಲಯ ನಿರ್ಮಾಣ

ಮೈಸೂರು : ಅಪ್ಪು (ಪುನೀತ್ ರಾಜ್‌ಕುಮಾರ್) ಅಭಿಮಾನಿಯೊಬ್ಬರು ಮೈಸೂರಿನಲ್ಲಿ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ದಿ. ಪುನೀತ್​ ರಾಜ್‌ಕುಮಾರ್​ ಅವರು ಇಹಲೋಕ ತ್ಯಜಿಸಿ ಒಂದೂವರೆ ವರ್ಷ ಕಳೆಯುತ್ತಿದೆ. ನಟನ ಅಭಿಮಾನಿಗಳು ಒಂದಲ್ಲೊಂದು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ಮೂಲಕ ಅಪ್ಪು ಅಮರ ಎಂದು ಜಗತ್ತಿಗೆ ಸಾರುತ್ತಿದ್ದಾರೆ. ಟಿ. ನರಸೀಪುರ ಬಳಿಯ ಮೇದಿನಿ ಗ್ರಾಮದ ಎಂ.ಎನ್.ಕುಮಾರ್ ಎಂಬವರು ಗ್ರಂಥಾಲಯ ನಿರ್ಮಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಅಪ್ಪುವಿನ ಅಪ್ಪಟ ಅಭಿಮಾನಿಯಾಗಿರುವ ಇವರು ಅವರ ನೆನಪಿಗೋಸ್ಕರ 10 ಲಕ್ಷ ರೂಪಾಯಿ ಖರ್ಚಿನಲ್ಲಿ ಗ್ರಂಥಾಲಯ […]

ಅದೃಷ್ಟ ಪರೀಕ್ಷೆಗಿಳಿದ ತುಳುನಾಡಿನ ನಟ ರೂಪೇಶ್ ಶೆಟ್ಟಿ ‘ಸರ್ಕಸ್’ ಮೂಲಕ ಪ್ರೇಕ್ಷಕರ ಮುಂದೆ

ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಬಿಗ್ ಬಾಸ್ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟ ರೂಪೇಶ್ ಶೆಟ್ಟಿ ಇದೀಗ ತಮ್ಮ ಹೊಸ ಸಿನಿಮಾ ‘ಸರ್ಕಸ್’ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.ಕರಾವಳಿಯ ನಟ ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ಸಿನಿಮಾ ಇದೇ ಜೂನ್ 23ರಂದು ವಿಶ್ವಾದ್ಯಂತ ತೆರೆಕಾಣಲಿದೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ ಸರ್ಕಸ್’ ತುಳು ಸಿನಿಮಾ. ಈಗಾಗಲೇ ಕೆಲವು ತುಳು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಇವರು ಸರ್ಕಸ್ ಸಿನಿಮಾದಲ್ಲಿಯೂ ನಾಯಕ ನಟ. ಬಿಗ್ ಬಾಸ್ ವಿನ್ನರ್​​ ಆದ […]

World Yoga Day : ಯೋಗದಲ್ಲಿ ನಟಿ ರಾಗಿಣಿ ದ್ವಿವೇದಿ ಕಂಡಂತೆ

ಸ್ಯಾಂಡಲ್‌ವುಡ್ (Sandalwood) ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ನಿದ್ದೆಗೆಡಿಸುವ ನಟಿ ರಾಗಿಣಿ ಈ ಬಾರಿ ಯೋಗ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೋಗಗಳನ್ನು ಮಾಡಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.