ರಶ್ಮಿಕಾ ಮಂದಣ್ಣಗೆ 80 ಲಕ್ಷ ರೂಪಾಯಿ ಮೋಸ ಮಾಡಿದ ಮ್ಯಾನೇಜರ್ ಗೆ ಗೇಟ್ ಪಾಸ್
ಹೈದರಾಬಾದ್: ಆರೋಪಿ ಮ್ಯಾನೇಜರ್ ನಟಿಗೆ 80 ಲಕ್ಷ ರೂ. ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಆರೋಪಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.\ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮನ್ನು ವಂಚಿಸಿದ ಮ್ಯಾನೇಜರ್ ಓರ್ವನನ್ನು ಕೆಲಸದಿಂದ ವಜಾ ಮಾಡಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ಅವರು ತಮಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿ ಮನೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಟಿಯ ಪ್ರತಿದಿನದ […]
ಹಿಮ ರಾಷ್ಟ್ರದಲ್ಲಿ ಆದಿಪುರುಷ್ ಸಿನಿಮಾ ಪ್ರದರ್ಶನ ಬಂದ್ ಕಾರಣ ಸೀತೆ ಭಾರತವಲ್ಲ, ನೇಪಾಳದ ಮಗಳು
ಕಠ್ಮಂಡು(ನೇಪಾಳ):ಸೀತೆಯನ್ನು ಭಾರತದ ಮಗಳೆಂದು ಬಿಂಬಿಸಲಾಗಿದೆ. ಜಾನಕಿ ಜನಿಸಿದ್ದು ನೇಪಾಳದ ಜನಕಪುರದಲ್ಲಿ. ಈ ಬಗ್ಗೆ ಸುಳ್ಳು ಹೇಳಿದ್ದಕ್ಕೆ ದೇಶದಲ್ಲಿ ಸಿನಿಮಾ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ. ಸಂಭಾಷಣೆ ಮತ್ತು ಚಿತ್ರಕಥೆ ಕಾರಣಕ್ಕಾಗಿ ತೀವ್ರ ವಿವಾದಕ್ಕೀಡಾಗಿರುವ ತೆಲುಗು ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಪ್ರದರ್ಶನಕ್ಕೆ ನೇಪಾಳದಲ್ಲಿ ನಿಷೇಧಿಸಲು ನಿರ್ಧರಿಸಲಾಗಿದೆ.ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಆದಿಪುರುಷ್ ಸಿನಿಮಾ ಒಂದಲ್ಲೊಂದು ಕಾರಣಕ್ಕೆ ವಿವಾದಕ್ಕೆ ಸಿಲುಕುತ್ತಿದೆ. ಪ್ರಸಿದ್ಧ ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿ ಆದಿಪುರುಷ ಸಿನಿಮಾದಲ್ಲಿ ಸೀತೆಯ ಮೂಲದ ಬಗ್ಗೆ ಸುಳ್ಳು ಹೇಳಲಾಗಿದೆ. […]
ಶರ್ಟ್ಲೆಸ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫಿಟ್ನೆಸ್ ಐಕಾನ್ ಹೃತಿಕ್ ರೋಷನ್
ನಟ ಹೃತಿಕ್ ರೋಷನ್ ಹಿಂದಿ ಚಿತ್ರರಂಗದ ಫಿಟ್ನೆಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಬಾಲಿವುಡ್ ನಟರಲ್ಲಿ ಹೃತಿಕ್ ರೋಷನ್ ಮಾತ್ರ ನೋಟ, ಫಿಟ್‌ನೆಸ್, ನಟನೆ, ನೃತ್ಯ ಮತ್ತು ಆಯಕ್ಷನ್‌ನಲ್ಲಿ ಯಾವುದೇ ಹಾಲಿವುಡ್ ನಟರನ್ನಾದರೂ ಸೋಲಿಸಲು ಸಮರ್ಥರಾಗಿದ್ದಾರೆ.ಬಾಲಿವುಡ್ ನಟ ಹೃತಿಕ್ ರೋಷನ್ ಶರ್ಟ್ಲೆಸ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿಕೊಂಡಿರುವ ನಟ, ‘ಹಿಂದಿನ ದಿನ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಚಿತ್ರದಲ್ಲಿ, ಅವರು ಶರ್ಟ್ ರಹಿತವಾಗಿ ತಮ್ಮ ಬೆನ್ನನ್ನು ಪ್ರದರ್ಶಿಸುವುದನ್ನು ಕಾಣಬಹುದು. ಜೊತೆಗೆ ಕಪ್ಪು ಟೋಪಿ ಮತ್ತು ಕಪ್ಪು ಪ್ಯಾಂಟ್ […]
800 ಸಿನಿಮಾಗಳಲ್ಲಿ ನಟಿಸಿದ್ದ ಜನಪ್ರಿಯ ಮಲಯಾಳಂ ನಟ ಪೂಜಾಪುರ ರವಿ ಇನ್ನಿಲ್ಲ
800 ಚಲನಚಿತ್ರಗಳು, 4,000 ನಾಟಕ: ಐದು ದಶಕಗಳಿಂದ ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಸುಮಾರು 800 ಚಲನಚಿತ್ರಗಳು ಮತ್ತು ಸುಮಾರು 4,000 ನಾಟಕಗಳಲ್ಲಿ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದರು. ಇಂದು ಇಹಲೋಕ ತ್ಯಜಿಸಿದ್ದು, ರಂಗಭೂಮಿ, ಚಿತ್ರರಂಗ, ಅಭಿಮಾನಿ ಬಳಗದವರು ಕಣ್ಣೀರಿಟ್ಟಿದ್ದಾರೆ. ಜನಪ್ರಿಯ ನಟ ಪೂಜಾಪುರ ರವಿ ನಿಧನರಾಗಿದ್ದಾರೆ. ಇಡುಕ್ಕಿ ಜಿಲ್ಲೆಯ ಮರಯೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮರಯೂರಿನಲ್ಲಿರುವ ಮಗಳ ಮನೆಯಲ್ಲಿ ಜೀವನ ನಡೆಸುತ್ತಿದ್ದ ಇವರು ಭಾನುವಾರ ಬೆಳಗ್ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ […]
ರಾಮ್ಚರಣ್ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ : ಪ್ರಜ್ವಲ ಫೌಂಡೇಶನ್ ನಿಂದ ತೊಟ್ಟಿಲು ಉಡುಗೊರೆ
ಸೌತ್ನ ಮೆಗಾ ದಂಪತಿ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಪ್ರಜ್ವಲ ಫೌಂಡೇಶನ್ ವತಿಯಿಂದ ಸುಂದರ ತೊಟ್ಟಿಲನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಇದಕ್ಕಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗರ್ಭಾವಸ್ಥೆಯ ಕ್ಷಣಗಳನ್ನು ಆನಂದಿಸುತ್ತಿರುವ ಈ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಹುಟ್ಟುವ ಮಗುವಿಗೆ ಪ್ರಜ್ವಲ ಫೌಂಡೇಶನ್ ಸುಂದರವಾದ […]