ಜಾಹೀರಾತೊಂದರಲ್ಲಿ ಆರ್​ಆರ್​ಆರ್​ ಡೈರೆಕ್ಟರ್​ ರಾಜಮೌಳಿ ಸ್ಟೈಲಿಶ್​ ಲುಕ್:

ಬಾಹುಬಲಿ ಮತ್ತು ಆರ್‌ಆರ್‌ಆರ್‌ ನಂತಹ ಸಿನಿಮಾಗಳ ಮೂಲಕ ಇಡೀ ಜಗತ್ತೇ ತೆಲುಗು ಇಂಡಸ್ಟ್ರಿಯತ್ತ ನೋಡುವಂತೆ ಮಾಡಿದ್ದಾರೆ ಜಕಣ್ಣ. ಆರ್​ಆರ್​ಆರ್​, ನಾಟು ನಾಟು ಮೂಲಕ ತೆಲುಗು ಸಿನಿಮಾ ಖ್ಯಾತಿಯನ್ನು ಆಸ್ಕರ್‌ಗೆ ಕೊಂಡೊಯ್ದ ಈ ಸ್ಟಾರ್ ಡೈರೆಕ್ಟರ್ ಇದೀಗ ಮತ್ತೊಂದು ಮಾಸ್ಟರ್ ಪೀಸ್ ಮಾಡಲು ಸಿದ್ಧರಾಗಿದ್ದಾರೆ ನಿರ್ದೇಶಕ ರಾಜಮೌಳಿ ಖಾಸಗಿ ಮೊಬೈಲ್​​ ತಯಾರಿಕಾ ಕಂಪನಿ ಜಾಹೀರಾತಿನಲ್ಲಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜಮೌಳಿ ಆವರು ತಮ್ಮ ಅಮೋಘ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿ ಇಡೀ ಚಿತ್ರರಂಗದಲ್ಲಿ ಭದ್ರ ಸ್ಥಾನ […]

ಅನಿಮಲ್​​ ಸೆಟ್​ನಿಂದ ನಟನ ಫೋಟೋ ವೈರಲ್ – ರಗಡ್​ ಲುಕ್​ನಲ್ಲಿ ರಣ್​ಬೀರ್​ ಕಪೂರ್

ಈ ನಟರು ಮೊದಲ ಬಾರಿ ಒಟ್ಟಿಗೆ ನಟಿಸಿದ್ದು, ಅನಿಮಲ್ ಶೂಟಿಂಗ್​​​​ ಸೆಟ್​ನಿಂದ ನಟ ರಣ್​ಬೀರ್​ ಕಪೂರ್ ಅವರ ಫೋಟೋ ವೈರಲ್​ ಆಗಿದೆ. ಅನಿಮಲ್ ಶೂಟಿಂಗ್​​​​ ಸೆಟ್​ನಿಂದ ನಟ ರಣ್​ಬೀರ್​ ಕಪೂರ್​ ಅವರ ಫೋಟೋ ವೈರಲ್​​ ಆಗಿದೆ.ಅನಿಮಲ್​​ 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಕಬೀರ್ ಸಿಂಗ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್​ ಕಪೂರ್ ಸ್ಕ್ರೀನ್​ ಶೇರ್ ಮಾಡಿದ್ದಾರೆ.ಬಾಲಿವುಡ್‌ನ ಬಹುಬೇಡಿಕೆ, […]

ಮತ್ತೆ ಬಂತು ಕೌನ್ ಬನೇಗಾ ಸೀಸನ್​ 15 ಕರೋಡ್ಪತಿ! ಶೀಘ್ರದಲ್ಲೇ ಆರಂಭ

ಈ ಬಾರಿ ಕಾರ್ಯಕ್ರಮದ ನಿಯಮಗಳು ಮತ್ತು ಸ್ವರೂಪವನ್ನು ಬದಲಾಯಿಸಲಾಗಿದೆ ಎಂದು ಪ್ರೋಮೋದಿಂದ ತಿಳಿದುಬಂದಿದೆ.ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್, ಹಿರಿಯ ನಟ ಅಮಿತಾಭ್​​ ಬಚ್ಚನ್ ಮತ್ತೊಮ್ಮೆ ನಿಮ್ಮೆಲ್ಲರ ಮನೆಗೆ ಭೇಟಿ ನೀಡಲು ರೆಡಿ ಆಗಿದ್ದಾರೆ. ಬಿಗ್ ಬಿ ನಡೆಸಿಕೊಡುವ ಜನಪ್ರಿಯ ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಶೋ ಸದ್ಯದಲ್ಲೇ ಪ್ರಸಾರವಾಗಲಿದೆ.ಕೌನ್ ಬನೇಗಾ ಕರೋಡ್ಪತಿ ಸೀಸನ್​ 15ರ ಪ್ರೋಮೋ ಇಂದು ಅನಾವರಣಗೊಂಡಿದೆ. ಕೌನ್ ಬನೇಗಾ ಕರೋಡ್ಪತಿ 14 ಸೀಸನ್‌ಗಳು ಯಶಸ್ವಿಯಾಗಿ ನಡೆದಿದ್ದು, 15ನೇ ಸೀಸನ್​ನೊಂದಿಗೆ ಬಿಗ್​ ಬಿ ಮರಳುತ್ತಿದ್ದಾರೆ. […]

ರಿಷಬ್ ಶೆಟ್ಟಿಗೆ ಅಮೆರಿಕದಲ್ಲಿ‌ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ

‘ಕಾಂತಾರ’ ಸಿನಿಮಾದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಚಿತ್ರದ ಸಕ್ಸಸ್​ ಬಳಿಕ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಜೊತೆ ಅಮೆರಿಕದ ವಾಷಿಂಗ್ಟನ್​ನ ಸಿಯಾಟಲ್​ಗೆ ಭೇಟಿ ನೀಡಿದ್ದರು‌. ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿಗೆ ಇದೀಗ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರೆತಿದೆ. ಈ ವೇಳೆ, ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್​ನಲ್ಲಿ ನಟ ರಿಷಬ್ ಅವರಿಗೆ “ವಿಶ್ವ ಶ್ರೇಷ್ಠ […]

ಮಾಂಕ್ ದಿ ಯಂಗ್ ಟೀಸರ್​ ಅನಾವರಣ

ಮೂರು ತಿಂಗಳಲ್ಲಿ ಸಿನಿಮಾ ತೆರೆಗೆ: ಈ ಚಿತ್ರದ ನಿರ್ದೇಶಕ ಮಾಸ್ಚಿತ್ ಸೂರ್ಯ‌ ಮಾತನಾಡಿ, ‌ಮಾಂಕ್ ದಿ ಯಂಗ್, ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಇಂದು ಟೀಸರ್ ರಿಲೀಸ್​​ ಮಾಡಿದ್ದೇವೆ. ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಹೊಸಬರ ಮಾಂಕ್ ದಿ ಯಂಗ್ ಟೀಸರ್​​ ರಿಲೀಸ್​ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದೆ. ಬಣ್ಣದ ಲೋಕದಲ್ಲಿ ಹೊಸಬರ ಪ್ರಯತ್ನಕ್ಕೆ ವೀಕ್ಷಕರು, ಕನ್ನಡ ಸಿನಿ ಗಣ್ಯರ ಬೆಂಬಲ ಸಿಗುತ್ತಿದೆ. “ಮಾಂಕ್ ದಿ ಯಂಗ್” ಚಿತ್ರ ಹೊಸಬರ ಸಿನಿಮಾ ಆಗಿದ್ದು ಬಹುಭಾಷೆಗಳಲ್ಲಿ […]