ಮತ್ತೆ ಬಂತು ಕೌನ್ ಬನೇಗಾ ಸೀಸನ್ 15 ಕರೋಡ್ಪತಿ! ಶೀಘ್ರದಲ್ಲೇ ಆರಂಭ
ಈ ಬಾರಿ ಕಾರ್ಯಕ್ರಮದ ನಿಯಮಗಳು ಮತ್ತು ಸ್ವರೂಪವನ್ನು ಬದಲಾಯಿಸಲಾಗಿದೆ ಎಂದು ಪ್ರೋಮೋದಿಂದ ತಿಳಿದುಬಂದಿದೆ.ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್, ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತೊಮ್ಮೆ ನಿಮ್ಮೆಲ್ಲರ ಮನೆಗೆ ಭೇಟಿ ನೀಡಲು ರೆಡಿ ಆಗಿದ್ದಾರೆ. ಬಿಗ್ ಬಿ ನಡೆಸಿಕೊಡುವ ಜನಪ್ರಿಯ ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಶೋ ಸದ್ಯದಲ್ಲೇ ಪ್ರಸಾರವಾಗಲಿದೆ.ಕೌನ್ ಬನೇಗಾ ಕರೋಡ್ಪತಿ ಸೀಸನ್ 15ರ ಪ್ರೋಮೋ ಇಂದು ಅನಾವರಣಗೊಂಡಿದೆ. ಕೌನ್ ಬನೇಗಾ ಕರೋಡ್ಪತಿ 14 ಸೀಸನ್‌ಗಳು ಯಶಸ್ವಿಯಾಗಿ ನಡೆದಿದ್ದು, 15ನೇ ಸೀಸನ್ನೊಂದಿಗೆ ಬಿಗ್ ಬಿ ಮರಳುತ್ತಿದ್ದಾರೆ. […]
ರಿಷಬ್ ಶೆಟ್ಟಿಗೆ ಅಮೆರಿಕದಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ
‘ಕಾಂತಾರ’ ಸಿನಿಮಾದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಚಿತ್ರದ ಸಕ್ಸಸ್ ಬಳಿಕ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಜೊತೆ ಅಮೆರಿಕದ ವಾಷಿಂಗ್ಟನ್ನ ಸಿಯಾಟಲ್ಗೆ ಭೇಟಿ ನೀಡಿದ್ದರು. ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿಗೆ ಇದೀಗ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರೆತಿದೆ. ಈ ವೇಳೆ, ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ನಲ್ಲಿ ನಟ ರಿಷಬ್ ಅವರಿಗೆ “ವಿಶ್ವ ಶ್ರೇಷ್ಠ […]
ಮಾಂಕ್ ದಿ ಯಂಗ್ ಟೀಸರ್ ಅನಾವರಣ
ಮೂರು ತಿಂಗಳಲ್ಲಿ ಸಿನಿಮಾ ತೆರೆಗೆ: ಈ ಚಿತ್ರದ ನಿರ್ದೇಶಕ ಮಾಸ್ಚಿತ್ ಸೂರ್ಯ ಮಾತನಾಡಿ, ಮಾಂಕ್ ದಿ ಯಂಗ್, ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಇಂದು ಟೀಸರ್ ರಿಲೀಸ್ ಮಾಡಿದ್ದೇವೆ. ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಹೊಸಬರ ಮಾಂಕ್ ದಿ ಯಂಗ್ ಟೀಸರ್ ರಿಲೀಸ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದೆ. ಬಣ್ಣದ ಲೋಕದಲ್ಲಿ ಹೊಸಬರ ಪ್ರಯತ್ನಕ್ಕೆ ವೀಕ್ಷಕರು, ಕನ್ನಡ ಸಿನಿ ಗಣ್ಯರ ಬೆಂಬಲ ಸಿಗುತ್ತಿದೆ. “ಮಾಂಕ್ ದಿ ಯಂಗ್” ಚಿತ್ರ ಹೊಸಬರ ಸಿನಿಮಾ ಆಗಿದ್ದು ಬಹುಭಾಷೆಗಳಲ್ಲಿ […]
ವಾಲ್ಮೀಕಿ ರಾಮಾಯಣದ ಮೂಲ ರಚನೆಗೆ ಧಕ್ಕೆ ಆರೋಪ: ಆದಿಪುರುಷ್ ಗೆ ನಿಷೇಧ ಕೋರಿ ಸುಪ್ರೀಂ ಕೋರ್ಟ್ ಗೆ ಪಿಐಎಲ್
ನವದೆಹಲಿ: ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಓಂ ರಾವುತ್ ಅವರ ‘ಆದಿಪುರುಷ್’ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಭಾರತದ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಚಲನಚಿತ್ರದಲ್ಲಿ ಚಿತ್ರಿಸಲಾದ ಹಿಂದೂಗಳು ಮತ್ತು ವಿವಿಧ ದೇವತೆಗಳನ್ನು “ಅವರ ಮೂಲಭೂತ ಮೌಲ್ಯಗಳು ಮತ್ತು ಪಾತ್ರಗಳನ್ನು ನಾಶಪಡಿಸುವ” ಮತ್ತು ವಾಲ್ಮೀಕಿ ರಾಮಾಯಣದ ‘ಮೂಲ ರಚನೆ’ಯನ್ನು ಮಾರ್ಪಡಿಸುವ ಮೂಲಕ ಭಕ್ತರ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಿನಿಮಾದಲ್ಲಿನ ಕೆಲವು ಸಂಭಾಷಣೆಗಳಿಗೆ ಅರ್ಜಿದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ಗಲ್ಲಿಯ ಹುಡುಗರು’ ಮಾತ್ರ […]
‘ಕಿಚ್ಚ 46: ಸುದೀಪ್ ಮುಂದಿನ ಸಿನಿಮಾದ ಟೀಸರ್ಗೆ ಮುಹೂರ್ತ ಫಿಕ್ಸ್
ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಶೀಘ್ರದಲ್ಲೇ ಘೋಷಿಸುವುದಾಗಿ ನಟ ಸುದೀಪ್ ಹೇಳಿದ್ದರು. ಇದೀಗ ಕಿಚ್ಚನ 46ನೇ ಸಿನಿಮಾ ಚಿತ್ರತಂಡ ಹೊಸ ಅಪ್ಡೇಟ್ವೊಂದನ್ನು ನೀಡಿದೆ.’ಕಿಚ್ಚ 46′ ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿರೋ ವಿಚಾರ. ಕಳೆದ ಸುಮಾರು ಏಳೆಂಟು ತಿಂಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಅಂತೆ – ಕಂತೆಗಳು ಕೇಳಿಬರುತ್ತಲೇ ಇವೆ.ನಟ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಟೀಸರ್ ಜುಲೈ 2 ರಂದು ಬಿಡುಗಡೆಯಾಗಲಿದೆ. ‘ಕಿಚ್ಚ 46’ ಮೇಲೆ ಹೆಚ್ಚಿದ ನಿರೀಕ್ಷೆ: ಬಹು ಸಮಯದಿಂದ ಕನ್ನಡ […]