ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿದ ರಾಜಮೌಳಿ: ಆತ್ಮ ತೃಪ್ತಿಯ ಅನುಭೂತಿ ಎಂದ ಸ್ಟಾರ್ ಡೈರೆಕ್ಟರ್
ಚೆನ್ನೈ: ಚಿತ್ರ ನಿರ್ದೇಶನದ ಗೌಜಿ ಗದ್ದಲ ಮತ್ತು ಆಸ್ಕರ್ ಪ್ರಶಸ್ತಿಯ ವ್ಯಸ್ತ ವೇಳಾಪಟ್ಟಿಯ ನಂತರ ಬಿಡುವು ಪಡೆದುಕೊಂಡ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಬಹುದಿನದ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುವುದು ಅವರ ಬಹು ದಿನಗಳ ಆಸೆಯಾಗಿದ್ದು, ಇದೀಗ ತಮ್ಮ ಕುಟುಂಬದೊಂದಿಗೆ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. Wanted to do a road trip in central Tamilnadu for a long time. Thanks to my daughter who wanted […]
ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಟೀಸರ್ ಇಂದು ಅನಾವರಣ
ಭಾನುವಾರದಂದು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರು ಚಲನಚಿತ್ರಕ್ಕೆ ಸಂಬಂಧಿಸಿದ ಸಣ್ಣ ತುಣುಕನ್ನು ಹಂಚಿಕೊಂಡಿದ್ದರು. ಭಗವಾನ್ ಶಿವನ ಪಾತ್ರದ ತಮ್ಮ ನೋಟವನ್ನು ಅನಾವರಣಗೊಳಿಸಿದ್ದರು. ಟೀಸರ್ ಬಿಡುಗಡೆ ದಿನಾಂಕವನ್ನೂ ಸಹ ಈ ಸ್ಪೆಷಲ್ ವಿಡಿಯೋದೊಂದಿಗೆ ಬಹಿರಂಗಪಡಿಸಿದ್ದರು.2011ರ ಸೂಪರ್ ಹಿಟ್ ಚಿತ್ರ ‘ಓ ಮೈ ಗಾಡ್’ನ ಮುಂದುವರಿದ ಭಾಗ ಇದು. ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲು ಸಜ್ಜಾಗಿರುವ ಈ ಚಿತ್ರದ ಟೀಸರ್ ಇಂದು ಅನಾವರಣಗೊಂಡಿದೆ.2023ರ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘OMG 2’ ಕೂಡ ಒಂದು. ಬಾಲಿವುಡ್ ಕಿಲಾಡಿ ಅಕ್ಷಯ್ […]
ವಿಜಯ ರಾಘವೇಂದ್ರ – ಧರ್ಮ ಕೀರ್ತಿ ಆಕ್ಟಿಂಗ್ ತ್ರಿಕೋನ ಪ್ರೇಮಕಥೆಯ ಓ ಮನಸೇ ಚಿತ್ರ
ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಅಲ್ಲದೇ ಹರೀಶ್ ರಾಯ್, ಸಾಧುಕೋಕಿಲ, ಶೋಭ್ ರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ(ಟಗರು ಸರೋಜ) ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚಿತ್ರದ ಮಾರ್ಗದರ್ಶಕರಾದ ಹಿರಿಯ ನಿರ್ಮಾಪಕ ಅಣಜಿ ನಾಗರಾಜ್, ಸಾಯಿಕೃಷ್ಣ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ರಮೇಶ್ ಅದರಂಗಿ ಕಥೆ ಬರೆದಿರುವ ಈ ಚಿತ್ರಕ್ಕೆ ಎಂ. ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಬಂಡೆ ಚಂದ್ರು […]
‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಕೆ ,ಚಿತ್ರ ತಂಡದಿಂದ ಬಿರಿಯಾನಿ, ಪುಳಿಯೋಗರೆ ಪಾರ್ಟಿ
ಒಳ್ಳೆಯ ಸಿನಿಮಾಗಳು ತೆರೆ ಕಂಡಾಗ ಖಂಡಿತವಾಗಿಯೂ ಜನರು ಬೆಂಲಿಸುತ್ತಾರೆ ಅನ್ನೋ ನಂಬಿಕೆ ಗಾಂಧಿನಗರದಲ್ಲಿದೆ. ಅದಕ್ಕೆ ‘ಡೇರ್ ಡೆವಿಲ್ ಮುಸ್ತಫಾ’ ಉದಾಹರಣೆ. ಈ ಸಿನಿಮಾ ಮೇ 19ಕ್ಕೆ ತೆರೆ ಕಂಡಿದೆ. ಚಿತ್ರಕ್ಕೆ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ನಡಿ ಅರ್ಪಿಸಿದ್ದು, ಕೆ.ಆರ್.ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ […]
ಭರ್ಜರಿ ತಯಾರಿ , ದಿನಪೂರ್ತಿ ಕಾರ್ಯಕ್ರಮ : ಶಿವಣ್ಣನ ಹುಟ್ಟುಹಬ್ಬ
ಕೋವಿಡ್ ಆತಂಕ ಆನಂತರ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ದುಃಖದಿಂದಾಗಿ ನಟ ಶಿವರಾಜಕುಮಾರ್, ಸುಮಾರು ನಾಲ್ಕು ವರ್ಷಗಳಿಂದ ಅದ್ಧೂರಿ ಬರ್ತ್ಡೇ, ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸಾರ್ವಜನಿಕವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲು ಶಿವರಾಜಕುಮಾರ್ ಸಮ್ಮತಿಸಿದ್ದು, ಅದಕ್ಕಾಗಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ. ದಿನಪೂರ್ತಿ ಕಾರ್ಯಕ್ರಮ: ಜು.11ರ ಸಂಜೆಯಿಂದಲೇ ಶಿವರಾಜಕುಮಾರ್ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ನಿವಾಸದಲ್ಲಿ ರಾತ್ರಿ 12 ಗಂಟೆಗೆ ಬೃಹತ್ ಕೇಕ್ ಕತ್ತರಿಸಲಾಗುತ್ತಿದ್ದು, […]