ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ‘ಮಟ್ಕಾ’: ಮೆಗಾ ಪ್ರಿನ್ಸ್ ವರುಣ್ ತೇಜ್

‘ಮಟ್ಕಾ’ ಪೋಸ್ಟರ್ ವರುಣ್ ತೇಜ್ ನಟನೆಯ 14ನೇ ಸಿನಿಮಾಗೆ ಮಟ್ಕಾ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಇದು ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿ ಕೆರಿಯರ್ನ ಅತಿ ಹೆಚ್ಚು ಬಜೆಟ್‌ನ ಚಿತ್ರ ಇದು ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿ ಹುಟ್ಟಿದೆ.ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ […]
ನಾಳೆ (ಜು.28 )ಸಂಜೆ 4 ಗಂಟೆಗೆ ಯೂಟ್ಯೂಬ್ ನಲ್ಲಿ ‘ದೈವಂ ಶರಣಂ ಗಚ್ಛಾಮಿ’ ಅಫೀಷಿಯಲ್ ವೀಡಿಯೋ ಬಿಡುಗಡೆ

ಭರ್ಗ ಸಿನಿಮಾಸ್ ಪ್ರಸ್ತುತ ಪಡಿಸುವ ದೈವಂ ಶರಣಂ ಗಚ್ಛಾಮಿ ಚಿತ್ರದ ಅಫೀಷಿಯಲ್ ವೀಡಿಯೋ ನಾಳೆ (ಜು.28) ಸಂಜೆ 4 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಸಿನೆಮಾಗಳಾದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಚಮಕ್ ಮತ್ತು ಬಜಾರ್ ನಂತಹ ಸೂಪರ್ ಹಿಟ್ ನಿರ್ದೇಕ ಸಿಂಪಲ್ ಸುನಿ, ‘ದೈವಂ ಶರಣಂ ಗಚ್ಛಾಮಿ’ ಚಿತ್ರವನ್ನು ನೋಡಿ ಮೆಚ್ಚಿಕೊಂಡು ಶುಭ ಹಾರೈಸಿದ್ದಾರೆ. ವಿಜಯ್ ಮಂಜುನಾಥ್ ನಿರ್ದೇಶನ, ಸಹ ನಿರ್ದೇಶಕರಾಗಿ ರಾಜ್ ಕನಕ, ಡಿಒಪಿ ಮತ್ತು ಸಂಕಲನ ಸುಮಂತ್ ಆಚಾರ್ಯ, ಲೋಕಿ ತವಸ್ಯ […]
ರಾಗಿಣಿ ದ್ವಿವೇದಿ ತಮ್ಮ ನೆಚ್ಚಿನ ನಾಯಕನ ನಟ ಮೋಹನ್ ಲಾಲ್ ಅವರ ಜೊತೆಗೆ ಫೋಟೋ

ರಾಗಿಣಿ ದ್ವಿವೇದಿ ತಮ್ಮ ನೆಚ್ಚಿನ ನಾಯಕನ ನಟ ಮೋಹನ್ ಲಾಲ್ ಅವರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ಫೋಟೋಗಳನ್ನೆ ಈಗ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲದೇ ಸಿನಿಮಾ ತಂಡದ ಇತರ ಸದಸ್ಯರ ಜೊತೆಗೆ ರಾಗಿಣಿ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ರಾಗಿಣಿ ದ್ವಿವೇದಿ ತಮ್ಮ ಇಷ್ಟದ ಡೈರೆಕ್ಟರ್ ನಂದ್ ಕಿಶೋರ್ ಅವರ ಜೊತೆಗೂ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನ ಕೂಡ ಇಲ್ಲಿ ಶೇರ್ ಮಾಡಿರೋದು ವಿಶೇಷ ಅನಿಸುತ್ತದೆ. ಈ ಮೂಲಕ ತಮ್ಮ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಚಿತ್ರಣವನ್ನ ರಿವೀಲ್ […]
ಆರ್‌ಆರ್‌ಆರ್ ಸೀಕ್ವೆಲ್ ಕಥೆ ಆಫ್ರಿಕಾದಲ್ಲಿ ನಡೆಯಲಿದೆ – ಸ್ಕ್ರಿಪ್ಟ್ ಕೆಲಸ ಚುರುಕು

ವಿಶ್ವದಾದ್ಯಂತ ಸದ್ದು ಮಾಡಿ, ದೊಡ್ಡ ಮಟ್ಟಿನ ಯಶಸ್ಸಿಗೆ ಸಾಕ್ಷಿಯಾದ ಸಿನಿಮಾ. ಎಸ್‌ಎಸ್ ರಾಜಮೌಳಿ ನಿರ್ದೇಶನ ಅದ್ಭುತ ನಿರ್ದೇಶನ ಶೈಲಿ, ರಾಮ್ ಚರಣ್ – ಜೂ. ಎನ್ಟಿಆರ್ ಅಮೋಘ ಅಭಿನಯದ ಕಾಂಬಿನೇಶನ್ನಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಈಗಲೂ ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾ ‘ಆರ್‌ಆರ್‌ಆರ್’ ಭಾರತದ ಬ್ಲಾಕ್ಬಸ್ಟರ್ ಸಿನಿಮಾ. 2022ರಲ್ಲಿ ಭಾರತೀಯ ಚಿತ್ರರಂಗದ ಕೀರ್ತಿಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿದ ಸೂಪರ್ ಹಿಟ್ ಚಿತ್ರ.ಆರ್‌ಆರ್‌ಆರ್ ಸೀಕ್ವೆಲ್ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ […]
ಕರಾವಳಿ ತೀರದಲ್ಲಿ ಸಾಗುವ ವೈವಿಧ್ಯ ದೃಶ್ಯಾವಳಿಯ ‘ಆರ’: ಜುಲೈ 28 ರಂದು ಬೆಳ್ಳಿತೆರೆಗೆ; ಕಾಡಿನ ಕಾಡುವ ಕಥೆಯಿದು…

ಉಡುಪಿ: ಕರಾವಳಿ ತೀರದ ಸುಂದರ ಸೊಗಡಿನ ಕಥಾ ಹಂದರದ ಕನ್ನಡ ಚಲನಚಿತ್ರ “ಆರ”ದ ಅಧಿಕೃತ ಟೀಸರ್ ಬಿಡುಗಡೆಯಾಗಿದೆ. ಆರ , ಮುಗ್ಧ ಜೀವನದಲ್ಲಿ ಸುಂದರ ದೈವಿಕ ಹಸ್ತಕ್ಷೇಪದ ದೇವರ ನಾಟಕದ ಕಥಾನಕವನ್ನು ಹೊಂದಿದೆ. ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ ಮತ್ತು ಸುಜಾತಾ ಚಡಗ, ಚಂದ್ರಶೇಖರ್ ಮತ್ತು ರೋಹಿತ್ ನಿರ್ಮಿಸಿದ್ದಾರೆ. ರೋಹಿತ್, ದೀಪಿಕಾ ಆರಾಧ್ಯ, ಆನಂದ್ ನೀನಾಸಂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಹಾಡುಗಳನ್ನು ಗಿರೀಶ್ ಹೋತೂರ್ ಸಂಯೋಜಿಸಿದ್ದಾರೆ. ಅಜಿತ್ ಕೇಶವ, ರೋಹಿತ್, ರಾಕೇಶ್, ಮನು ದೇವರಹಳ್ಳಿ ಸಾಹಿತ್ಯ ಬರೆದಿದ್ದಾರೆ. […]