ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜನಿಕಾಂತ್​ ಜೈಲರ್‌ ಸಿನಿಮಾ ನೋಡಲು ರಜೆ

ಭಾರತ ಮಾತ್ರವಲ್ಲ, ವಿಶ್ವದ ನಾನಾ ಕಡೆಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಯಾರೆಂಬ ಪ್ರಶ್ನೆಗೆ ಬಹುತೇಕ ಸಿನಿರಸಿಕರ ಬಾಯಲ್ಲಿ ಮೊದಲು ಬರುವ ಉತ್ತರವೇ ರಜನಿಕಾಂತ್​. ಹೀಗಿರುವಾಗ ಅವರ ಹೊಸ ಸಿನಿಮಾಗಳ ಬಗ್ಗೆ ಫ್ಯಾನ್ಸ್​ ಕ್ರೇಜ್​ ಹೇಗಿರಬಹುದು ಎಂಬುದನ್ನು ನೀವೇ ಒಮ್ಮೆ ಊಹಿಸಿ. ತಮ್ಮ ಮೆಚ್ಚಿನ ನಟನ ಹೊಚ್ಚ ಹೊಸ ಸಿನಿಮಾ ವೀಕ್ಷಿಸಲು ಇದೀಗ ಕಟ್ಟಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.ರಜನಿಕಾಂತ್​. ಈ ಹೆಸರು ಕೇಳುತ್ತಿದ್ದಂತೆ ವಿಶಿಷ್ಟ ಮ್ಯಾನರಿಸಂ ಹೊಂದಿರುವ ವ್ಯಕ್ತಿಯೊಬ್ಬರು ಥಟ್ಟನೆ ನೆನಪಾಗುತ್ತಾರೆ.ಜೈಲರ್​ ಸಿನಿಮಾ ವೀಕ್ಷಿಸಲು ಚೆನ್ನೈ, ಮಧುರೈ […]

ಸ್ಪಂದನಾ ವಿಜಯ್​ ಪಾರ್ಥಿವ ಶರೀರ ಇಂದು ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ

ಚಂದನವನದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ಮಂಗಳವಾರ (ಇಂದು) ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಅದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಈಗಾಗಲೇ ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರಿಪೋರ್ಟ್​ ಬಂದ ತಕ್ಷಣವೇ ಮಾಧ್ಯಮಕ್ಕೆ ಕೊಡುತ್ತೇವೆ ಎಂದು ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್​ಸಿ ಬಿ.ಕೆ ಹರಿಪ್ರಸಾದ್​ ಮಾಹಿತಿ ನೀಡಿದ್ದಾರೆ. ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್​ಸಿ ಬಿ.ಕೆ ಹರಿಪ್ರಸಾದ್​ ಮಾಹಿತಿ : […]

‘ಶೆಫ್ ಚಿದಂಬರ’ ನಾದ ಜೊತೆಜೊತೆಯಲಿ ಖ್ಯಾತಿಯ ಆರ್ಯವರ್ಧನ್; ಮತ್ತೆ ಬೆಳ್ಳೆತೆರೆಯತ್ತ ಪಯಣಿಸಿದ ಅನಿರುದ್ದ ಜಟ್ಕಾರ್

ಬೆಳ್ಳಿತೆರೆಯಿಂದ ಕಿರುತೆರೆಗೆ ಪಾದಾರ್ಪಣೆ ಮಾಡಿ ಜನಮನ ಗೆದ್ದ ಜೊತೆಜೊತೆಯಲಿ ಖ್ಯಾತಿಯ ಆರ್ಯವರ್ಧನ್ ಇದೀಗ ಬೆಳ್ಳಿತೆರೆಗೆ ಮರಳಿದ್ದು, ‘ಶೆಫ್ ಚಿದಂಬರ’ ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿರುದ್ಧ ಜಟ್ಕಾರ್ ನಾಯಕ ನಟನಾಗಿರುವ ಮುಂಬರುವ ಚಿತ್ರದ ಹೆಸರೇ ಶೆಫ್ ಚಿದಂಬರ! ‘ರಾಘು’ ಚಿತ್ರದ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಅನಿರುದ್ದ ನಟಿಸುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರದ ಶೀರ್ಷಿಕೆಯನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಟ ಅನಿರುದ್ಧ ಈ […]

ಕಮಲ್​ ಹಾಸನ್​ ಜೊತೆ ನಟಿಸಿದ್ದ ಹಾಸ್ಯ ನಟ ಮೋಹನ್ ಶವವಾಗಿ ಪತ್ತೆ!

60 ವರ್ಷದ ಮೋಹನ್ ಅವರು ಸೇಲಂ ಜಿಲ್ಲೆಯ ಮೆಟ್ಟೂರು ಮೂಲದವರಾಗಿದ್ದು, ಅವರ ಮೃತ ದೇಹ ಮಧುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿದೆ. ಮೋಹನ್​ ಅವರು ಹಲವಾರು ತಮಿಳು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಕೆಲಸ ಮಾಡಿದ್ದರು.ಮಧುರೈ, ತಮಿಳುನಾಡು: ಹಾಸ್ಯ ಮತ್ತು ಪೋಷಕ ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿದ್ದ ತಮಿಳು ನಟ ಮೋಹನ್ ಅವರು ನಿಧನರಾಗಿದ್ದು, ನಟನ ಮೃತದೇಹ ಬೀದಿಯಲ್ಲಿ ಪತ್ತೆಯಾಗಿದೆ.ಕಾಲಿವುಡ್​ ಹಿರಿಯ ನಟ ಕಮಲ್ ಹಾಸನ್ ಜೊತೆ ನಟಿಸಿದ್ದ ಪೋಷಕ ನಟ ಮೋಹನ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಪೋಷಕ ಮತ್ತು ಹಾಸ್ಯ […]

ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ಪಡೆದಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಸಮಂತಾ ರುತ್​ ಪ್ರಭು

ರಿಲ್ಯಾಕ್ಸ್ ಮೂಡ್​ನಲ್ಲಿರುವ ನಟಿ ಪ್ರವಾಸ, ಮೂವಿ ಟೈಮ್​, ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ ತಮ್ಮ ದಿನ ಕಳೆಯುತ್ತಿದ್ದಾರೆ. ಮತ್ತೊಂದೆಡೆ ಆರೋಗ್ಯ ಚೇತರಿಕೆ ಕಡೆ ಗಮನ ಹರಿಸಿದ್ದಾರೆ ಎಂಬ ವರದಿಗಳೂ ಇವೆ.ದಕ್ಷಿಣ ಚಿತ್ರರಂಗದ ಟಾಪ್​ ನಟಿ ಸಮಂತಾ ರುತ್​ ಪ್ರಭು ಸದ್ಯ ಸಿನಿಮಾಗಳಿಂದ ಬ್ರೇಕ್​ ಪಡೆದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.ಸಾಲ ಪಡೆದಿರುವ ವದಂತಿಗಳ ಬಗ್ಗೆ ಸೌತ್​ ಸುಂದರಿ ಸಮಂತಾ ರುತ್​ ಪ್ರಭು ಸ್ಪಷ್ಟನೆ ಕೊಟ್ಟಿದ್ದಾರೆ.ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಮರ್ಥ: ತಮ್ಮ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ […]