‘ಜೈಲರ್​’ ನಿರ್ಮಾಪಕ ಕಲಾನಿಧಿ ಮಾರನ್ ಅವರಿಂದ ರಜನಿಕಾಂತ್‌ಗೆ BMW ಕಾರು ಗಿಫ್ಟ್‌

ಕಾಲಿವುಡ್​ ಸೂಪರ್​ಸ್ಟಾರ್ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ.​ ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ ಈ ಚಿತ್ರ ಜಾಗತಿಕ ಮಟ್ಟದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.’ಜೈಲರ್​’ ನಿರ್ಮಾಪಕ ಕಲಾನಿಧಿ ಮಾರನ್​ ಅವರು ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಕಾರು ಉಡುಗೊರೆ ನೀಡಿದ್ದಾರೆ. ತೆರೆಕಂಡು 3 ವಾರ ಕಳೆದರೂ ಹಲವೆಡೆ ಉತ್ತಮ ಪ್ರದರ್ಶನ ಮುಂದುವರೆಸಿದೆ. ಬಹುದಿನಗಳ ಬಳಿಕ ತೆರೆ ಮೇಲೆ ಬಂದ ‘ತಲೈವಾ’ನ ಹೊಸ ಅವತಾರ ಕಂಡು ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. […]

ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ : ಜವಾನ್​ ಬಿಡುಗಡೆಗೆ ದಿನಗಣನೆ!

ದೇಶ ಮಾತ್ರದಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ನಟ ಶಾರುಖ್​ ಖಾನ್​​ ಮುಖ್ಯಭೂಮಿಕೆಯ ಜವಾನ್​​ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ. ವೈಷ್ಣೋದೇವಿ ಸನ್ನಿಧಿಗೆ ಎಸ್​ಆರ್​ಕೆ ಭೇಟಿ: ಪ್ರಸಿದ್ಧ ನಟ ಎಸ್​ಆರ್​ಕೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಜವಾನ್​ ಬಿಡುಗಡೆಗೂ ಮುನ್ನ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟ ವಿಶೇಷ ಪ್ರಾರ್ಥನೆ […]

ವಿಕಟಕವಿ ಯೋಗರಾಜ್​ ಭಟ್​ ಸಾಥ್​; ರಂಗಾಯಣ ರಘು ನಟನೆಯ ‘ಶಾಖಾಹಾರಿ’ ಚಿತ್ರ

ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ ರಂಗಾಯಣ ರಘು ತಮ್ಮ ಅಭಿನಯದ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಎಂತಹದ್ದೇ ಪಾತ್ರವನ್ನು ಕೊಟ್ಟರೂ ಕೂಡ ಸಲೀಸಾಗಿ ನಟಿಸಿ ಸುಲಭದಲ್ಲೇ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಇಷ್ಟು ಮಾತ್ರವಲ್ಲದೇ ರಘು ಅವರು ಮೊದಲಿನಿಂದಲೂ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ, ಖಳನಟನ ಪಾತ್ರಗಳಲ್ಲಿ ಮತ್ತು ಇತ್ತೀಚೆಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಚಡ್ಡಿದೋಸ್ತಿ’ ಚಿತ್ರದಲ್ಲಿ ನಾಯಕನಾಗಿ ಮಿಂಚಿದ ರಂಗಾಯಣ ರಘು ಇದೀಗ ಮತ್ತೆ ‘ಶಾಖಾಹಾರಿ’ ಮೂಲಕ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ.ರಂಗಾಯಣ ರಘು ನಟನೆಯ ‘ಶಾಖಾಹಾರಿ’ […]

ಹೊಸ ಚಿತ್ರಗಳ ನಿರ್ದೇಶನದತ್ತ ಮುರಳಿ ಮಾಸ್ಟರ್ ​: ನಮೋ ಭೂತಾತ್ಮ 2’ಸಕ್ಸಸ್​ ಬಳಿಕ ಹೊಸ ಹೆಜ್ಜೆ

ಇದು ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್​ ಆಯಕ್ಷನ್​ ಕಟ್​ ಹೇಳಿರುವ ಎರಡನೆಯ ಚಿತ್ರ. ಇದಕ್ಕೂ ಮೊದಲು ಅವರು ಕೆಲವು ವರ್ಷಗಳ ಹಿಂದೆ ಕೋಮಲ್​ ನಟನೆಯ ‘ನಮೋ ಭೂತಾತ್ಮ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದೊಂದು ರಿಮೇಕ್​ ಸಿನಿಮಾವಾಗಿತ್ತು. ಇದೀಗ ‘ನಮೋ ಭೂತಾತ್ಮ 2’ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.ಆಗಸ್ಟ್​ 4ರಂದು ತೆರೆಕಂಡು ಪ್ರೇಕ್ಷಕರನ್ನು ಮೆಚ್ಚಿಸುವುದರ ಜೊತೆಗೆ ಪರಭಾಷಾ ಚಿತ್ರಗಳ ಪೈಪೋಟಿಯ ನಡೆಯುವೂ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿರುವ ಸಂತಸ ಚಿತ್ರತಂಡಕ್ಕಿದೆನಟ […]

ನಯನತಾರಾ ವಿಘ್ನೇಶ್​ ಫೋಟೋ ವೈರಲ್​ : ಅವಳಿ ಮಕ್ಕಳೊಂದಿಗೆ ಓಣಂ ಆಚರಣೆ

ಹೈದರಾಬಾದ್​: ಸೌತ್ ಇಂಡಸ್ಟ್ರಿಯ ಯಶಸ್ವಿ ನಟಿ ನಯನತಾರಾ ಆಗಾಗ್ಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಆಗುತ್ತಿರುತ್ತಾರೆ.ನಟಿ ನಯನತಾರಾ ಇತ್ತೀಚೆಗೆ ತಮ್ಮ ಮಕ್ಕಳು ಮತ್ತು ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಓಣಂ ಹಬ್ಬವನ್ನು ಆಚರಿಸಿದರು. ನಯನತಾರಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿಲ್ಲವಾದರೂ ಅವರ ಪತಿ ಆಗಾಗ್ಗೆ ಕುಟುಂಬದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಕೇರಳದಲ್ಲಿ ಆಗಸ್ಟ್ 27 ರಿಂದ ಓಣಂ ಹಬ್ಬ ಪ್ರಾರಂಭವಾಗಿದೆ. ಈ ಹಬ್ಬ 10 ದಿನಗಳ ಕಾಲ ನಡೆಯುವ ಹಬ್ಬವಾಗಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಈ ವಿಶೇಷ ಹಬ್ಬವನ್ನು […]