ಅಭಿಮಾನಿಗಳಲ್ಲಿ ಕಾತರ : ಮೂರು ದಶಕದ ಬಳಿಕ ಅಮಿತಾಬ್ ಬಚ್ಚನ್‌ ಜೊತೆಗೆ ರಜಿನಿಕಾಂತ್​ ಸಿನಿಮಾ

ಬೆಂಗಳೂರು: ತಮಿಳು ಸೂಪರ್‌ಸ್ಟಾರ್​ ರಜಿನಿಕಾಂತ್​​ 33 ವರ್ಷಗಳ ಬಳಿಕ ತಮ್ಮ ಸ್ನೇಹಿತನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.’ತಲೈವರ್​ 170′ ಸಿನಿಮಾದಲ್ಲಿ ಇಬ್ಬರು ಅಭಿನಯಿಸಲಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ ಅಂತಿದ್ದಾರೆ ಸಿನಿಮಾ ಪಂಡಿತರು. ಈ ಕುರಿತು ರಜಿನಿಕಾಂತ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ನೀಡಿದ್ದಾರೆ. ಅಮಿತ್​ ಬಚ್ಚನ್​ ಜೊತೆಗಿರುವ ಫೋಟೋ ಹಂಚಿಕೊಂಡು, ’33 ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್​​ ಬಚ್ಚನ್​ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ ‘ತಲೈವರ್​ 170’ರಲ್ಲಿ […]

ಹಿರಿಯ ನಟ ದಲೀಪ್​ ತಾಹಿಲ್​​ಗೆ ಜೈಲುಶಿಕ್ಷೆ : ಹಿಟ್​ ಆಯಂಡ್​ ರನ್ ಕೇಸ್

2018ರಲ್ಲಿ ಹಿರಿಯ ನಟ ದಲೀಪ್ ತಾಹಿಲ್ (Dalip Tahil) ಅವರು ಹಿಟ್​ ಆಯಂಡ್​ ರನ್ ಕೇಸ್​ನಲ್ಲಿ ಸಿಲುಕಿಕೊಂಡಿದ್ದರು.2018ರ ಹಿಟ್​ ಆಯಂಡ್​ ರನ್ ಕೇಸ್​ಗೆ ಸಂಬಂಧಿಸಿದಂತೆ ಹಿರಿಯ ನಟ ದಲೀಪ್​ ತಾಹಿಲ್​​ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಆರೋಪ ನಟನ ಮೇಲಿತ್ತು. 2018ರಿಂದ ನಟ ಕಾನೂನು ಹೋರಾಟ ನಡೆಸುತ್ತಿದ್ದರು. ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ಅಂತಿಮವಾಗಿ ತೀರ್ಪು ಬಂದಿದ್ದು, ದಲೀಪ್ ತಾಹಿಲ್‌ ಅವರಿಗೆ ಎರಡು ತಿಂಗಳು […]

ಮೊದಲ ದಿನದ ಕಲೆಕ್ಷನ್​ : ಬಾಲಯ್ಯ ನಟನೆಯ ‘ಭಗವಂತ ಕೇಸರಿ’ಗೆ ಭರ್ಜರಿ ಗೆಲುವು

ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯ ‘ಭಗವಂತ ಕೇಸರಿ’ ಸಿನಿಮಾ ಗುರುವಾರ (ಅ.19) ತೆರೆ ಕಂಡಿದೆ. ಅನಿಲ್ ರವಿಪುಡಿ ಆಯಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕಾಸ್ಟ್, ಟೈಟಲ್​, ಟೀಸರ್, ಟ್ರೇಲರ್, ಪೋಸ್ಟರ್ ಸಲುವಾಗಿ ಸದ್ದು ಮಾಡಿತ್ತು. ಇದೀಗ ರಿಲೀಸ್​ ಆದ ಮೊದಲ ದಿನವೇ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಚಿತ್ರವು ವಿಶ್ವದಾದ್ಯಂತ […]

ಕೂಲ್ ಮಗಾ ಸ್ಟುಡಿಯೋಸ್ ನಿಂದ ಹೊಸ ಫನ್ನಿ ಸಬ್ ಸ್ಕ್ರಿಪ್ಷನ್ ವೀಡಿಯೋ ಬಿಡುಗಡೆ

ಗೌರವ್ ಶೆಟ್ಟಿ, ಪ್ರತೀಕ್ ಶೆಟ್ಟಿ ಮತ್ತು ಶ್ರೀ ಭವ್ಯ ನಟನೆಯ ಹೊಸ ಫನ್ನಿ ಸಬ್ ಸ್ಕ್ರಿಪ್ಷನ್ ವೀಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೂಲ ಮಗಾ ಸ್ಟುಡಿಯೋಸ್ ಕ್ಯಾಮರಾ ಕಟ್ ಹೇಳಿದೆ. ಶಿವು-ಸುಜಿ ಪ್ರೊಡಕ್ಷನ್ ನಲ್ಲಿ ವೀಡಿಯೋ ನಿರ್ಮಾಣವಾಗಿದ್ದು, ರೋಹಿತ್ ಸಂಗೀತ ನೀಡಿದ್ದಾರೆ. ಪ್ರತಿಬಾರಿಯೂ ಹೊಸ ಕಾನ್ಸೆಪ್ಟ್ ನಿಂದ ಜನರನ್ನು ರಂಜಿಸುವ ಗೌರವ್ ಮತ್ತು ಪ್ರತೀಕ್ ಶೆಟ್ಟಿ ಈ ಬಾರಿಯೂ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ.

ಡಾಲಿ ಪಿಕ್ಚರ್ಸ್​ನಡಿ ನನಗೂ ಅವಕಾಶ ಕೊಡಿ- ದರ್ಶನ್​ ; ಟಗರು ಪಲ್ಯ’ ಟ್ರೇಲರ್​ ಬಿಡುಗಡೆ

ಬೆಂಗಳೂರು: ಡಾಲಿ ಧನಂಜಯ್​ ನಿರ್ಮಾಣದ ಮೂರನೇ ಸಿನಿಮಾ ‘ಟಗರು ಪಲ್ಯ’ದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಾಲಿ ಧನಂಜಯ್​ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಿಡುಗಡೆಗೊಳಿಸಿದರು. ಡಾಲಿ ಧನಂಜಯ್​ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಿಡುಗಡೆಗೊಳಿಸಿದರು.ಟ್ರೇಲರ್​ ಬಿಡುಗಡೆಗೊಳಿಸಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಿರಿಯ ನಟರಾದ ತಾರಾ, ರಂಗಾಯಣ ರಘು, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ […]