ಎಮ್ ಎನ್ ರಾಜೇಂದ್ರ ದಂಪತಿಗಳಿಗೆ ಬೀಳ್ಕೊಡುಗೆ ಸಮಾರಂಭ

ಉಡುಪಿ: ಅಂಬಲಪಾಡಿ ಯೂನಿಯನ್ ಬ್ಯಾಂಕ್( ಕಾರ್ಪೊರೇಷನ್ ಬ್ಯಾಂಕ್ )ನಲ್ಲಿ ಸುಮಾರು 38 ವರ್ಷಗಳ ಕಾಲ ಉಡುಪಿ ಜಿಲ್ಲೆಯ ವಿವಿಧ ಕಡೆ ಸೇವೆಸಲ್ಲಿಸಿ ಅಂಬಲಪಾಡಿ ಶಾಖೆಯಲ್ಲಿ ನಿವೃತ್ತರಾದ ಎಮ್ ಎನ್ ರಾಜೇಂದ್ರ ಹಾಗೂ ಶ್ರೀಮತಿ ಬೃಂದ ರಾಜೇಂದ್ರ ದಂಪತಿಗಳನ್ನು ಬೀಳ್ಕೊಡಲಾಯಿತು. ಸಮಾರಂಭದಲ್ಲಿ ಉಪ ಶಾಖಾಧಿಕಾರಿ ಶ್ರೀಮತಿ ಉಷಾ ಕುಮಾರಿ ದಂಪತಿಗಳಿಗೆ ಶಾಲು ಹೊದಿಸಿ ರಜತ ಸ್ಮರಣಿಕೆ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಯೂನಿಯನ್ ಬ್ಯಾಂಕ್ ನೌಕರರ ಸಂಘದ ವತಿಯಿಂದ ನಾಗೇಶ್ ನಾಯಕ್ ದಂಪತಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ […]

ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕೆ ಅನುಮತಿ

ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ರೈಲುಗಳಲ್ಲಿ ಹಾಗೂ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿಯೂ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕೆ ಅನುಮತಿಸಿ ಅವಕಾಶ ನೀಡಿದೆ. ಮದುವೆ ಮತ್ತು ಇತರ ವಾಣಿಜ್ಯ ಉದ್ದೇಶಗಳಿಗಾಗಿ ಸ್ಟಿಲ್ ಫೋಟೋಗ್ರಫಿಗಾಗಿ ದಿನಕ್ಕೆ 5,000 ರೂ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಉದ್ದೇಶವು ಶೈಕ್ಷಣಿಕವಾಗಿದ್ದರೆ, ಪರವಾನಗಿ ಶುಲ್ಕ 2,500 ರೂ ಮತ್ತು ವೈಯಕ್ತಿಕ ಬಳಕೆಗಾಗಿ, ಶುಲ್ಕ 3,500 ರೂ ಆಗಿರಲಿದೆ. ರೈಲು ನಿಂತಿದ್ದಾಗ ಅಥವಾ ಚಲಿಸುತ್ತಿದ್ದಾಗ ವಾಣಿಜ್ಯ ಉದ್ದೇಶಕ್ಕಾಗಿ ಸ್ಟಿಲ್ ಫೋಟೋಗ್ರಫಿಗಾಗಿ ದಿನಕ್ಕೆ […]

ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್: ಯಾವುದನ್ನು ಯಾವುದಕ್ಕೆ ಬೇಕಾದರೂ ಎಕ್ಸ್ ಚೇಂಜ್ ಮಾಡಿ!! ವಿನಿಮಯದ ಮೇಲೆ ರಿಯಾಯಿತಿ ಪಡೆಯಿರಿ

ನಿಮ್ಮ ಅಡುಗೆ ಮನೆಯನ್ನು ಮತ್ತು ನಿಮ್ಮ ಮನೆಯನ್ನು ಅಪ್‌ಗ್ರೇಡ್ ಮಾಡಲು ಒಂದು ಸುವರ್ಣ ಅವಕಾಶ!! ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್ ಆಫರ್ ನಲ್ಲಿ ಯಾವುದನ್ನು ಯಾವುದಕ್ಕೆ ಬೇಕಾದರೂ ಎಕ್ಸ್‌ಚೇಂಜ್ ಮಾಡಿ…ವಿನಿಮಯದ ಮೇಲೆ ರಿಯಾಯಿತಿ 24% – 66% ರಿಯಾಯತಿ ಪಡೆಯಿರಿ!! ಈ ಆಫರ್ ಜೂನ್ 2 ರಿಂದ 4 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಮಾತ್ರ! ವಿನಿಮಯ ಮತ್ತು ಅಪ್‌ಗ್ರೇಡ್‌ಗೆ ಉತ್ತಮ ಕಾರಣಗಳು ಜೀವನವನ್ನು ಸುಂದರವಾಗಿಸಿ ಜೀವನವನ್ನು ಸ್ಮಾರ್ಟ್ ಮಾಡಿ ಜೀವನವನ್ನು ಸುಲಭಗೊಳಿಸಿ ಜೀವನವನ್ನು ಪರಿಣಾಮಕಾರಿಯಾಗಿ […]

ಉಡುಪಿ: ಪೋಷಕರ ಪತ್ತೆಗೆ ಮನವಿ

ಉಡುಪಿ: ಜಿಲ್ಲೆಯ ಕೃಷ್ಣಾನುಗೃಹ ದತ್ತು ಕೇಂದ್ರದಲ್ಲಿ ವಾಸವಿರುವ ಏಸ್ತರ್ (7) ಎಂಬ ಹೆಣ್ಣು ಮಗುವಿನ ಪೋಷಕರ ಪತ್ತೆಗಾಗಿ ಹುಡುಕಾಟ ನಡೆಸಲಾಗಿದ್ದು. ಮಗುವಿನ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಘಟಕ ರಜತಾದ್ರಿ ಉಡುಪಿ. ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಂಭ್ರಮದಿಂದ ಶಾಲೆಗಳಿಗೆ ಆಗಮಿಸಿದ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಅಂತ್ಯವಾಗಿದ್ದು, ಶಾಲೆ ಪ್ರಾರಂಭವಾಗಿದೆ. ಇನ್ನು ಶಾಲೆಗೆ ಮಕ್ಕಳನ್ನು ಬರಮಾಡಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಒಂದಷ್ಟು ಮಾರ್ಗಸೂಚನೆಗಳನ್ನು ನೀಡಿದೆ. ಅದರಲ್ಲಿ ಪ್ರಾರಂಭೋತ್ಸವ ನಡೆಸಿ ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಬೇಕು. ಮೊದಲ ದಿನ ಬಿಸಿಯೂಟದಲ್ಲಿ ಸಿಹಿ ವಿತರಿಸಬೇಕು. ಹಾಗೆಯೇ ಮೊದಲ ದಿನವೇ ಒಂದೆರಡು ಗಂಟೆ ನಂತರ ಶೈಕ್ಷಣಿಕ ತರಗತಿ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಇಲಾಖೆ ಸೂಚಿಸಿದೆ. ಅದರಂತೆ ಎಲ್ಲಾ ಶಾಲೆಯಲ್ಲೂ ಸಂಭ್ರಮ ಆಚರಣೆ ನಡೆದಿದೆ. ಮಕ್ಕಳನ್ನು ಶಾಲೆಯ ಶಿಕ್ಷಕರು, ಗ್ರಾಮಸ್ತರು ಸ್ವಾಗತಿಸಿದರು.