ನಮಾಮಿ ಗಂಗಾ ಯೋಜನೆ ಜಾಗತಿಕ ಪರಿಸರ ಸಂರಕ್ಷಣೆಯಲ್ಲಿ ಒಂದು ಮೈಲಿಗಲ್ಲು: ಜಿ. ಅಶೋಕ್ ಕುಮಾರ್
ಮಣಿಪಾಲ: ಕೇಂದ್ರ ಸರಕಾರದ ಗಂಗಾ ನದಿಯನ್ನು ಸ್ವಚ್ಛ ಮತ್ತು ಪುನರ್ಜೀವನಗೊಳಿಸುವ ‘ನಮಾಮಿ ಗಂಗಾ’ ಯೋಜನೆಯು ಜಗತ್ತಿನ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು ಇದಕ್ಕೆ ಕೇಂದ್ರ ಸರಕಾರವು 20 ಸಾವಿರಕ್ಕೂ ಮಿಕ್ಕಿ ಕೋಟಿ ರೂಪಾಯಿಯನ್ನು ತೆಗೆದಿರಿಸಿದೆ. ಕಳೆದ 9 ವರ್ಷಗಳಲ್ಲಿ 450ಕ್ಕೂ ಮಿಕ್ಕಿ ವಿವಿಧ ಕಾಮಗಾರಿಗಳನ್ನು ಕಾರ್ಯರೂಪಗೊಳಿಸಿ ಗಂಗಾ ನದಿಯನ್ನು ಪುನರ್ಜೀವನಗೊಳಿಸುವ ಕಾರ್ಯ ನಡೆದಿದೆ. ಇದಕ್ಕೆ ಸಾಕಷ್ಟು ಪ್ರತಿಫಲವು ದೊರಕಿದ್ದು ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯ ಯೋಜನೆಗಳು ಕಾರ್ಯಗತಗೊಳ್ಳುತ್ತಿದೆ. ಅವಿರಲಧಾರ ಗಂಗಾ , ನಿರ್ಮಲಧಾರ ಗಂಗಾ, ಜ್ಞಾನ […]
ಪಿ.ಎ ಇಂಜಿನಿಯರಿಂಗ್ ಕಾಲೇಜು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದ 2023ರ ವಾರ್ಷಿಕ ಪರೀಕ್ಷೆಯಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ 5ನೇ ಮತ್ತು 6ನೇ ರ‍್ಯಾಂಕ್ ಗಳಿಸಿದ ಫೀನಾ ಹಕೀಮ್ ಮತ್ತು ಹರ್ಷಿತ ಶೆಟ್ಟಿಗಾರ್ ಅಭಿನಂದನಾ ಕಾರ್ಯಕ್ರಮವನ್ನು ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಮೀಝ್ ಎಂ.ಕೆ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಹಾಗೂ ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತರುವ ಬಗ್ಗೆ ತಿಳಿ ಹೇಳಿದರು. ಪಿ. ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ […]
ಲಯನ್ಸ್ ಕ್ಲಬ್ ಉಡುಪಿ ಚೇತನ ಪದಗ್ರಹಣ ಸಮಾರಂಭ
ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಚೇತನದ 23-24ರ ಸಾಲಿನ ಪದಗ್ರಹಣ ಕಾರ್ಯಕ್ರಮ ಇತ್ತೀಚಿಗೆ ಉಡುಪಿಯ ಟೌನ್ ಹಾಲ್ ನಲ್ಲಿ ನೆರವೇರಿತು. ಲಯನ್ಸ್ ಕ್ಲಬ್ ನ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಮೊಹಮ್ಮದ್ ಹನೀಫ್, ನೂತನ ತಂಡಕ್ಕೆ ಪ್ರಮಾಣವಚನ ಬೋಧಿಸಿದರು. ನೂತನ ಅಧ್ಯಕ್ಷ ಲಯನ್ ಜಗದೀಶ್ ಆಚಾರ್ಯ, ಕಾರ್ಯದರ್ಶಿ ಲಯನ್ ಪುಷ್ಪರಾಜ್ ಶೆಟ್ಟಿ, ಕೋಶಾಧಿಕಾರಿ ರಮಾನಂದ ಶೆಟ್ಟಿ ಹಾಗೂ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಜರುಗಿತು. ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಪ್ರಸಾದ್ ಶೆಟ್ಟಿ, ವಲಯ್ಯಾಧ್ಯಕ್ಷ ಲಯನ್ ಅರುಣ್ […]
ಗೃಹರಕ್ಷಕ ಚೂಡಪ್ಪ ಸುವರ್ಣ ಕುಟುಂಬಕ್ಕೆ ಸಹಾಯಧನ
ಉಡುಪಿ: ಅನಾರೋಗ್ಯದಿಂದ ಮೃತಪಟ್ಟ ಜಿಲ್ಲಾ ಗೃಹರಕ್ಷಕ ದಳ ಬ್ರಹ್ಮಾವರ ಘಟಕದ ಗೃಹರಕ್ಷಕ ಚೂಡಪ್ಪ ಸುವರ್ಣ ಅವರ ಕುಟುಂಬಕ್ಕೆ ಜಿಲ್ಲಾ ಸಮಾದೇಷ್ಟ ಪ್ರಶಾಂತ್ ಶೆಟ್ಟಿ ಅವರು ಜಿಲ್ಲಾ ಗೃಹರಕ್ಷಕ ನಿಧಿಯಿಂದ 10,000 ರೂ. ಗಳ ಸಹಾಯಧನದ ಚೆಕ್ ಅನ್ನು ನೀಡಿದರು. ಈ ಸಂದರ್ಭದಲ್ಲಿ ಉಪಸಮಾದೇಷ್ಟ ರಮೇಶ್, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್, ಕಚೇರಿ ಅಧೀಕ್ಷಕ ರತ್ನಾಕರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮುಟ್ಟುಗೋಲು ಹಾಕಿಕೊಂಡ ವಾಹನಗಳ ಬಹಿರಂಗ ಹರಾಜು
ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯ ವಾಹನ ನಿರೀಕ್ಷಕರು ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಸದರಿ ವಾಹನಗಳ ಮಾಲೀಕರು ಇದುವರೆಗೂ ಈ ವಾಹನಕ್ಕೆ ನೀಡಿರುವ ತನಿಖಾ ವರದಿಯಂತೆ ವಾಹನ ಬಿಡಿಸಿಕೊಳ್ಳಲು ಮುಂದೆ ಬಾರದಿರುವ ಹಿನ್ನೆಲೆ, ವಾಹನಗಳನ್ನು ನಿಂತಿರುವ ಸ್ಥಳಗಳಲ್ಲಿ ಯಥಾ ಸ್ಥಿತಿಯಲ್ಲಿ ನವೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆದ್ದರಿಂದ ವಾಹನಗಳನ್ನು ಹೊಂದಿರುವ […]