ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 26 ದಿನದ ಹಸುಗೂಸಿನ ಚಿಕಿತ್ಸೆಗಾಗಿ ಸಹಾಯಧನ ಹಸ್ತಾಂತರ
ಕೋಟೇಶ್ವರ: ಇಲ್ಲಿನ ಗೀತಾ ಶ್ರೀಧರ್ ದಂಪತಿಗಳ ಮಗನಾದ 26 ದಿನದ ಮಗು ಆರ್ಯನ್ ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕರ್ನಾಟಕ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರುಗಳೆಲ್ಲರೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ತೆರಳಿ, ತೀವ್ರ ನಿಗಾ ಘಟಕದಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಮಗು ಶೀಘ್ರ ಗುಣಮುಖವಾಗಲು ದೇವರಲ್ಲಿ ಪ್ರಾರ್ಥಿಸಿ, ಹೆತ್ತವರನ್ನು ಸಂತೈಸಿ, ಚಂದಾ ಎತ್ತಿ ಸಂಗ್ರಹಿಸಿದ ಹಣ ಒಟ್ಟು 90959 ರೂ. ಗಳನ್ನು ಮಗುವಿನ ತಾಯಿಗೆ ಹಸ್ತಾಂತರ ಮಾಡಿದರು. […]
ತ್ರಿಶಾ ಕ್ಲಾಸಸ್: ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಉಡುಪಿ: ಸತತ ಇಪ್ಪತ್ತೈದು ವರ್ಷಗಳಿಂದ ಸಿ.ಎ, ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಜೂನ್ 2023 ರ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿಉತ್ತಮ ಸಾಧನೆಯನ್ನು ಮಾಡಿದ್ದಾರೆ. ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ವಿದ್ಯಾರ್ಥಿಗಳಾದ ಮನಿಷ ಭಾಸ್ಕರ್ ಶೆಟ್ಟಿ (310), ವಿಶ್ರುತಾ (283) ,ಸಿರಿ ಎಸ್ಎನ್ (279), ಅನನ್ಯ ಎಎಸ್ (268), ದರ್ಶನ್ ಕೆ (268), ಆರ್ ಆರ್ ಸುಕೃತಿ(259), ಮೋಹಿತ್ […]
ಕರ್ನಾಟಕ ಕರಾವಳಿಯ ರಾಷ್ಟ್ರೀಯ ಭದ್ರತೆ ವಿಚಾರ ವಿನಿಮಯ
ಉಡುಪಿ: ಕರಾವಳಿ ಕಾವಲು ಪೊಲೀಸ್ ಕರ್ನಾಟಕ, ಕೇಂದ್ರ ಕಛೇರಿ ಮಲ್ಪೆಯಲ್ಲಿ ಬುಧವಾರದಂದು ಅಬ್ದುಲ್ ಅಹದ್, ಐಪಿಎಸ್ ಇವರ ಉಪಸ್ಥಿತಿಯಲ್ಲಿ ಮರ್ಚೆಂಟ್ ನೇವಿಯ ನಿವೃತ್ತ ಅಧಿಕಾರಿಗಳು ಮತ್ತು ಭಾರತೀಯ ನೌಕಾಸೇನೆ, ಭಾರತೀಯ ತಟರಕ್ಷಣ ಪಡೆಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ಕರಾವಳಿಯ ರಾಷ್ಟ್ರೀಯ ಭದ್ರತೆಯ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು. ಡಾಲ್ಸಿ ಪಿಂಟೋ ಉಪಪ್ರಾಂಶುಪಾಲರು, ಮಂಗಳೂರು ಮರೈನ್ ಕಾಲೇಜು ಹಾಗೂ ಇತರೇ ನಿವೃತ್ತ ಹಾಗೂ ಸೇವಾನಿರತ ನೌಕಾಧಿಕಾರಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಅವರ […]
ಸುಧೀಂದ್ರ ಗೋಲ್ಡ್ ಫೈನಾನ್ಸ್ ನ 3 ನೇ ಶಾಖೆ ಉದ್ಘಾಟನೆ
ಉಡುಪಿ: ಇಲ್ಲಿನ ಸರ್ವಿಸ್ ಬಸ್ ಸ್ಟಾಂಡ್ ಸಮೀಪದ ಹೂವಿನ ಮಾರ್ಕೆಟ್ ಎದುರಿನ ಕಟ್ಟಡದಲ್ಲಿ ಮಂಗಳವಾರದಂದು ಸುಧೀಂದ್ರ ಗೋಲ್ಡ್ ಫೈನಾನ್ಸ್ 3 ನೇ ಶಾಖೆಯನ್ನು ಖ್ಯಾತ ಚಲನಚಿತ್ರ ನಟ- ನಿರ್ದೇಶಕ ದೇವದಾಸ್ ಕಾಪಿಕಾಡ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಚಲನ ಚಿತ್ರ ನಟ ಅರುಣ್ ಐರೋಡಿ, ಯುವ ಉದ್ಯಮಿ ಸುಕುಮಾರ್ ಶೆಟ್ಟಿ, ಸಂಸ್ಥೆಯ ಪಾಲುದಾರರಾದ ಶ್ರೀಮತಿ ಆಶಾ ಹೆಗ್ಡೆ, ನವ್ಯ ಹೆಗ್ಡೆ, ನಿಶಾ ಹೆಗ್ಡೆ, ಸಂಸ್ಥೆಯ […]
ಆ. 11 ಮತ್ತು 13 ರಂದು ವಿದ್ಯುತ್ ವ್ಯತ್ಯಯ
ಉಡುಪಿ: 110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮೂಡುಬೆಳ್ಳೆ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 11 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಹಾಗೂ 110/11 ಕೆ.ವಿ ಕಾರ್ಕಳ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಅಜೆಕಾರು ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಾಡುಹೊಳೆ, ಗುಡ್ಡೆಯಂಗಡಿ, ಭೂತಗುಂಡಿ, ಭೂತಮಾರು, ಶಿರ್ಲಾಲು, ಹಾಡಿಯಂಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ […]