ಕಾರ್ಕಳ: ಕಂಪೆನಿ ಸೆಕ್ರಟರಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಧನೆ
ಕಾರ್ಕಳ: ಕಂಪೆನಿ ಸೆಕ್ರೆಟರಿ ಸಂಸ್ಥೆಗಳಿಗೆ ನಡೆದ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಮಂಜುನಾಥ ಭಟ್, ಶ್ರೀಯಾ ಕೆ ಎಸ್, ಶ್ರಾವ್ಯ ಭಟ್ ಎಸ್, ಪ್ರಣೀತಾ, ಧನುಷ್ ಡಿ, ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಕಾರ್ಯ ಪ್ರವೃತ್ತವಾಗಿರುವ ಸಂಸ್ಥೆ ತನ್ನ ಮೊದಲ ದಿನಗಳಿಂದಲೂ ವಾಣಿಜ್ಯ ವಿಭಾಗದಲ್ಲಿ ಸಿ.ಎ, ಸಿ.ಎಸ್ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ವಿಶೇಷ ತರಗತಿ ಮತ್ತು ತರಬೇತಿ ನೀಡುತ್ತಾ ಬಂದಿದ್ದು ಅತ್ಯುತ್ತಮ ಫಲಿತಾಂಶವೂ ದಾಖಲಾಗಿರುವುದನ್ನು […]
ಕರ್ನಾಟಕದಲ್ಲೇ ಮೊದಲ ಬಾರಿಗೆ ಅತ್ಯಂತ ಕ್ಲಿಷ್ಟ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿ ಹೆರಿಗೆ ನಡೆಸಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು
ಮಣಿಪಾಲ: 31 ವರ್ಷ ವಯಸ್ಸಿನ ಮಹಿಳೆಯು ಎರಡನೆ ಬಾರಿ ಗರ್ಭ ಧರಿಸಿದ್ದು, 34ನೇ ವಾರದ ಗರ್ಭಾವಸ್ಥೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಮಗುವಿನ ಕಸ (Placenta) ಗರ್ಭಕೋಶದ ಬಾಯಿಗೆ ಅಡ್ಡಲಾಗಿರುವ ವಿಶೇಷ ಸ್ಥಿತಿ ಬೆಳಕಿಗೆ ಬಂದಿತ್ತು. ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದ ನಂತರ ಪ್ಲಾಸೆಂಟಾ ಪ್ರೀವಿಯಾ ಮತ್ತು ಪ್ಲಾಸೆಂಟಾ ಅಕ್ರಿಟಾ ಇರುವ ಸಾಧ್ಯತೆ ಕಂಡು ಬಂದಿತು. ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ರೋಗಿಗಿರುವ ತೊಂದರೆಯನ್ನು ದೃಢಪಡಿಸಿತು. ಪರಿಸ್ಥಿತಿಯನ್ನು ಅರಿತ ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀಪಾದ ಹೆಬ್ಬಾರ್ […]
ಅಂಗವೈಕಲ್ಯದಿಂದ ಬಳಲುತ್ತಿರುವ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾಕಿರಣ: ಹತ್ತಿ ಬತ್ತಿ ತಯಾರಿಸಿ ಆತ್ಮನಿರ್ಭರತೆಯತ್ತ ಪಯಣ…
ಉಡುಪಿ: ಕಾರಣಾಂತರಗಳಿಂದ ಅಂಗವೈಕಲ್ಯ ಹೊಂದಿ ಇನ್ನೊಬ್ಬರ ಆಶ್ರಯದಲ್ಲಿ ಬದುಕುವಂತಾದಾಗ ಜೀವನವೇ ಬೇಡವೆಂದು ಆತ್ಮಹತ್ಯೆ ಮಾಡುವಂತಹ ಯೋಚನೆಗಳು ಬರುತ್ತವೆ. ಮನೆ ನಿಭಾಯಿಸಲು ತೆಗೆದುಕೊಂಡ ಸಾಲ, ಮಕ್ಕಳ ವಿದ್ಯಾಭ್ಯಾಸ, ಸಂಸಾರದ ಭಾರ ತೂಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರು ಹಲವರು. ಅಂಗವೈಕಲ್ಯವೇ ಒಂದು ಅಭಿಶಾಪವಾದಂತಹ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾ”ಕಿರಣ”ವಾಗಿ ಅವರ ಬೆಂಬಲಕ್ಕೆ ನಿಂತಿದೆ ಡಾ. ಶಶಿಕಿರಣ್ ಶೆಟ್ಟಿ ಅವರ ಹೋಂ ಡಾಕ್ಟರ್ ಫೌಂಡೇಶನ್. ಕಳೆದ ಹಲವಾರು ವರ್ಷಗಳಿಂದ ಅಶಕ್ತರು, ಅನಾಥರು, ಅಸಾಹಯಕರು, ಕುಟುಂಬದಿಂದ ಪರಿತ್ಯಕ್ತ ವೃದ್ದರು, ಶಾಲಾ ವಿದ್ಯಾರ್ಥಿಗಳು, ರೈತರು […]
ಮುಂದಿನ ಮೂರು ತಿಂಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯ ಪೂರ್ಣ: ಯೋಗಿ ಆದಿತ್ಯನಾಥ್
ಅಯೋಧ್ಯಾ: ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರದ ಕಾರ್ಯಗಳು ಭರದಿಂದ ಸಾಗುತ್ತಿವೆ. ಮುಂದಿನ ವರ್ಷ ಜನವರಿ ವೇಳಿಗೆ ಮಂದಿರ ಕಾರ್ಯ ಪೂರ್ಣವಾಗುವ ನಿರೀಕ್ಷೆಗಳಿವೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಸ್ತುತ ಉತ್ತರ ಪ್ರದೇಶದಲ್ಲಿ 9 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. 12 ವಿಮಾನ ನಿಲ್ದಾಣಗಳ ಕಾರ್ಯ ನಡೆಯುತ್ತಿದೆ. ಇದರಲ್ಲಿ ಎರಡು ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇರಿವೆ. ಇದರಲ್ಲಿ ಒಂದು ಅಯೋಧ್ಯೆಯಲ್ಲಿದ್ದು ಮುಂದಿನ ಮೂರು ತಿಂಗಳಲ್ಲಿ ಅದರ ಕಾರ್ಯ ಸಂಪೂರ್ಣವಾಗಲಿದೆ ಎಂದರು. […]
ಚುನಾವಣಾ ಸಂಸ್ಥೆಗಳ ಆಯುಕ್ತರ ನೇಮಕಾತಿಗಾಗಿ ಹೊಸ ಮಸೂದೆ: ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಲ್ಲ ಸ್ಥಾನ
ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಮಂಡಿಸಲಿರುವ ಹೊಸ ಮಸೂದೆಯ ಪ್ರಕಾರ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಿದೆ. ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ, ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಈ ಮೂವರನ್ನು ಒಳಗೊಂಡ ಸಮಿತಿಯು ಚುನಾವಣಾ ಸಂಸ್ಥೆಗೆ ನೇಮಕಾತಿಗಳನ್ನು ಮಾಡಬೇಕು ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ […]