ದೇಶದ್ರೋಹ ಕಾನೂನಿಗೆ ಹೊಸ ಪರಿಭಾಷೆ: ಹೊಸ ಕಾನೂನಿನ ಸೆಕ್ಷನ್ 150 ರ ಅಡಿಯಲ್ಲಿ ವ್ಯಾಖ್ಯಾನ
ನವದೆಹಲಿ: ಕೇಂದ್ರವು ಭಾರತೀಯ ದಂಡ ಸಂಹಿತೆಗೆ ಬದಲಿಯಾಗಿ ಪರಿಗಣಿಸುವುದರಿಂದ ದೇಶದ್ರೋಹದ ಅಪರಾಧವು ಶೀಘ್ರದಲ್ಲೇ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಮುಂಗಾರು ಅಧಿವೇಶನದ ಅಂತಿಮ ದಿನದಂದು ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ನ್ಯಾಯ ಸಂಹಿತಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆಯ ನಿಬಂಧನೆಗಳ ಅಡಿಯಲ್ಲಿ ದೇಶದ್ರೋಹದ ಅಪರಾಧ ಐಪಿಸಿಯ ಸೆಕ್ಷನ್ 124A ನಲ್ಲಿ ಬದಲಿಗೆ ಸೆಕ್ಷನ್ 150 ನಿಂದ ಬದಲಾಯಿಸಲಾಗುತ್ತದೆ. ಈಗಿರುವ ದೇಶದ್ರೋಹ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಮತ್ತು ಹೆಚ್ಚುವರಿ ದಂಡ ಕೂಡ ವಿಧಿಸಬಹುದಾಗಿದೆ. ದ್ವೇಷ, ತಿರಸ್ಕಾರ […]
ಉಡುಪಿ ಅಂಚೆ ಕಚೇರಿ ವತಿಯಿಂದ ‘ಹರ್ ಘರ್ ತಿರಂಗಾ’ ಜನಜಾಗೃತಿ ಜಾಥಾ
ಉಡುಪಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನದ ಯಶಸ್ಸಿಗಾಗಿ ಉಡುಪಿ ಅಂಚೆ ವಿಭಾಗವು ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಜಾಥವನ್ನು ಉಡುಪಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿತ್ತು. ಉಡುಪಿ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಜಾಥಕ್ಕೆ ಚಾಲನೆ ನೀಡಿದ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿ, ಕಳೆದ ಬಾರಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ವಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಯಶಸ್ವಿ ಯಾಗುವಲ್ಲಿ ಭಾರತೀಯ ಅಂಚೆ ಇಲಾಖೆಯ ಪಾತ್ರ […]
ಉಡುಪಿ: ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಯಶ್ಪಾಲ್ ಸುವರ್ಣ ಅವಿರೋಧವಾಗಿ ಪುನರಾಯ್ಕೆ
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಬ್ಯಾಂಕಿನ 2023-28 ನೇ ಸಾಲಿನ 5 ವರ್ಷಗಳ ಅವಧಿಯ ಅಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಬ್ಯಾಂಕಿನ ಉಪಾಧ್ಯಕ್ಷರಾಗಿ ವಾಸುದೇವ ಸಾಲ್ಯಾನ್, ನಿರ್ದೇಶಕರಾಗಿ ಕೆ ಸಂಜೀವ ಶ್ರೀಯಾನ್, ವೆಂಕಟರಮಣ ಕಿದಿಯೂರು, ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ರಾಮ ನಾಯ್ಕ್ ಎಚ್, ಶಿವರಾಮ ಕುಂದರ್, […]
ಕುಂಜಿಬೆಟ್ಟು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಉಡುಪಿ: ಕುಂಜಿಬೆಟ್ಟು ಹತ್ತಿರದ ಶಾಂಭವಿ ಬಿಲ್ಡಿಂಗ್‌ನ ಎಸ್‌ಆರ್‌ಎಸ್ ಸ್ಟಾಪ್ ಕ್ವಾರ್ಟರ್ಸ್‌ನಲ್ಲಿರುವ ಶಿಕ್ಷಕಿ ದಂಪತಿಯ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ವರದಿಯಾಗಿದೆ. ಕಳ್ಳರು ಗಂಗಾಧರ ಅವರ ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದು, ಕಾಪಾಟಿನಲ್ಲಿದ್ದ ಚಿನ್ನದ ಕರಿಮಣಿ ಸರ, ಮುತ್ತಿನ ಸರ, 2 ಚಿನ್ನದ ಸರ, 2 ಚಿನ್ನದ ಬಳೆ, 6 ಚಿನ್ನದ ಕಿವಿಯೋಲೆಗಳು, 2 ಚಿನ್ನದ ಉಂಗುರ, ಮಕ್ಕಳ 12 ಸಣ್ಣ ಉಂಗುರ ಸೇರಿದಂತೆ ಒಟ್ಟು 116 ಗ್ರಾಂ […]
ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ
ಕಾಪು: ವಿಧಾನಸಭಾ ಕ್ಷೇತ್ರದ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಇಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಕಳತ್ತೂರು ಶಾಂತಿಗುಡ್ಡೆಯಿಂದ ನಟ್ಟಿಲ್ ಸಂಪರ್ಕ ರಸ್ತೆ ಅಭಿವೃದ್ಧಿ – 50 ಲಕ್ಷ, ಗೋಳಿಬೆಟ್ಟು ರಸ್ತೆ ಅಭಿವೃದ್ಧಿ – 25 ಲಕ್ಷ, ಪೈಯಾರು 3 ಸೈಂಟ್ಸ್ ಕಾಲೋನಿ ರಸ್ತೆ ಅಭಿವೃದ್ಧಿ – 10 ಲಕ್ಷ ಹಾಗೂ ಕುತ್ಯಾರು ವೀರಭದ್ರ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ನಿರ್ಮಾಣ – 2 ಲಕ್ಷ ಸೇರಿದಂತೆ ಒಟ್ಟು 87 ಲಕ್ಷ ರೂಪಾಯಿ […]