ರಥಬೀದಿ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ
ಉಡುಪಿ: ಇಲ್ಲಿನ ರಥಬೀದಿಯ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಶೀರೂರು ಮಠದ ದಿವಾನ ವಿದ್ವಾನ್ ಉದಯಕುಮಾರ ಸರಳತ್ತಾಯ ಹಾಗೂ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಲಿ ಸಂತರಣೋಪನಿಷತ್ ಹವನ
ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರಾವಣ ಪುರುಷೋತ್ತಮ ಅಧಿಕ ಮಾಸ ಕಲಿ ಸಂತರಣೋಪನಿಷತ್ ಮಂತ್ರ ಜಪಾರಾಧನೆ ಹಾಗೂ ಕಲಿ ಸಂತರಣೋಪನಿಷತ್ ಹವನವು ಜು.24 ರಿಂದ ಆರಂಭಗೊಂಡು ಆ.15 ತನಕ ನಡೆಯಿತು. ಇಂದು ಬೆಳ್ಳಿಗೆ ನಡೆದ ಸಾಮೂಹಿಕ ಪ್ರಾರ್ಥನೆ, ಕಲಿ ಸಂತರಣೋಪನಿಷತ್ ಹವನದ ಧಾರ್ಮಿಕ ಪೂಜಾವಿಧಾನಗನ್ನು ಚೇಂಪಿ ಶ್ರೀಕಾಂತ್ ಭಟ್ ನೆರವೇರಿಸಿದರು. ಯಾಗ ಶಾಲೆಯಲ್ಲಿ ಹವನ, ಪೂರ್ಣಾಹುತಿ ಹಾಗೂ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಊರ ಪರವೂರ ಭಜನಾ ಮಂಡಳಿಗಳಿಂದ ಒಂದು ತಿಂಗಳ ಕಾಲ […]
ಸಿಕೋ ಕೈ ಕರಾಟೆ ಇಂಟರ್ ನ್ಯಾಷನಲ್ 2023: ಕಂಚಿನ ಪದಕ ಪಡೆದ ವಂಶಿತಾ ದೇವಾಡಿಗ
ಕುಂದಾಪುರ : ಸಿಕೋ ಕೈ ಕರಾಟೆ ಇಂಟರ್ ನ್ಯಾಷನಲ್ ಇಂಡಿಯಾ ಮತ್ತು ಭಾರತ್ ಕರಾಟೆ ಅಕಾಡೆಮಿ ಇವರ ಸಂಯೋಜನೆಯಲ್ಲಿ ಆಗಸ್ಟ್ 11 ರಿಂದ 13 ರವರೆಗೆ ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಂಶಿತಾ ಜಿ. ದೇವಾಡಿಗ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ವಿದ್ಯಾರ್ಥಿನಿಯನ್ನು ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ […]
ಕಲ್ಮಾಡಿ: ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಭಕ್ತಿ- ಸಡಗರದಿಂದ ಸಂಪನ್ನ
ಕಲ್ಮಾಡಿ: 1972 ರಲ್ಲಿ ಪುಟ್ಟ ಆರಾಧನಾ ಕೇಂದ್ರವಾಗಿ ಆರಂಭಗೊಂಡ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯವು 1991 ರಲ್ಲಿ ಸ್ವತಂತ್ರ ದೇವಾಲಯವಾಗಿ ಗುರುತಿಸಿಕೊಂಡಿತು. 1988 ಅಗೋಸ್ಟ್ 15 ರಂದು ವೆಲಂಕಣಿ ಮಾತೆಯ ಮೂರ್ತಿಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಪ್ರಾರಂಭಗೊಂಡ ವೆಲಂಕಣಿ ಮಾತೆಯ ಆರಾಧನೆಯು ಸಾವಿರಾರು ಭಕ್ತರನ್ನು ಈ ಕ್ಷೇತ್ರಕ್ಕೆ ಆಕರ್ಷಿಸುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು 2018 ರಲ್ಲಿ ಹಡಗಿನ ರೂಪವನ್ನು ಹೋಲುವ ಬೃಹತ್ ದೇವಾಲಯವಾಗಿ ನಿರ್ಮಿಸಲಾಯಿತು. ಈ ದೇವಾಲಯದ […]
ಕಲ್ಮರ್ಗಿ: ಶಿರಿಯಾರ ಜೈಗಣೇಶ ಸೊಸೈಟಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಕಲ್ಮರ್ಗಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಜೈಗಣೇಶ ಸೊಸೈಟಿಯ ಕೇಂದ್ರ ಕಚೇರಿಯಾದ ಕಲ್ಮರ್ಗಿಯ ಆವರಣದಲ್ಲಿ ಜೈಗಣೇಶ ಸೊಸೈಟಿಯ ಹಿರಿಯರಾದ ಕಲ್ಮರ್ಗಿ ಶಿರಿಯಾರದ ರಘುರಾಮ ನಾಯಕ್ ಧ್ವಜಾರೋಹಣಗೈದು ಸ್ವಾತಂತ್ರ್ಯ ದಿನದ ಅಂಗವಾಗಿ ಶುಭ ಹಾರೈಸಿದರು. ಜೈಗಣೇಶ ಸೊಸೈಟಿಯ ಶಿವಾನಂದ ಕಾರ್ಮಕ್ರಮ ನಿರೂಪಿಸಿದರು. ಜೈಗಣೇಶ ಸೊಸೈಟಿಯ ಅಧ್ಯಕ್ಷ ಹಾಗೂ ಸಂಸ್ಥಾಪಕ ವಕೀಲ ನೋಟರಿ ಶಿರಿಯಾರ ಪ್ರಭಾಕರ ನಾಯಕ್ ಮಾತನಾಡಿ ಸುವರ್ಣ ಸ್ವಾತಂತ್ರತ್ರೋತ್ಸವ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಉದಯವಾಯಿತು. 76ರ ಸ್ವಾತಂತ್ರತ್ರೋತ್ಸವದಲ್ಲಿ ಏಕ ಭಾರತ ಶ್ರೇಷ್ಠ ಭಾರತವಾಗಿದೆ. ಈ ಸಂದರ್ಭದಲ್ಲಿ ಮಹಾಪುರಷರನ್ನು […]