ನಿಮ್ಮ ಕಾರನ್ನು ಕನಸಿನ ಕಾರನ್ನಾಗಿ ಮಾರ್ಪಡಿಸಿಕೊಳ್ಳಿ A to Z Car Accessories ನಲ್ಲಿ

ಸಾಮಾನ್ಯ ಕಾರನ್ನು ನಿಮ್ಮ ಕನಸಿನ ಕಾರನ್ನಾಗಿ ಮಾರ್ಪಡಿಸಿಕೊಳ್ಳಲು ಅತ್ಯುತ್ತಮ ಅವಕಾಶ A to Z Car Accessories ನಲ್ಲಿದೆ. ನಿಮ್ಮ ಕಾರುಗಳ ಆಡಿಯೋ ಸಿಸ್ಟಮ್ ಮತ್ತು ಸ್ಪೀಕರ್ ಅಪ್ ಗ್ರೇಡ್, ಸಬ್ ವೂಫರ್ ಮತ್ತು ಡೋರ್ ಡ್ಯಾಂಪಿಂಗ್, ಸೆರಾಮಿಕ್ ಮತ್ತು ಟೆಫ್ಲಾನ್ ಕೋಟಿಂಗ್, ಅಲಾಯ್ ವ್ಹೀಲ್ ಮತ್ತು ಬ್ರ್ಯಾಂಡೆಡ್ ಟಯರ್ಸ್, ವ್ಹೀಲ್ ಅಲೈನ್ ಮೆಂಟ್ ಬ್ಯಾಲೆಂಸಿಂಗ್, ಇಂಟೀರಿಯರ್ ಕ್ಲೀನಿಂಗ್ ಮತ್ತು ಗ್ಲಾಸ್ ಟ್ರೀಟ್ ಮೆಂಟ್ ಮತ್ತು ಎಲ್ಲಾ ರೀತಿಯ ಕಾರ್ ಮಾಡಿಫಿಕೇಷನ್ ಗಾಗಿ ಒಂದೇ ಸ್ಥಳ A […]

ತೋನ್ಸೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕುಸುಮ ರವೀಂದ್ರ ಹಾಗೂ ಅರುಣ್ ಫೆರ್ನಾಂಡಿಸ್ ಆಯ್ಕೆ

ಉಡುಪಿ: ತೋನ್ಸೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಆ.17ರಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಕುಸುಮ ರವೀಂದ್ರ ಗುಜ್ಜರುಬೆಟ್ಟು ಹಾಗೂ ಉಪಾಧ್ಯಕ್ಷರಾಗಿ ಅರುಣ್ ಫೆರ್ನಾಂಡಿಸ್ ಕಂಬಳತೋಟ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪಡುತೋನ್ಸೆ ಗ್ರಾಮೀಣ ಕಾಂಗ್ರೆಸ್‌ನ ಅಧ್ಯಕ್ಷ ರಘುರಾಮ್ ಶೆಟ್ಟಿ, ಕೆಪಿಸಿಸಿ ಪ್ಯಾನೇಲಿಷ್ಟ್‌ ವೆರೋನಿಕಾ ಕರ್ನೇಲಿಯೋ, ಉಡುಪಿ ಬ್ಲಾಕ್ ಕಾಂಗ್ರೆಸ್ ಎಸ್ […]

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕಾರ್ಯವೈಖರಿ ಮೆಚ್ಚಿ ಪೆರ್ಡೂರು ಗ್ರಾ.ಪಂ. ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷೆ ಚೇತನಾ ಶೆಟ್ಟಿ ಬಿಜೆಪಿ ಸೇರ್ಪಡೆ

ಉಡುಪಿ: ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾಳಜಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕಾರ್ಯ ವೈಖರಿ, ಜನಪರ ಕಾಳಜಿಯನ್ನು ಮೆಚ್ಚಿ ಪೆರ್ಡೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷೆ ಚೇತನಾ ಶೆಟ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡಸುಂದರ್ ಶೆಟ್ಟಿ ಆ 17ರಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಜಿಲ್ಲಾ ಬಿಜೆಪಿ […]

ಪ.ಜಾತಿ ಕ್ರೀಡಾಪಟುಗಳಿಗೆ ಜಿಮ್ ಸ್ಥಾಪನೆಗಾಗಿ ಪ್ರೋತ್ಸಾಹಧನ ಲಭ್ಯ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023-24ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಅಂತರಾಷ್ಟ್ರೀಯ/ರಾಷ್ಟ್ರೀಯ/ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಶೇ.75ರಷ್ಟು ಸಹಾಯಧನ ರೂಪದಲ್ಲೂ ಶೇ.25ರಷ್ಟು ಸ್ವಯಂಭರಿಸುವ ಷರತ್ತಿನೊಡನೆ ರೂ.20.00ಲಕ್ಷಗಳ ಘಟಕ ವೆಚ್ಚದ ಜಿಮ್ ಸ್ಥಾಪನೆಗಾಗಿ ಸಹಾಯಧನ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಆದ್ದರಿಂದ ಪರಿಶಿಷ್ಟ ಜಾತಿ ಅರ್ಹ ಕ್ರೀಡಾಪಟುಗಳು ತಮ್ಮ ಪ್ರಸ್ತಾವನೆಗಳನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವುದು.ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 31 […]

ಮಂಗಳೂರು: ಅಸ್ಮಿತಾಯ್ ಕೊಂಕಣಿ ಚಿತ್ರದ ಟ್ರೈಲರ್ ಬಿಡುಗಡೆ

ಮಂಗಳೂರು: ಮಾಂಡ್ ಸೊಭಾಣ್ ನಿರ್ಮಾಣದ ಕೊಂಕಣಿ ಚಲನಚಿತ್ರ ಅಸ್ಮಿತಾಯ್ ಇದರ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಆ. 13 ರಂದು ಮಂಗಳೂರಿನ ಭಾರತ್ ಸಿನೆಮಾದಲ್ಲಿ ನಡೆಯಿತು. ಅನಿವಾಸಿ ಉದ್ಯಮಿ ರೊನಾಲ್ಡ್ ಪಿಂಟೊ ಇವರು ಡೋಲು ಬಾರಿಸುವ ಮೂಲಕ ಟ್ರೈಲರ್ ಬಿಡುಗಡೆ ಮಾಡಿದರು. ಚಿತ್ರದ ಪೋಸ್ಟರ್ ಅನ್ನು ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂತೇರೊ ಹಾಗೂ ಕುಕ್ಕುಟ ಕ್ಷೇತ್ರದ ಮುಂಚೂಣಿ ಉದ್ಯಮ ಐಡಿಯಲ್ ಚಿಕನ್ಸ್ ಇದರ ಮಾಲಕ ವಿನ್ಸೆಂಟ್ ಕುಟಿನ್ಹಾ ಪ್ರೀಮಿಯರ್ ಪ್ರದರ್ಶನದ ಟಿಕೇಟ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. […]