ಪವರ್ ತಂಡದ ಸದಸ್ಯೆ ಸುಗುಣಾ ಶಂಕರ್ ಅವರಿಗೆ ಮಹಿಳಾ ಉದ್ಯಮಿ ಸಾಧಕ ಪ್ರಶಸ್ತಿ
ಬೆಂಗಳೂರು: ಎಂಜಿನಿಯರಿಂಗ್ ಮ್ಯಾನುಫಾಕ್ಚರರ್ ಸಣ್ಣ ಮತ್ತು ಮಧ್ಯಮ ಎಂಟರ್ಪ್ರೂನರ್ಸ್ ರಿಸೋರ್ಸ್ ಗೂಪ್ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಬೆಂಗಳೂರಿನ ಖಾಸಗಿ ಹೋಟಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪವರ್ ತಂಡದ ಸದಸ್ಯೆ ಸುಗುಣಾ ಶಂಕರ್ ಮಹಿಳಾ ಉದ್ಯಮಿ ಸಾಧಕ ಪ್ರಶಸ್ತಿ ಪಡೆದುಕೊಂಡರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇ.ಎಂ.ಇ.ಆರ್.ಜಿ ಅಧ್ಯಕ್ಷೆ ಸುಮಿತಾ ನಾಯಕ್, ಸಿಂಬಯೋಸಿಸ್ ಕಾನೂನು […]
ಸ್ಥಿರಾಸ್ತಿಗಳ ಮಾರುಕಟ್ಟೆ ದರ ಪರಿಷ್ಕರಣೆ: ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕು ವ್ಯಾಪ್ತಿಯ ಎಲ್ಲಾ ಸ್ಥಿರಾಸ್ತಿಗಳ ಮಾರುಕಟ್ಟೆ ದರಗಳನ್ನು, ತಹಶೀಲ್ದಾರರ ಅಧ್ಯಕ್ಷತೆಯಲ್ಲಿ, ಉಡುಪಿ ತಾಲೂಕು ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿ ಸಭೆಯಲ್ಲಿ ಪರಿಷ್ಕರಿಸಿ, ಇದರ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ನಗರದ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ. ಈ ಕುರಿತು ಸಾರ್ವಜನಿಕರು ಸಲಹೆ, ಸೂಚನೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಉಡುಪಿ ಹಿರಿಯ ಉಪ ನೋಂದಣಿ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ ಎಂದು […]
ಮಂಗಳೂರು: ಎಂಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಅನಿಲ್ ಲೋಬೊ ತಂಡ ಅವಿರೋಧವಾಗಿ ಪುನರಾಯ್ಕೆ
ಮಂಗಳೂರು: ಕಥೋಲಿಕ್ ಕೊ – ಅಪರೇಟಿವ್ ಬ್ಯಾಂಕ್ (ನಿ) ಆಡಳಿತ ಮಂಡಳಿ ಚುನಾವಣೆ ಆ. 13 ರಂದು ನಾಮಪತ್ರ ಸಲ್ಲಿಕೆಯೊಂದಿಗೆ ಪ್ರಾರಂಭವಾಯಿತು. 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಆ20 ರಂದು ನಾಮಪತ್ರ ಪರಿಶೀಲನೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲಾ 14 ಅರ್ಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ದವಾಗಿರುವುದರಿಂದ, ರಿಟರ್ನಿಂಗ್ ಅಧಿಕಾರಿ ಸುಧೀರ್ ಕುಮಾರ್ ಜೆ. ಅವರು ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಚುನಾಯಿತರೆಂದು ಫೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಕಥೋಲಿಕ್ ಕೊ-ಅಪರೇಟಿವ್ ಬ್ಯಾಂಕ್ (ಎಂ.ಸಿ.ಸಿ.ಬ್ಯಾಂಕ್) ಇದರ ಆಡಳಿತ ಮಂಡಳಿಯ ಎಲ್ಲಾ […]
ಬಸ್ರೂರು: ಪ್ರಾಚೀನ ಕಾಲದ ಅಪರೂಪದ ಮೈಲಾರ ಆರಾಧನೆಯ ಶಿಲ್ಪ ಪತ್ತೆ
ಬಸ್ರೂರು: ಮೈಲಾರ ಆರಾಧನೆಯು ಪ್ರಾಚೀನ ಆರಾಧನೆಯಾಗಿತ್ತು ಮತ್ತು ದಕ್ಷಿಣ ಭಾರತದಲ್ಲಿ ಬಹಳ ಜನಪ್ರಿಯವಾಗಿತ್ತು. ಈ ಆರಾಧನೆಯು ಕರಾವಳಿ ಪ್ರದೇಶದಲ್ಲಿ ಸಹ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ವಿಶ್ವಾಸಾರ್ಹ ಪುರಾವೆಗಳು ಕುಂದಾಪುರದ ಬಳಿಯ ಬಸ್ರೂರು ಎಂಬಲ್ಲಿಯೂ ಕಂಡುಬಂದಿದೆ ಎಂದು ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜಿನ ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಂದೆರಡು ತಿಂಗಳ ಹಿಂದೆ, ಮೈಲಾರ ಮತ್ತು ಮೈಲಾಲಾದೇವಿಯು ಅಲಂಕೃತವಾದ ಕುದುರೆಯ ಮೇಲೆ ತಮ್ಮ ಬಲಗೈಯಲ್ಲಿ ತಮ್ಮ ಖಡ್ಗಗಳನ್ನು ಹಿಡಿದು ಕುಳಿತಿರುವ ಒಂದು ಸಣ್ಣ ಕಲ್ಲಿನ ಶಿಲ್ಪವು […]
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ವಿರುದ್ದದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ವಿರುದ್ಧ ಆರಂಭಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನಡ್ಡಾ ವಿರುದ್ಧ ಐಪಿಸಿ ಸೆಕ್ಷನ್ 171-ಎಫ್ ಅಡಿಯಲ್ಲಿ ‘ಅಸ್ಪಷ್ಟ ದೂರಿನಲ್ಲಿ’ ‘ಸಡಿಲವಾಗಿ ಹೊರಿಸಲಾದ ಅಪರಾಧದ’ ಆಧಾರದ ಮೇಲೆ ಎಫ್‌ಐಆರ್ ಅನ್ನು ‘ಅಜಾಗರೂಕತೆಯಿಂದ’ ದಾಖಲಿಸಲಾಗಿದೆ ಎಂದು ಕಂಡುಕೊಂಡಿದೆ. ಈ ನಿಬಂಧನೆಯು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಅಥವಾ ಪ್ರಲೋಭನೆಯನ್ನು ದಂಡಿಸುತ್ತದೆ. ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಅರ್ಜಿದಾರರ ವಿರುದ್ಧ […]