ಪೌಷ್ಠಿಕ ಆಹಾರ ಕಿಟ್ ವಿತರಣೆ ಹಾಗೂ ಕ್ಷಯ ರೋಗ ಮಾಹಿತಿ ಕಾರ್ಯಾಗಾರ

ಉಡುಪಿ: ದೇಶದಲ್ಲಿ ಒಟ್ಟು ಇಪ್ಪತ್ತೈದು ಲಕ್ಷ ತೊಂಬತ್ತು ಸಾವಿರ ಕ್ಷಯ ರೋಗಿಗಳು ಇದ್ದಾರೆ ಎನ್ನುವ ಮಾಹಿತಿ ಇದೆ. ಇದಕ್ಕೆ ಕಾರಣ ಪೌಷ್ಟಿಕ ಆಹಾರದ ಕೊರತೆ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹರಡುವಿಕೆ. ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡುವುದರಿಂದ ಪೌಷ್ಠಿಕತೆಯ ಕೊರತೆಯನ್ನು ಹೋಗಲಾಡಿಸಿ ಕ್ಷಯ ರೋಗವನ್ನು ನೀಗಿಸಬಹುದು. ಪ್ರಧಾನಿ ನರೇಂದ್ರ ಮೋದಿಯವ ಕ್ಷಯ ಮುಕ್ತ ಭಾರತದ ಆಶಯಕ್ಕಾಗಿ ಜಿಲ್ಲೆಯನ್ನು ಕ್ಷಯ ಮುಕ್ತವನ್ನಾಗಿಸಲು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಲಯನ್ಸ್ ಅಂಡ್ ಲಿಯೋ ಕ್ಲಬ್ ಪರ್ಕಳ , ಅಪ್ಪು […]

ಉಡುಪಿ ತುಳುನಾಡ ಟೈಗರ್ಸ್ ನಿಂದ ಮೂರನೇ ವರ್ಷದ ಹುಲಿ‌ ಕುಣಿತ

ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಜೇಶ್ ಸುವರ್ಣ ನೇತೃತ್ವದಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ಮೂರನೇ ವರ್ಷದ ಹುಲಿ‌ ಕುಣಿತ ನಡೆಯಲಿದೆ.

ಆ. 25 ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಗಸ್ಟ್ 25ರ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅನ್ನ ಪ್ರಸಾದದೊಂದಿಗೆ ನೆರವೇರಲಿದೆ. ಕ್ಷೇತ್ರದ ವಿಶೇಷ ಸಾನಿಧ್ಯವಾದ ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಸಂಪನ್ನಗೊಳ್ಳಲಿರುವ ಈ ಮಹಾನ್ ವ್ರತ ಪೂಜೆಯು ಸಂಜೆ 5 ರಿಂದ ಆರಂಭಗೊಳ್ಳಲಿದೆ. ರಾತ್ರಿಯ ಮಹಾಪೂಜೆಯಲ್ಲಿ ವಿಶೇಷ ಸೋಣರತಿ ಸೇವೆ ನಡೆಯಲಿದೆ. ಈ ಪೂಜೆಯು ಸಾಮೂಹಿಕವಾಗಿ ಭಕ್ತರ ಕೊಡುವಿಕೆಯೊಂದಿಗೆ ನೆರವೇರಲಿರುವುದರಿಂದ ಆಸಕ್ತ […]

ಕೋಟ ಮೂರ್ತೆದಾರರ ಸ.ಸಂ. ಅಧ್ಯಕ್ಷರಾಗಿ ಕೆ.ಕೊರಗ ಪೂಜಾರಿ ಪುನರಾಯ್ಕೆ

ಕುಂದಾಪುರ: ಕೋಟ ಮೂರ್ತೆದಾರರ ಸ.ಸಂ.ದ 2023-24 ರಿಂದ 2027-28 ಸಾಲಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಮ ಪೂಜಾರಿ, ಪಿ.ಕೃಷ್ಣ ಪೂಜಾರಿ, ಜಯರಾಮ ಪೂಜಾರಿ, ಕೆ.ಕೊರಗ ಪೂಜಾರಿ, ಮಂಜುನಾಥ ಪೂಜಾರಿ, ರಾಜು ಪೂಜಾರಿ, ಜಿ.ಸಂಜೀವ ಪೂಜಾರಿ, ಕೃಷ್ಣ ಪೂಜಾರಿ ಪಾರಂಪಳ್ಳಿ, ಭಾರತಿ ಎಸ್ ಪೂಜಾರಿ, ಪ್ರಭಾವತಿ ಡಿ ಬಿಲ್ಲವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ಮಂಡಳಿ ಅಧ್ಯಕ್ಷರಾಗಿ ಕೆ.ಕೊರಗ ಪೂಜಾರಿ, ಉಪಾಧ್ಯಕ್ಷರಾಗಿ ಜಯರಾಮ್ ಪೂಜಾರಿ, ಪುನರಾಯ್ಕೆಗೊಂಡಿದ್ದು, ಸಂಘದ ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ಜ್ಯೋತಿ […]

ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ತೆ 123 ನೇ ಭಜನಾ ಸಪ್ತಾಹ

ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ 123 ನೇ ಭಜನಾ ಸಪ್ತಾಹ ಆ. 21 ರಿಂದ ಆ 28ವರೆಗೆ ಜರುಗಲಿದೆ. ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಸೋಮವಾರದಂದು ದೇವಳದ ಪ್ರಧಾನ ಅರ್ಚಕ ವಿನಾಯಕ ಭಟ್ ದೇವರಿಗೆ ಆರತಿ ಬೆಳಗಿಸಿ ಬಳಿಕ ದೀಪ ಬೆಳಗಿಸಿ ಚಾಲನೆ ನೀಡಿದರು. ಭಕ್ತರು ಜೈ ವಿಠಲ್ ಹರಿ ವಿಠಲ್ ಪಠಿಸಿದರು. ಶ್ರೀ ವಿಠೋಭ ರುಖುಮಾಯಿ ದೇವರ ಪೂಜೆ ನಡೆಯಿತು. ವಿವಿಧ ಭಜನಾ ತಂಡಗಳಿಂದ1 ವಾರಗಳ ಕಾಲ ಅಹೋರಾತ್ರಿ ಭಜನಾ ಮಹೋತ್ಸವ ನಡೆಯಲಿದೆ. […]