ಜಿಲ್ಲಾ ಮಟ್ಟದ  ಈಜು ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ  ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕುಂದಾಪುರ : ಉಡುಪಿ ಜಿಲ್ಲಾ ಪದವಿ  ಪೂರ್ವ ಶಿಕ್ಷಣ ಇಲಾಖೆ ಹಾಗೂ ಎಂ. ಜಿ. ಎಮ್ ಕಾಲೇಜು ಉಡುಪಿ ಇವರ  ಜಂಟಿ ಆಶ್ರಯದಲ್ಲಿ ಆ 24 ರಂದು ಮಣಿಪಾಲ್  ಮರೀನಾ  ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ  ಶ್ರೀ ವೆಂಕಟರಮಣ  ಪದವಿ  ಪೂರ್ವ ಕಾಲೇಜಿನ  ಶಶಾಂಕ್ Breast stroke ನಲ್ಲಿ ಪ್ರಥಮ, ಶ್ರವಣ್ Freestyle ನಲ್ಲಿ ದ್ವಿತೀಯ, ಅಶ್ವಿನ್  Back stroke ನಲ್ಲಿ ದ್ವಿತೀಯ, ಓಂಕಾರ್ Butterfly ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ […]

ಫ್ರೆಂಡ್ಸ್ ಫಾರೆವರ್‌ ಇಂಟರ್‌ ನ್ಯಾಷನಲ್ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದ್ಯಾರ್ಥಿನಿ ಸೋನಿಯಾ ಕ್ಯಾಥಿ ಲಸ್ರಾದೊ ಭಾಗಿ

ಮಂಗಳೂರು: ಬಿಜೈ ನಿವಾಸಿ ಕ್ಲಿಫರ್ಡ್ ಮತ್ತುಕ್ವೀನಿ ಲಸ್ರಾದೊ ದಂಪತಿಗಳ ಮಗಳಾದ ಸೋನಿಯಾ ಕ್ಯಾಥಿ ಲಸ್ರಾದೊ ಇವರು ಅಮೆರಿಕದ ಡರ್ಹಮ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ‘ಫ್ರೆಂಡ್ಸ್ ಫಾರೆವರ್‌ ಇಂಟರ್‌ ನ್ಯಾಷನಲ್’(ಎಫ್‌ಎಫ್‌ಐ) ಸಂಸ್ಥೆಯು ನಡೆಸುತ್ತಿರುವ 10 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟಿದ್ದರು. ಈ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ವೃತ್ತಿಪರ ನಾಯಕತ್ವದ ಗುಂಪುಗಳು, ನಾಗರಿಕ ಸಂಸ್ಥೆಗಳು ಇತ್ಯಾದಿಗಳೊಂದಿಗೆ ಕೆಲಸ ಮಾಡುತ್ತದೆ. ಇದು ವೈಯಕ್ತಿಕ ನಾಯಕತ್ವ ಮತ್ತು ಸಮುದಾಯದ ಮಟ್ಟದ ಕ್ರಿಯಾಶೀಲತೆಯನ್ನು ಗಮನಿಸುವ ಒಂದು ವಿಶ್ವವಿದ್ಯಾಲಯೋತ್ತರ ಸಂಸ್ಥೆಯಾಗಿದೆ. ಎಫ್‌ಎಫ್‌ಐ ಲಾಭರಹಿತ […]

ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ ಅತ್ಯಾಧುನಿಕ ಮೊಬೈಲ್ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಮಣಿಪಾಲ: ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (MCODS)ನಲ್ಲಿರುವ ಸಾರ್ವಜನಿಕ ಆರೋಗ್ಯ ದಂತವೈದ್ಯಶಾಸ್ತ್ರ ವಿಭಾಗವು ತಮ್ಮ ಅತ್ಯಾಧುನಿಕ ಮೊಬೈಲ್ ಡೆಂಟಲ್ ಕ್ಲಿನಿಕ್ ಉದ್ಘಾಟನೆಯೊಂದಿಗೆ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ. ಉತ್ತಮ ವ್ಯೆದ್ಯಕೀಯ ವ್ಯವಸ್ಥೆ ಹಾಗು ಹಣಕಾಸಿನ ತೊಂದರೆಯ ಕಾರಣದಿಂದಾಗಿ ಮೌಖಿಕ ಆರೋಗ್ಯ ಸೇವೆಗಳನ್ನು ಹಳ್ಳಿಗಾಡಿನ ಸಮುದಾಯಗಳನ್ನು ತಲುಪಲು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ, ಈ ಅಂತರವನ್ನು ಪರಿಣಾಮಕಾರಿಯಾಗಿ ನಿವಾರಿಸಲು ಹೊಸ ಮೊಬೈಲ್ ಡೆಂಟಲ್ ಕ್ಲಿನಿಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಉಪಕ್ರಮವು ಉಡುಪಿ ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ […]

ನಾಳೆ(ಆ. 27) ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮ್ಯಾರಥಾನ್

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ, ಯುವ ಸಬಲೀಕರಣ ಸೇವೆಗಳು, ಡಾ. ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ ಇವರ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಅಮೆಚುರ್ ಅಥ್ಲೆಟಿಕ್ಸ್ ಅಸೋಸಿಯೇಷನ್, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್.ಸಿ.ಡಿ ವಿಭಾಗ ಮತ್ತು ಲಯನ್ಸ್ […]

55 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ವಶ; 34,000 ರೂ. ದಂಡ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆಗಸ್ಟ್ 19 ರಿಂದ 24 ರ ವರೆಗೆ ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 55 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 34,000 ರೂ. ದಂಡ ವಿಧಿಸಲಾಯಿತು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆಯ ವಸ್ತುಗಳನ್ನು ಬಳಸುವಂತೆ ಹಾಗೂ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಳಸಿದ್ದಲ್ಲಿ ಬಾರಿ ದಂಡವನ್ನು ವಿಧಿಸಿ, ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಲಾಗುವುದು. ಜುಲೈನಿಂದದ ಈವರೆಗೆ ಒಟ್ಟು 425 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 1,04,200 ರೂ. […]