ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ವತಿಯಿಂದ ರಕ್ಷಾ ಬಂಧನ ದಿನಾಚರಣೆ

ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸೇವಾಕೇಂದ್ರದಲ್ಲಿ ರಕ್ಷಾ ಬಂಧನದ ಕಾರ್ಯಕ್ರಮದಲ್ಲಿ ದಾವಣಗೆರೆ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜೀ ಪ್ರವಚನ ನೀಡುತ್ತಾ, ಪರಮಾತ್ಮನ ರಕ್ಷಣೆಯೇ ಸತ್ಯ ರಕ್ಷಾ ಬಂಧನವಾಗಿದೆ. ಮಾನವರು ಯಾವುದೇ ಬಂಧನದಲ್ಲಿ ಇರಲು ಬಯಸುವುದಿಲ್ಲ, ಅದರೆ ಪರಮಾತ್ಮನ ರಕ್ಷಣೆಯ ಬಂಧನದಲ್ಲಿ ಇರಲು ಬಯಸುತ್ತಾರೆ.ಲೌಕಿಕ ಸಹೋದರ- ಸಹೋದರಿಯರು ಬೇರೆ ಬೇರೆ ಇದ್ದಾಗ ರಕ್ಷಣೆ ನೀಡಲು ಸಾಧ್ಯವಾಗುವುದಿಲ್ಲ. ನಮೆಲ್ಲರನ್ನೂ ರಕ್ಷಣೆ ಮಾಡುವವನು ಪರಮಾತ್ಮ ನಾವೆಲ್ಲರೂ ಅವನ ಮಕ್ಕಳು. ಈ ಸತ್ಯವನ್ನು ಅರಿತು ಬಾಳಬೇಕಾಗಿದೆ ಎಂದರು. ಕಾರ್ಯಕ್ರಮಕ್ಕೆ […]

ಮಂಗಳೂರು: ಎಂಸಿ.ಸಿ. ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅನಿಲ್ ಲೋಬೊ ಪುನರಾಯ್ಕೆ

ಮಂಗಳೂರು: ಇತ್ತೀಚೆಗೆ ನಡೆದ ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ನಿ. ಇದರ ನಿರ್ದೇಶಕ ಮಂಡಳಿಯ 2023-24 ರ ಅವಧಿಯ ಚುನಾವಣೆಯಲ್ಲಿ ಅನಿಲ್ ಲೋಬೊ ನೇತೃತ್ವದ 14 ಅರ್ಭರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅ 28 ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅನಿಲ್ ಲೋಬೊ, ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆರಾಲ್ಡ್ ಜೂಡ್ ಡಿ’ಸಿಲ್ವ ಆಯ್ಕೆಯಾಗಿರುತ್ತಾರೆ. ಸುಧೀರ್ ಕುಮಾರ್ ಜೆ., ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಇವರು ಚುನಾವಣಾಧಿಕಾರಿಯಾಗಿದ್ದರು. ಎನ್ ಜೆ. ಗೋಪಾಲ್, […]

120 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ವಶ: 14,000 ರೂ. ದಂಡ ವಸೂಲಿ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸೋಮವಾರ ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ 120 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು, 14,000 ರೂ. ದಂಡ ವಸೂಲಿ ಮಾಡಲಾಯಿತು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆಯ ವಸ್ತುಗಳನ್ನು ಬಳಸುವಂತೆ ಸೂಚನೆ ನೀಡಲಾಯಿತು. ದಾಳಿಯಲ್ಲಿ ನಗರಸಭೆಯ ಪೌರಾಯುಕ್ತರು, ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನೀಟರಿ ಸೂಪರ್‌ವೈಸರ್‌ನವರು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಪ್ರಸಕ್ತ ಸಾಲಿನ ಜುಲೈನಿಂದ ಈವರೆಗೆ ಒಟ್ಟು 545 […]

ಮಂಗಳೂರು: ಬಸ್ ನಿಂದ ಆಯತಪ್ಪಿ ರಸ್ತೆಗೆ ಬಿದ್ದು ಕಂಡಕ್ಟರ್ ಮೃತ್ಯು

ಮಂಗಳೂರು: ಇಲ್ಲಿನ ಸಿಟಿಬಸ್ ನಲ್ಲಿ ಬಾಗಿಲ ಬಳಿ ನಿಂತಿದ್ದ ಬಸ್ ಕಂಡಕ್ಟರ್ ಆಯತಪ್ಪಿ ಬಿದ್ದು ಸಾವನಪ್ಪಿರುವ ಘಟನೆ ಮಂಗಳವಾರದಂದು ನಂತೂರ್ ಸರ್ಕಲ್ ಬಳಿ ನಡೆದಿದೆ. ಮೃತ ಕಂಡಕ್ಟರ್ ನನ್ನು ಈರಯ್ಯ(23) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಸಿಟಿ ಬಸ್ ಪದುವದಿಂದ ಶಿವಭಾಗ್ ಕಡೆ ಹೋಗುವ ಸಂದರ್ಭ ನಂತೂರು ವೃತ್ತದ ಬಳಿ ಬಸ್ಸಿನ ಎದುರಿನ ಬಾಗಿಲ ಬಳಿ ನಿಂತಿದ್ದ ಈರಯ್ಯ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಈರಯ್ಯನನ್ನುಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ […]

ಹಾವೇರಿ: ಪಟಾಕಿ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ; ಮೂವರು ಸಜೀವ ದಹನ

ಹಾವೇರಿ: ಜಿಲ್ಲೆಯ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡು ಮೂರು ಜನ ಸಾವನ್ನಪ್ಪಿದ್ದಾರೆ. ಮೂವರು ಮೃತರು ಗೋದಾಮಿನೊಳಗೆ ಸಂಪೂರ್ಣವಾಗಿ ಸುಟ್ಟುಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಜಿಲ್ಲೆಯ ಹಾವೇರಿ-ಹಾನಗಲ್ ಮುಖ್ಯರಸ್ತೆಯ ಆಲದಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರ ಗುರುತು ಇನ್ನೂ ಬಹಿರಂಗವಾಗಿಲ್ಲ, ಆದರೆ ಅವರೆಲ್ಲರೂ ಹಾವೇರಿ ಮೂಲದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗೋದಾಮಿನಲ್ಲಿ ಪಟಾಕಿ ತಯಾರಿಸುವ ಕಾರ್ಯ ಭರದಿಂದ ಸಾಗಿತ್ತು. ಬೆಂಕಿ ತಗಲಲು […]