ಉಡುಪಿ:ಕೆನರಾ ರಿಟೇಲ್ ಎಕ್ಸ್‌ಪೋ 2025 ಉದ್ಘಾಟನಾ ಸಮಾರಂಭ

ಉಡುಪಿ:ಕೆನರಾ ರಿಟೇಲ್ ಎಕ್ಸ್‌ಪೋ 2025 ಉದ್ಘಾಟನಾ ಸಮಾರಂಭವು ಅ.11ರಂದು ಸಮಯ ಬೆಳಿಗ್ಗೆ 09.30 ಕ್ಕೆ ಎಂಜಿಎಂ ಕಾಲೇಜು ಮೈದಾನ, ಉಡುಪಿ ಇಲ್ಲಿ ನಡೆಯಿತು. ಕೆನರಾ ರಿಟೇಲ್ ಎಕ್ಸ್‌ಪೋ 2025 ಅ.11 ಮತ್ತು 12 ರಂದು ಬೆಳಿಗ್ಗೆ 09.30 ರಿಂದ ಸಂಜೆ 6.30 ರವರೆಗೆ ಇರಲಿದೆ. ಉದ್ಘಾಟನಾ ಸಮಾರಂಭವನ್ನು ಉಡುಪಿಯ ಶಾಸಕರಾದ ಯಶ್ಪಾಲ್ ಸುವರ್ಣ ಇವರು ನೆರವೇರಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಆರ್ಥಿಕವಾಗಿ 11 ನೇ ಸ್ಥಾನದಲ್ಲಿದ್ದ ಭಾರತ ಇವತ್ತು 4ನೇ ಸ್ಥಾನಕ್ಕೆ ಬಂದಿದೆ. ಭಾರತದ ಆರ್ಥಿಕತೆ ಬಹಳಷ್ಟು […]

ಉಡುಪಿ:ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ನೊಂದಣಿ ಬಿಟ್ಟು ಹೋದಲ್ಲಿ ಸಹಾಯವಾಣಿಗೆ ಕರೆ ಮಾಡಲು ಸೂಚನೆ

ಉಡುಪಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22ರಿಂದ ಪ್ರಾರಂಭಿಸಿದ್ದು, ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಸರಕಾರದ ಆದೇಶದಂತೆ ಅ.18ರವರೆಗೆ ಸಮೀಕ್ಷೆ ಕಾರ್ಯವನ್ನು ಮುಂದೂಡಲಾಗಿದೆ. ಈ ಸಮೀಕ್ಷೆ ಸಮಯದಲ್ಲಿ ಸಮೀಕ್ಷೆದಾರರು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡದೆ ಬಿಟ್ಟು ಹೋದಲ್ಲಿ ರಾಜ್ಯ ಮಟ್ಟದ ಸಹಾಯವಾಣಿ – 8050770004, ಜಿಲ್ಲಾ ಮಟ್ಟದ ಸಹಾಯವಾಣಿ- 0820-2574881, ಉಡುಪಿ/ಬ್ರಹ್ಮಾವರ/ಕಾಪು ಮಟ್ಟದ ಸಹಾಯವಾಣಿ 0820-2520739, ಬೈಂದೂರು/ಕುಂದಾಪುರ- 9972294198, ಕಾರ್ಕಳ-ಹೆಬ್ರಿ- 08258- 298610 ಸಹಾಯವಾಣಿಗೆ ಕಚೇರಿ ಅವಧಿಯಲ್ಲಿ […]

ಚೀನಾದ ರಫ್ತಿನ ಮೇಲೆ ಶೇ.100ರಷ್ಟು ಸುಂಕ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಚೀನಾದ ಮೇಲೆ ಹೆಚ್ಚುವರಿ ಶೇ.100 ರಷ್ಟು ಸುಂಕವನ್ನು ಘೋಷಿಸದ್ದಲ್ಲದೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಶೃಂಗಸಭೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೌದು, ಎರಡು ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಯುದ್ಧ ಉಲ್ಬಣಗೊಂಡಿರುವುದರಿಂದ, ಚೀನಾ ಪಾವತಿಸುತ್ತಿರುವ ಯಾವುದೇ ಇತರ ಸುಂಕಗಳಿಗಿಂತ ನವೆಂಬರ್ 1 ರಿಂದ ಚೀನಾದ ರಫ್ತಿನ ಮೇಲೆ 100 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಟ್ರಂಪ್​ ತಮ್ಮ ಸೋಶಿಯಲ್​ ಮೀಡಿಯಾ ಟ್ರೂತ್​ನಲ್ಲಿ ಹೇಳಿದ್ದಾರೆ. ನವೆಂಬರ್ 1 ರಿಂದ ಜಾರಿಗೆ ಬರಲಿರುವ […]

ಕಟಪಾಡಿ: ತ್ರಿಶಾ ಕ್ಲಾಸಸ್ : 25 ದಿನಗಳ ಸಿ.ಎ ಫೌಂಡೇಶನ್ ರಿವಿಷನ್ ತರಗತಿಗಳು ಆರಂಭ

ಉಡುಪಿ: ಸಿ.ಎ ಪೌಂಡೇಶನ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ ತ್ರಿಶಾ ಕ್ಲಾಸಸ್ ವತಿಯಿಂದ ಅಕ್ಟೋಬ‌ರ್13ರಿಂದ 25 ದಿನಗಳ ಸಿ.ಎ ಫೌಂಡೇಶನ್ ರಿವಿಷನ್ ತರಗತಿಯನ್ನು ಆರಂಭಿಸಲಾಗುತ್ತಿದೆ. ಅನುಭವಿ ಅಧ್ಯಾಪಕ ವೃಂದ, ನಾಲ್ಕು ವಿಷಯಗಳ ಸಂಪೂರ್ಣ ಅಧ್ಯಯನ ಐಸಿಎಐ ಮಾದರಿಯ ಪೂರ್ವ ಸಿದ್ಧತಾ ಪರೀಕ್ಷೆ, ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು ಇವೆಲ್ಲವೂ ತರಗತಿಯ ವಿಶೇಷಣಗಳಾಗಿವೆ, ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನ ಎದುರಿಸಲು ಬೇಕಾದ ಆತ್ಮವಿಶ್ವಾಸ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ರಿವಿಶನ್ ತರಗತಿಗಳನ್ನ ಆಯೋಜಿಸಲಾಗಿದೆ. ಆಸಕ್ತರು ಕಟಪಾಡಿಯ ತ್ರಿಶಾ […]

ಬೆಳ್ಮಣ್ ಲಾಡ್ಜ್ ನಲ್ಲಿ ಡೆತ್‌ನೋಟು ಬರೆದಿಟ್ಟು ಯುವಕ ಆತ್ಮಹತ್ಯೆ ಪ್ರಕರಣ: ನಾಲ್ವರು ಗೆಳೆಯರ ಮೊಬೈಲ್ ವಶ.

ಕಾರ್ಕಳ: ಗೆಳೆಯರು ಬ್ಲಾಕ್‌ಮೇಲ್ ಮಾಡಿ ಕಿರುಕುಳ ನೀಡುತ್ತಿರುವುದಾಗಿ ಡೆತ್‌ನೋಟು ಬರೆದಿಟ್ಟು ನಿಟ್ಟೆಯ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆ ನಾಲ್ವರು ಗೆಳೆಯರ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಯೋಮೆಡಿಕಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಿಟ್ಟೆ ಗ್ರಾಮದ ಪರಪ್ಪಾಡಿಯ ಅಭಿಷೇಕ್ ಆಚಾರ್ಯ(23) ಎಂಬವರು ಯುವತಿ ಸೇರಿದಂತೆ ನಾಲ್ವರು ಗೆಳೆಯರು ವಿಡಿಯೋ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು ಡೆತ್‌ನೋಟು ಬರೆದಿಟ್ಟು ಗುರುವಾರ ಬೆಳ್ಮಣ್‌ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ […]