ಉಡುಪಿ ಬಲ್ಲಾಳ್ ಮೊಬೈಲ್ಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ಸ್; ನೀವು ಮಿಸ್ ಮಾಡ್ಕೋಬೇಡಿ!

ಉಡುಪಿ: ಉಡುಪಿ‌ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಇದೀಗ ದೀಪಾವಳಿಯ ಭರ್ಜರಿ ಆಫರ್ ಲಾಂಚ್ ಮಾಡಿದ್ದಾರೆ.ಗ್ರಾಹಕರಿಗೆ ಸೆ.22 ರಿಂದ ಜ.15ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು ಈ ದೀಪಾವಳಿಯನ್ನು ಗ್ರ್ಯಾಂಡ್ ಆಗಿ ಸಂಭ್ರಮಿಸಬಹುದು! ಬಲ್ಲಾಳ್ ಮೊಬೈಲ್ಸ್ ಜೊತೆಗೆ ದೀಪಾವಳಿ ಭರ್ಜರಿಯಾಗಿ ಸಂಭ್ರಮಿಸಿ: ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಲ್ಲಾಳ್ […]

ಉಡುಪಿ:ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ : ಸಹಾಯಧನ ಸೌಲಭ್ಯ

ಉಡುಪಿ: ಕೇಂದ್ರ ಸರ್ಕಾರದ ವತಿಯಿಂದ ಗರ್ಭಿಣಿ / ಬಾಣಂತಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನ ಲಭ್ಯವಿದ್ದು, ಮೊದಲ ಪ್ರಸವದ ಗರ್ಭಿಣಿಯು ಎಲ್.ಎಂ.ಪಿ ದಿನಾಂಕದಿಂದ 150 ದಿನಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮೊದಲನೇ ಕಂತಿನ ಅರ್ಜಿಯನ್ನು ನೋಂದಾಯಿಸಬೇಕು ಹಾಗೂ ಎರಡನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿ ಮತ್ತು 3 ನೇ ಚುಚ್ಚುಮದ್ದು ಪೂರ್ಣಗೊಂಡ ಬಳಿಕ ಅರ್ಜಿಯನ್ನು ನೋಂದಾಯಿಸಬಹುದಾಗಿದೆ. ಮೊದಲನೆ ಕಂತಿನಲ್ಲಿ ರೂ.3000 ಹಾಗೂ ಎರಡನೇ […]

ಉಡುಪಿಯಲ್ಲಿ ದೀಪಾವಳಿ ಸಂಭ್ರಮ: ಶ್ರೀಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ ಸಂಪನ್ನ

ಉಡುಪಿ: ದೇವಾಲಯಗಳ ನಗರಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ಸೋಮವಾರ ರಾತ್ರಿ ಸಂಭ್ರಮದ ಬಲೀಂದ್ರ ಪೂಜೆ ನಡೆಯಿತು. ತುಳುನಾಡಿನಲ್ಲಿ ಬಲೀಂದ್ರ ಪೂಜೆಗೆ ವಿಶೇಷ ಮಹತ್ವವಿದೆ. ಈ ಭಾಗವನ್ನು ಆಳಿದ ಅರಸ ಬಲೀಂದ್ರನಿಗೆ ದೀಪಾವಳಿಯ ವೇಳೆ ಸ್ವಾಗತ ಕೋರಿ ಆತಿಥ್ಯ ನಡೆಸುವುದು ಇಲ್ಲಿನ ಪದ್ಧತಿ. ವರ್ಷಕ್ಕೊಮ್ಮೆ ಅರಸನನ್ನು ಬರಮಾಡಿಕೊಂಡು ಗೌರವಿಸುವುದು ಸಂಪ್ರದಾಯ. ಈ ಆಚರಣೆಯನ್ನು ಬಲೀಂದ್ರ ಪೂಜೆ ಎಂದು ಕರೆಯಲಾಗುತ್ತದೆ. ಭತ್ತದ ಗದ್ದೆಗಳಲ್ಲಿ ದೀಪವಿಟ್ಟು ಬಲೀಂದ್ರನನ್ನು ಕೂಗಿ ‌ಕರೆಯಲಾಗುತ್ತದೆ. ಕೃಷಿ ಸಂಸ್ಕೃತಿಯೊಂದಿಗೆ ಬಲೀಂದ್ರ ಪೂಜೆ ತಳಕು ಹಾಕಿಕೊಂಡಿರುವುದರಿಂದ ಇವತ್ತಿಗೂ […]

ಕೃಷ್ಣ ಮಠದಲ್ಲಿ ಶ್ರೀ ಹಟ್ಟಿಯಂಗಡಿ ಮೇಳದ ಯಕ್ಷ ಪಂಚಮಿ ಉದ್ಘಾಟನೆ

ಉಡುಪಿ: ನಿರಂತರವಾಗಿ 6 ವರ್ಷಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಐದು ದಿನಗಳ ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ. ಶ್ರೀ ಕೃಷ್ಣನ ಕುರಿತಾದ ಯಕ್ಷಾರ್ಚನೆಯನ್ನು ಹಟ್ಟಿಯಂಗಡಿ ಮೇಳದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶೀಪಾದರ ಶುಭಾಶೀರ್ವಾದದೊಂದಿಗೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲೆ, […]

ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು ಲಭ್ಯ – ಪ್ರಶಾಂತ್ ಜತ್ತನ್ನ

ಉಡುಪಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಸಾಲ ಯೋಜನೆಗಳು, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಸರಕಾರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯವನ್ನು ಇಟ್ಟುಕೊಂಡು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿದ್ದು ವಿಶೇಷ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಅವರ […]