ಪಡುಬಿದ್ರಿ: ಹೆದ್ದಾರಿಯಲ್ಲಿ ನಿಂತ ಲಾರಿಗೆ ಸ್ಕೂಟರ್ ಡಿಕ್ಕಿ; ಯುವಕ ಸಾವು

ಉಡುಪಿ: ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾರೆ.ಮೃತರನ್ನು ಮಂಜುನಾಥ ಬೈಲಪ್ಪ ಮುರಗಾಲಿ (21) ಎಂದು ಗುರುತಿಸಲಾಗಿದೆ. ಇವರು ಕಾರ್ಕಳ ಕಡೆಯಿಂದ ಸುರತ್ಕಲ್ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.ರಾತ್ರಿ ವೇಳೆ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಪಾರ್ಕಿಂಗ್ ಲೈಟ್ ಅಥವಾ ಇಂಡಿಕೇಟರ್ ಅಳವಡಿಸದೆ, […]
ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ-ಉಂಡೆಗಳ ಭರ್ಜರಿ ತಯಾರಿ

ಉಡುಪಿ: ಕೃಷ್ಣಭಕ್ತಿ ಮತ್ತು ಜಾನಪದ ಕಲೆಯ ಅಪೂರ್ವ ಸಂಗಮಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಎರಡು ದಿನಗಳ ಕಾಲ ರಥಬೀದಿ ಸಹಿತ ನಗರದ ಮೂಲೆ ಮೂಲೆಗಳಲ್ಲಿ ಕರಾವಳಿಯ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು, ಇಡೀ ನಗರವೇ ಮುಕ್ತ ರಂಗಮಂದಿರವಾಗಿ ಪರಿವರ್ತನೆಯಾಗಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಈ ಬಾರಿ ಬರೋಬ್ಬರಿ 2.50 ಲಕ್ಷ ಚಕ್ಕುಲಿ ಹಾಗೂ ವಿವಿಧ ಬಗೆಯ ಉಂಡೆಗಳನ್ನು ಸಿದ್ಧಪಡಿಸಲಾಗುತ್ತಿದೆ. […]
ಉಡುಪಿ: ಜೆ.ಸಿ.ಬಿ ಆಪರೇಟರ್ ನಾಪತ್ತೆ

ಉಡುಪಿ ಸೆಪ್ಟಂಬರ್ 03: ಕಾಪು ತಾಲೂಕು ನಡ್ಸಾಲು ಗ್ರಾಮದ ಕಂಚಿನಡ್ಕ ನಿವಾಸಿ ಶಿವರಾಮ ಪೂಜಾರಿ (41) ಎನ್ನುವ ವ್ಯಕ್ತಿಯು ಮೂಲ್ಕಿಯಲ್ಲಿ ಜೆಸಿಬಿ ಆಪರೇಟಿಂಗ್ ಕೆಲಸ ಮಾಡಿಕೊಂಡಿದ್ದು, ಆಗಸ್ಟ್ 23 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.5 ಅಡಿ 1 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಗೆ […]
ಮಣಿಪಾಲ MSDC-Orane International School of Beauty & Wellness ವತಿಯಿಂದ ಆರ್ಗ್ಯಾನಿಕ್ ಫೇಸ್ಪ್ಯಾಕ್ ಸ್ಪರ್ಧೆ: ಕಾದಿದೆ ಆಕರ್ಷಕ ಬಹುಮಾನ! ಬೇಗ ನೋಂದಣಿ ಮಾಡಿಕೊಳ್ಳಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಹಾಗೂ Orane International School of Beauty & Wellness ವತಿಯಿಂದ ‘ಕೌಶಲ 2026 – ದಿ ಸ್ಕಿಲ್ ಫೆಸ್ಟ್’ ಆಯೋಜಿಸಲಾಗಿದೆ. ಇದರ ಅಂಗವಾಗಿ ‘ಆರ್ಗ್ಯಾನಿಕ್ ಫೇಸ್ಪ್ಯಾಕ್/ಮಾಸ್ಕ್ ಅಪ್ಲಿಕೇಶನ್ ಸ್ಪರ್ಧೆ’ ನಡೆಯಲಿದೆ. ಸೆಪ್ಟೆಂಬರ್ 19ರಂದು ನಡೆಯಲಿರುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಆಸಕ್ತರು ತಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಬಹುಮಾನಗಳು ಹಾಗೂ ಗಿಫ್ಟ್ ವೋಚರ್ಗಳನ್ನು […]
ಎಂಟು ಸ್ಪರ್ಧೆ, ಎಂಟೂ ಪ್ರಶಸ್ತಿ; ಅಂತಾರಾಷ್ಟ್ರೀಯ ಕಿರೀಟ ಗೆದ್ದ ಉಡುಪಿಯ ಸಚಿತ!

ಉಡುಪಿ: ಥೈಲ್ಯಾಂಡ್ನಲ್ಲಿ ನಡೆದ ‘ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್–2026’ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಪ್ರಥಮ ಪ್ರಶಸ್ತಿ ಹಾಗೂ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಉಡುಪಿ ಪುತ್ತೂರು ನಿವಾಸಿಗಳಾದ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ದಂಪತಿ ಪುತ್ರಿಯಾಗಿರುವ ಸಚಿತ ರಾವ್, ಪ್ರಸ್ತುತ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಗಸ್ಟ್ 19ರಿಂದ 22ರವರೆಗೆ ಥೈಲ್ಯಾಂಡ್ನಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆಯೂ ಉತ್ತಮ ಪ್ರದರ್ಶನ […]