ಸವಿತಾ ಸಮಾಜ ಬಾಂಧವರು ಸಮಾಜದಲ್ಲಿ ಮುಂದೆ ಬರಬೇಕು: ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ: ಸವಿತಾ ಸಮಾಜದವರು ನಾವು ಎಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿ ಕೀಳರಿಮೆಯನ್ನು ಹೋಗಲಾಡಿಸಿ ಸಮಾಜದ ಮುಖ್ಯಧಾರೆಯಲ್ಲಿ ಒಂದಾಗಿ ಮುಂದೆ ಬರಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಮುಂದಿನ ಪೀಳಿಗೆಗೆ ಸಮಾಜದಲ್ಲಿ ಬದಲಾವಣೆ ತರಲು ನಿಮ್ಮಿಂದ ಸಾಧ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸವಿತಾ ಸಮಾಜ ಸಮುದಾಯದ ಸಭಾಂಗಣ ಅಂಬಲಪಾಡಿಯಲ್ಲಿ ಹಮ್ಮಿಕೊಳ್ಳಲಾದ ಸವಿತಾ ಮಹರ್ಷಿ […]

ಕನ್ನಡ ಪುಸ್ತಕ ನೀತಿ ಪುನರ್ ರಚನೆಗಾಗಿ ಸಾರ್ವಜನಿಕರಿಂದ ಸಲಹೆ ಆಹ್ವಾನ

ಉಡುಪಿ: ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಆವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಪುಸ್ತಕೋದ್ಯಮದ ಎಲ್ಲಾ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಠಿಕೋನದಿಂದ ನೋಡುವ ಅಗತ್ಯತೆ ಇರುವುದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ನಿರ್ಧರಿಸಲಾಗಿದೆ. ಇ-ಪುಸ್ತಕ, ಆಡಿಯೋ ಪುಸ್ತಕ ಒಳಗೊಂಡಂತೆ ಆಧುನಿಕ ಪುಸ್ತಕೋದ್ಯಮದ ಸಾಧಕ-ಬಾಧಕಗಳು ಹಾಗೂ ಕನ್ನಡ ಪುಸ್ತಕ ಲೋಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪುಸ್ತಕ ನೀತಿ ರಚನೆ ಆಗಬೇಕಿದ್ದು, ಇದಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಪುಸ್ತಕ ನೀತಿ ಪುನರ್ ರಚನೆಗೆ ಸಾರ್ವಜನಿಕರಿಂದ […]

ಬ್ರಹ್ಮಾವರ: ಎಡಬೆಟ್ಟಿನಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಬ್ರಹ್ಮಾವರ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಬ್ರಹ್ಮಾವರ ತಾಲೂಕು ಮೂಡಹಡು ಗ್ರಾಮದ ಎಡಬೆಟ್ಟು ಪ್ರದೇಶದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರದ ಸ್ವಾಮ್ಯದ ನಿಗಮ/ ಉದ್ಯಮ ಅಥವಾ ಕಂಪೆನಿಗಳು ಅಥವಾ ಗ್ರಾಮ ಪಂಚಾಯತಿಗಳು, ನಗರ ಸ್ಥಳೀಯ ಸಂಸ್ಥೆಗಳು, ಸಂಘಗಳು, ತಾಲೂಕು ಕೃಷಿ ಪ್ರಾಥಮಿಕ ಸಂಘಗಳು, ಸಹಕಾರ ಮಾರಾಟ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘ ಅಥವಾ ವಿ.ಎಸ್.ಎಸ್.ಎನ್, ಹಾಪ್‌ಕಾಮ್ಸ್, ನೋಂದಾಯಿತ ಸಹಕಾರ ಸಂಘಗಳು, ನೋಂದಾಯಿತ ಪ್ರಾಥಮಿಕ ಗ್ರಾಹಕ ಸಹಕಾರ ಸಂಘ, […]

ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ರಂಗ ಶಾಲೆ ಉದ್ಘಾಟನೆ

ಅರೆಹೊಳೆ: ಗ್ರಾಮೀಣ ಪ್ರದೇಶಗಳಲ್ಲಿ ನೃತ್ಯ ಸಂಗೀತ ನಾಟಕಗಳಂತಹ ಕಲೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಅರೆಹೊಳೆ ಪ್ರತಿಷ್ಠಾನವು ಕೈಗೊಂಡಿರುವ ಕೆಲಸಗಳು ಮಾದರಿಯಾಗಲಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ ಎಸ್. ಹೇಳಿದರು. ಅವರು ಅರೆಹೊಳೆಯಲ್ಲಿ ಅರೆಹೊಳೆ ಪ್ರತಿಷ್ಠಾನವು ನಿರ್ಮಿಸಿರುವ ನಂದಗೋಕುಲ ರಂಗ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶತಮಾನದ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್ ಗ್ರಾಮೀಣ ಪ್ರದೇಶಗಳ ಅಗತ್ಯತೆಗಳನ್ನು ಪೂರೈಸಲು ಸದಾ ಶ್ರಮಿಸುತ್ತದೆ ಎಂದು ಅವರು ಹೇಳಿದರು. ಡಾ. ಹಂದಟ್ಟು ಹರೀಶ್ ಹಂದೆ ರಂಗ ಮಂದಿರವನ್ನು ಸೆಲ್ಕೋ ಲೈಟ್ ನ […]

ಜಾತಿ-ಆಧಾರಿತ ಅವಮಾನ ಉದ್ದೇಶವಿಲ್ಲದೆ ಸಂತ್ರಸ್ತರ ಜಾತಿಯನ್ನು ಉಲ್ಲೇಖಿಸುವುದು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ಕಾಯ್ದೆ,1989 ರ ಅಡಿಯಲ್ಲಿ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶವಿಲ್ಲದೆ ಕೇವಲ ವ್ಯಕ್ತಿಯ ಜಾತಿಯ ಹೆಸರನ್ನು ತೆಗೆದುಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ (28 ಜನವರಿ), ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವಿ ಶೈಲೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಅಂಗೀಕರಿಸಿತು ಮತ್ತು ಕಾಯಿದೆಯ ಸೆಕ್ಷನ್ 3 (1) (ಆರ್) ಮತ್ತು (ಎಸ್) ಅಡಿಯಲ್ಲಿ ಅವರ ವಿರುದ್ಧ ಹೊರಿಸಲಾದ ಆರೋಪಗಳನ್ನು ರದ್ದುಗೊಳಿಸಿತು, […]