ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿ ಸೇವೆಗಳು

ಉಡುಪಿ: ಡಾ. ಟಿ.ಎಂ.ಎ. ಪೈ ಆಸ್ಪತ್ರೆಯು ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಸೇವೆಗಳನ್ನು ಪ್ರಾರಂಭಿಸುವುದರೊಂದಿಗೆ ತನ್ನ ವೈದ್ಯಕೀಯ ಸೇವೆಗಳನ್ನು ವಿಸ್ತರಿಸುತ್ತಿದೆ. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮಾಜಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ, 30 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಡಾ. ಗಣೇಶ್ ಪೈ ಸಿ ಅವರು ಈ ವಿಭಾಗದ ನೇತೃತ್ವ ವಹಿಸಲಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಹೊರರೋಗಿಗಳ ಸಮಾಲೋಚನೆಗಳು ಲಭ್ಯವಿರುತ್ತವೆ. ಜಠರಗರುಳಿನ ಕಾಯಿಲೆಗಳು, ಗೆಡ್ಡೆಗಳು, […]
ಕಾರ್ಕಳ: ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ

ಕಾರ್ಕಳ: ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಮತ್ತು ಬೆಳ್ಮಣ್ ಪ್ರದೇಶದ ಸುತ್ತಮುತ್ತಲಿನ ಶಿಕ್ಷಕರ ಸಮರ್ಪಣೆ ಮತ್ತು ಸೇವೆಯನ್ನು ಗೌರವಿಸಲು ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ದಿನಾಂಕ 09.09.2025ರಂದು ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ […]
ಉಡುಪಿ: ಅಶಕ್ತ ಕುಟುಂಬದ ವೈದ್ಯಕೀಯ ನೆರವಿಗಾಗಿ ವಿಭಿನ್ನ ವೇಷ ಧರಿಸಲು ಸಜ್ಜಾದ ಸುಷ್ಮಾ ಬಂಟ್ವಾಳ

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಅಶಕ್ತ ಕುಟುಂಬದ ವೈದ್ಯಕೀಯ ನೆರವಿಗಾಗಿ ಪ್ರಥಮ ಬಾರಿಗೆ ವಿಭಿನ್ನ ವೇಷ ಧರಿಸಿ ಮನೆ ಮನೆಗೆ ತೆರಳಿ ಸುಷ್ಮಾ ಬಂಟ್ವಾಳ ಅವರು ಧನ ಸಂಗ್ರಹಿಸಲು ಮುಂದಾಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸುಷ್ಮಾ ಬಂಟ್ವಾಳ ಅವರು, 76 ಬಡಗಬೆಟ್ಟು ನಿವಾಸಿಗಳಾದ ಜಯಕರ ಬಂಗೇರ ಮತ್ತು ವಿಜಯಲಕ್ಷ್ಮೀ ಬಂಗೇರ ಅವರ ಇಬ್ಬರು ಮಕ್ಕಳಾದ ಕಿಶನ್ ಬಂಗೇರ ಮತ್ತು ಕಿರಣಾ ಬಂಗೇರ 9ನೇ ತರಗತಿವರೆಗೆ ಸಹಜವಾಗಿ ಎಲ್ಲರಂತೆ ಶಾಲೆಗೆ ಹೋಗಿ ಬರುತ್ತಿದ್ದರು. 14ನೇ […]
ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

ವ್ಯಕ್ತಿ ನಾಪತ್ತೆ: ಉಡುಪಿ, ಸೆ.10: ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಶಾಂತಿನಗರ ಜಂಕ್ಷನ್ ಬಳಿಯಿರುವ ಅಪಾರ್ಟ್ಮೆಂಟ್ಒಂ ದರಲ್ಲಿ ವಾಸವಿದ್ದ ರೋಹನ್ ಕುಮಾರ್ ಶೆಟ್ಟಿಯಾನ್ (45) ಎಂಬ ವ್ಯಕ್ತಿಯು ಸೆಪ್ಟಂಬರ್ 6 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.5 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಹಿಂದಿ, ತುಳು, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ […]
ಸೆ.14ರಂದು ಉಡುಪಿಯಲ್ಲಿ “ಅಬ್ಬರದ ಉಡುಪಿ ಪಿಲಿನಲಿಕೆ”

ಉಡುಪಿ: ಟೈಗರ್ ಫ್ರೆಂಡ್ಸ್ ಉಡುಪಿ ಇದರ ವತಿಯಿಂದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಾಲ್ಕನೇ ವರ್ಷದ ಆಹ್ವಾನಿತ ತಂಡಗಳ ಸಾಂಪ್ರದಾಯಿಕ ಹುಲಿವೇಷ ಕುಣಿತ ಸ್ಪರ್ಧೆ ಮತ್ತು ಪ್ರದರ್ಶನ “ಅಬ್ಬರದ ಉಡುಪಿ ಪಿಲಿನಲಿಕೆ” ಇದೇ ಸೆ.14ರಂದು ಸಂಜೆ 4.30ಕ್ಕೆ ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿ ವೇದಿಕೆಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಶಶಿರಾಜ್ ಕುಂದರ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 100,001 ರೂ. ನಗದು ಬಹುಮಾನ ಮತ್ತು ಶಾಶ್ವತ ಫಲಕ, ದ್ವೀತಿಯ ಸ್ಥಾನ […]