ಮಲ್ಪೆಯಲ್ಲಿ ನಾಡದೋಣಿ ಮೀನುಗಾರರಿಗೆ ಪ್ರತ್ಯೇಕ ಜಟ್ಟಿ ನಿರ್ಮಾಣಕ್ಕೆ ಮನವಿ: ಶಾಸಕ ರಘುಪತಿ ಭಟ್ ಸ್ಥಳಕ್ಕೆ ಭೇಟಿ ಪರಿಶೀಲನೆ

ನಾಡದೋಣಿ ಮೀನುಗಾರರಿಗೆ ಪ್ರತ್ಯೇಕ ಜಟ್ಟಿ ನಿರ್ಮಿಸಿ ಕೊಡುವಂತೆ ಮಲ್ಪೆ ನಾಡದೋಣಿ ಮೀನುಗಾರರ ಸಂಘದವರು ಶಾಸಕ ಕೆ ರಘುಪತಿ ಭಟ್ ಅವರಿಗೆ ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಶಾಸಕ ಕೆ. ರಘುಪತಿ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಡ ದೋಣಿ ಮೀನುಗಾರರಿಗೆ ಪ್ರತ್ಯೇಕ ಜಟ್ಟಿ ನಿರ್ಮಿಸಿ ಕೊಡುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದ.ಕ: ವಿವಿಧೆಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಗೋವಾ ಸಿಎಂ ಪ್ರಮೋದ್ ಸಾವಂತ್ ಧರ್ಮಸ್ಥಳ ಭೇಟಿ

ಬೆಳ್ತಂಗಡಿ: ದ.ಕ. ಜಿಲ್ಲೆಯಾದ್ಯಂತ ಇಂದು (ಮಾ.12) ಬಿಜೆಪಿ ವತಿಯಿಂದ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಹಿತ ರಾಜ್ಯದ ಪ್ರಮುಖರು ಬೆಳ್ತಂಗಡಿಗೆ ಆಗಮಿಸಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆ ಮಂಗಳೂರಿನಿಂದ ಆಗಮಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರ್ಯಾಲಿ ನಡೆಸುವ ಹಿನ್ನೆಲೆ ಅವರು ಇದೀಗ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಧರ್ಮಸ್ಥಳ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಅವರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ […]

ಉಪ್ಪಿನಂಗಡಿ “ವಿಜಯ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಉಪ್ಪಿನಂಗಡಿ: ಶನಿವಾರ ನಡೆದ ಉಪ್ಪಿನಂಗಡಿ “ವಿಜಯ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 03 ಜೊತೆ ಅಡ್ಡಹಲಗೆ: 07 ಜೊತೆ ಹಗ್ಗ ಹಿರಿಯ: 14 ಜೊತೆ ನೇಗಿಲು ಹಿರಿಯ: 26 ಜೊತೆ ಹಗ್ಗ ಕಿರಿಯ: 16 ಜೊತೆ ನೇಗಿಲು ಕಿರಿಯ: 68 ಜೊತೆ ಒಟ್ಟು ಕೋಣಗಳ ಸಂಖ್ಯೆ: 134 ಜೊತೆ •••••••••••••••••••••••••••••••••••••••••••••• ಕನೆಹಲಗೆ:  ( ನೀರು ನೋಡಿ ಬಹುಮಾನ ) ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ […]

ಮಂಡ್ಯದಲ್ಲಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಮಂಡ್ಯ: ತಾಲೂಕಿನ ಹನಕೆರೆ ಗ್ರಾಮದ ಬಳಿ 8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ವೇ ನಿರ್ಮಾಣವಾಗಿದೆ. 118 ಕಿ.ಮೀ. ಉದ್ದದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ತಾಯಿ ಭುವನೇಶ್ವರಿಗೆ ನಮಸ್ಕಾರಗಳು. ನಿಮ್ಮ ಪ್ರೀತಿಯ ಋಣ ಬಡ್ಡಿ ಸಮೇತ ನಮ್ಮ ಸರ್ಕಾರ ತೀರಿಸಲಿದೆ ಎಂದು ಮೋದಿ ಹೇಳಿದ್ದಾರೆ. ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ನಂತರ ಮಾತನಾಡಿದ […]

ಮಂಗಳೂರು: ಎಮ್ ಸಿ ಸಿ ಬ್ಯಾಂಕ್ ನಲ್ಲಿ ಮಹಿಳಾ ದಿನಾಚರಣೆ

ಮಂಗಳೂರು: ದಿನಾಂಕ 11 ಮಾರ್ಚ್ 2023 ರಂದು ಮಂಗಳೂರಿನ ಎಮ್ ಸಿ ಸಿ ಪ್ರಧಾನ ಕಛೇರಿಯ ಪಿ ಎಫ್ ಎಕ್ಸ್ ಸಲ್ದಾನ್ಹಾ ಮೆಮೊರಿಯಲ್ ಸಂಭಾಗಣದಲ್ಲಿ ಮಹಿಳಾ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಗುರುತಿಸಲು ಎಮ್ ಸಿ ಸಿ ಬ್ಯಾಂಕ್ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಂದನೀಯ ಸಿಸಿಲಿಯಾ ಮೆಂಡೋನ್ಕಾ ಬಿ.ಎಸ್., ಪ್ರಾಂತೀಯ ಸುಪೀರಿಯರ್, ಬೆಥನಿ ಸಭೆ, ವಾಮಂಜೂರು, ಮಂಗಳೂರು. ಬ್ಯಾಂಕಿನ ನಿರ್ದೇಶಕರಾದ ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಎಫ್.ಡಿಸೋಜಾ, ಶರ್ಮಿಳಾ ಮಿನೇಜಸ್, ಶಾಖಾ ವ್ಯವಸ್ಥಾಪಕರು: ಜೆಸಿಂತಾ […]