ಉಡುಪಿ: ಆತ್ರಾಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಆಕರ್ಷಕ ಭವ್ಯ ಶೋಭಾ ಯಾತ್ರೆ.

ಉಡುಪಿ: ಸವ್ಯಸಾಚಿ ಸೇವಾ ಸಂಗಮ ಶಿಶುಮಂದಿರ ಆತ್ರಾಡಿ ಮತ್ತು ಜೈ ಹನುಮಾನ್ ಯುವಕ ಸಂಘ ಇವರ ಆಶ್ರಯದಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಸುರಕ್ಷಾ ಸಭಾ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪೂರ್ವಬಾವಿಯಾಗಿ ಪುಟಾಣಿ ಮಕ್ಕಳಿಗೆ ಕೃಷ್ಣ,- ರಾಧೆಯರ ವೇಷವನ್ನು ತೊಡಿಸಿ ವಿವಿಧ ಟ್ಯಾಬ್ಲೋ, ಚಂಡೆವಾದನ, ಬ್ರಹ್ಮರಾಂಭಿಕ ಭಜನಾ ತಂಡ ಕೆಳ ಆತ್ರಾಡಿಯವರ ದೇವರ ಕೀರ್ತನೆಯೊಂದಿಗೆ ಆತ್ರಾಡಿ ಪೇಟೆಯಲ್ಲಿ ಆಕರ್ಷಕ ಭವ್ಯ ಶೋಭಾ ಯಾತ್ರೆಯನ್ನು ನಡೆಸಲಾಯಿತು. ಮೆರವಣಿಗೆಯಲ್ಲಿ ಊರ ಮಹನೀಯರಾದ ಪಾದೆಕಲ್ ವಿಷ್ಣು ಭಟ್, ದಿಲೀಪ್ ರಾಜ್ ಹೆಗ್ಡೆ, ಸತ್ಯಾನಂದ […]
ಕೃಷ್ಣನೂರು ಉಡುಪಿಯಲ್ಲಿ ಮುಂಬೈಯ “ಆಲಾರೆ ಗೋವಿಂದ” ತಂಡ: ಏಳು ಅಡಿಯ ಪಿರಮಿಡ್ ನಿರ್ಮಿಸಿ ಮಡಿಕೆ ಒಡೆದು ಸಂಭ್ರಮ

ಉಡುಪಿ: ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವದ ಸಂಭ್ರಮ ನೆಲೆಸಿದೆ. ದೂರದೂರು ಮುಂಬೈಯಿಂದ ಆಗಮಿಸಿದ ಆಲಾರೆ ಗೋವಿಂದ ತಂಡವು ನಗರದ ವಿವಿಧೆಡೆ ಏಳು ಅಡಿಯ ಪಿರಮಿಡ್ ರಚಿಸಿ ಮಡಿಕೆ ಒಡೆದು ಸಂಭ್ರಮಿಸಿತು. ಮಧುಸೂದನ ಪೂಜಾರಿ ಕೆಮ್ಮುಣ್ಣು ಇವರ ಸಂಯೋಜನೆಯಲ್ಲಿ ಪೂರ್ವ ಮುಂಬೈಯ ಸಾಂತಾಕ್ರೂಸ್ ಬಾಲಮಿತ್ರ ವ್ಯಾಯಾಮ ಶಾಲೆಯ ತಂಡ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಲಾರೆ ಗೋವಿಂದ ಪ್ರದರ್ಶನ ನಡೆಸಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಲಾರೆ ಗೋವಿಂದ ತಂಡ ಪಿರಮಿಡ್ […]
ಉಡುಪಿಯಲ್ಲಿ ಕಳೆಗಟ್ಟಿದ ಅಷ್ಟಮಿ ಸಂಭ್ರಮ; ಉತ್ಸವಕ್ಕೆ ಮೆರುಗು ತಂದ ಮುದ್ದು ಕೃಷ್ಣರು

ಉಡುಪಿ: ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಕಳೆಗಟ್ಟಿದೆ. ಇಂದು ವಿಟ್ಲಪಿಂಡಿ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣಮಠಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿದರು.ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೇಲೈಸಿದ್ದವು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಭಕ್ತರು ಬೆಳಗ್ಗಿನಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕಣ್ಣುಂಬಿಕೊಂಡರು. ರಥಬೀದಿ ಹಾಗೂ ಕೃಷ್ಣಮಠವನ್ನು ಹೂವು, ವಿದ್ಯುತ್‌ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಪರ್ಯಾಯ ಪುತ್ತಿಗೆ ಮಠದ ಸುಶ್ರೀಂದ್ರತೀರ್ಥ ಸ್ವಾಮೀಜಿ […]
ಉಡುಪಿ: ಅಷ್ಟಮಿ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ- ‘ಕೃಷ್ಣ ಕಿಂಗ್ಸ್” ತಂಡ ಚಾಂಪಿಯನ್

ಉಡುಪಿ: ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಮಾರ್ನಿಂಗ್ ಶೆಟ್ಟಲ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ” ಅಷ್ಟಮಿ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ನಾಗೇಂದ್ರ ಮಾಲಕತ್ವದ “ಕೃಷ್ಣ ಕಿಂಗ್ಸ್” ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ದಿವಾ ನಂಬಿಯಾರ್ ಮಾಲಕತ್ವದ ವಿಕ್ಟೋರಿಯಾ ವೃಂದಾವನ್ ತಂಡವು ಒಂದನೇ ರನ್ನರ್ಸ್ ಅಪ್ ಪ್ರಶಸ್ತಿ ಹಾಗೂ ನಂದಕಿಶೋರ್ ಮಾಲಕತ್ವದ ಮಥುರಾ ಮಾಸ್ಟರ್ಸ್ ತಂಡವು ಎರಡನೇ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.ಪಂದ್ಯಾಟವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಶುಭಾಹಾರೈಸಿದರು. […]
ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ; ಕೃಷ್ಣನಿಗೆ ಪುತ್ತಿಗೆ ಶ್ರೀಗಳಿಂದ ಅರ್ಘ್ಯ ಪ್ರದಾನ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾಮರ ಸೇವೆಯನ್ನು ಮಾಡಿ, ಪುತ್ತಿಗೆ ಕಿರಿಯ ಶ್ರೀಪಾದರು ರಾತ್ರಿ ಪೂಜೆಯನ್ನು ಮಾಡಿದರು. ನಂತರ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಪೂಜೆಯನ್ನು ಪುತ್ತಿಗೆ ಮಠದ ಉಭಯ ಶ್ರೀಪಾದರು ಮಾಡಿ ರಾತ್ರಿ 12.11ರ ರೋಹಿಣಿ ನಕ್ಷತ್ರದ ಸುಮುಹೂರ್ತದಲ್ಲಿ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ನಂತರ ತುಳಸಿ ಕಟ್ಟೆಯಲ್ಲಿ ಚಂದ್ರನಿಗೆ ಉಭಯ ಶ್ರೀಪಾದರು ಅರ್ಘ್ಯ ಪ್ರಧಾನ […]