ಉಡುಪಿ:ಮಾಹೆ ಮಣಿಪಾಲ ಸುಶ್ರಾವ್ಯ ತಂಡದಿಂದ ರಾಜಾಂಗಣದಲ್ಲಿ ಕಾರ್ಯಕ್ರಮ

ಉಡುಪಿ:ಮಾಹೆ ಮಣಿಪಾಲ ಇದರ ವಿವಿಧ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ ವೃಂದದ ಶಾಸ್ತ್ರೀಯ ಸಂಗೀತ ಕಾರರ ತಂಡವಾದ ಸುಶ್ರಾವ್ಯ ಸಂಘಟನೆಯಿಂದ ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರಗುತ್ತಿದ್ದ 48 ದಿನಗಳ ಮಂಡಲೊತ್ಸವ ಕಾರ್ಯಕ್ರಮದಲ್ಲಿ ತಾರೀಕು 16.09.2025 ರಂದು ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಿತು. ಹಾಡುಗಾರಿಕೆಯಲ್ಲಿ ಎಂಐಟಿಯ ಡಾ. ವಿದ್ಯಾ ಎಸ್ ರಾವ್ ಡಾ. ಭಾಗ್ಯ ,ಡಾ. ರಮ್ಯಾ ಡಾ. ಶಿಲ್ಪ ಡಾ. ಚೈತ್ರ ಪ್ರೊ. ಸೌಮ್ಯ , ಪ್ರೊ. ರಜಿತ ಭಾಗವಹಿಸಿದರು. ಹಿಮ್ಮೇಳದಲ್ಲಿ ಕೆ.ಎಂಸಿ ಯ […]
ಉಡುಪಿ:ಬಹರೈನ್ ಹಾಗೂ ಮಸ್ಕತ್ ನಲ್ಲಿ ಸ್ಕೂಲ್ ಲೀಡರ್ ಚಿತ್ರ ಬಿಡುಗಡೆ

ಉಡುಪಿ:ಕರಾವಳಿಯಾದ್ಯಂತ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡ ಸೂಪರ್ ಹಿಟ್ ಕನ್ನಡ ಚಲನ ಚಿತ್ರ ಇದೀಗ ಮಸ್ಕತ್ ಹಾಗೂ ಬಹರೈನ್ ನಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಲಿದೆ. ಕರಾವಳಿ ಸೊಗಡಿನ ಈ ಚಿತ್ರವು ಅರೇಬಿಯನ್ ನೆಲದಲ್ಲಿ ಕನ್ನಡದ ಕಂಪನ್ನು ಚೆಲ್ಲಲು ವೇದಿಕೆ ಸಿದ್ಧವಾಗಿದೆ.ಮಸ್ಕತ್ ಕರ್ನಾಟಕ ಜಾನಪದ ಪರಿಷತ್ತು ನ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಹಾಗೂ ಬಹರೈನ್ ಕನ್ನಡ ಸಂಘಟನೆಯ ಅಜಿತ್ ಬಂಗೇರ ಕುರ್ಕಾಲು ಇವರ ಸಾರಥ್ಯದಲ್ಲಿ ಸೆಪ್ಟೆಂಬರ್ 19 ರಿಂದ ಸ್ಕೂಲ್ ಲೀಡರ್ ಚಿತ್ರವು ವಿದೇಶದಲ್ಲಿ ಪ್ರದರ್ಶನ ಕಾಣಲಿದೆ. ಕರಾವಳಿ […]
ಅ. 24ರಂದು ಬೆಹರೆನ್ನಲ್ಲಿ ತನುಶ್ರೀ ದಾಖಲೆಯ ಯೋಗ ಸಾಧನೆ.

ಉಡುಪಿ: ಸೈಂಟ್ ಸಿಸಿಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅ.24ರಂದು ಬೆಹರೆನ್ ಕನ್ನಡ ಸಂದಲ್ಲಿ 1 ಗಂಟೆಯಲ್ಲಿ 300 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಲಿದ್ದಾರೆ ಎಂದು ತಂದೆ ಉದಯ್ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ 2023ರಲ್ಲಿ 45 ನಿಮಿಷದಲ್ಲಿ 245 ಯೋಗಾಸನ ಪ್ರದರ್ಶನ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾರೆ. ಈಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಲು ಅಣಿಯಾಗಿದ್ದು, ವಿದೇಶದಲ್ಲಿ ಮೊದಲ ಸಾಧನೆ ಮಾಡಲಿದ್ದಾರೆ. […]
ಹಣಕಾಸಿನ ಮಾಹಿತಿ ಕೂಡಲೇ ಒದಗಿಸಿ: ವಿವಿಗಳಿಗೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ವಿಶ್ವವಿದ್ಯಾಲಯಗಳಿಗೆ ನೆರವು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳ ಪ್ರಸ್ತುತ ಆರ್ಥಿಕ ಸ್ಥಿತಿಗತಿ, ಬ್ಯಾಂಕ್ ಖಾತೆಯಲ್ಲಿನ ಮಾಹಿತಿ, ಠೇವಣಿ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ವೇತನ, ಅಭಿವೃದ್ಧಿ ಕಾರ್ಯ, ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಸಹ ಹಲವು ವಿಶ್ವವಿದ್ಯಾಲಯಗಳಲ್ಲಿ ಹಣವಿಲ್ಲ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ನಡೆಸಿದ ಅಧ್ಯಯನ ವರದಿ ಪ್ರಕಾರ ಕನಿಷ್ಠ 13 ವಿಶ್ವವಿದ್ಯಾಲಯಗಳ ಸಿಬ್ಬಂದಿಯ ನಿವೃತ್ತಿ ಪಿಂಚಣಿ ಬಾಕಿಯೇ ₹562 ಕೋಟಿ ಇದೆ. ಬೆಂಗಳೂರು, ಧಾರವಾಡ ಸೇರಿದಂತೆ ಹಲವು […]
ದ.ಕ., ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ ‘ಮಾಸ್ಟರ್ ಪ್ಲಾನ್’; ಶಾಸಕ ಮಂಜುನಾಥ ಭಂಡಾರಿ ಮನವಿಗೆ ಸ್ಪಂದನೆ

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಮಂಜುನಾಥ ಭಂಡಾರಿಯವರು (Manjunath Bhandari) ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳು, ಜಲಪಾತಗಳು, ಕಡಲ ತೀರಗಳು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯ ಪ್ರವಾಸಿ ತಾಣಗಳ (Tourist Place) ಅಭಿವೃದ್ಧಿಗಾಗಿ ಈ ಪ್ರದೇಶವನ್ನುʼಟೂರಿಸಂ ಹಬ್ʼ ಆಗಿ ರೂಪಿಸಲು ಮಾಸ್ಟರ್ ಪ್ಲಾನ್ ತಯಾರಿಸುವ ಕುರಿತಂತೆ ಸರ್ಕಾರದ ಗಮನಕ್ಕೆ ತಂದಿದ್ದು, ಸರ್ಕಾರವು ಈ ಕುರಿತು ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ಇಂದು ನಡೆದ ಸರ್ಕಾರಿ ಭರವಸೆಗಳ […]