ಮಂಗಳೂರು: ಸೆ.25ರಂದು ಉದ್ಯೋಗ ಮೇಳ

ಮಂಗಳೂರು: ನಗರದ ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಬೊಂದೆಲ್‌ನಲ್ಲಿರುವ ಬೆಸೆಂಟ್ ಕ್ಯಾಂಪಸ್‌ನಲ್ಲಿ ಸೆ.25ರಂದು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಎಂಎಸ್‌ಎನ್‌ಐಎಂ ಕೆರಿಯರ್ ಎಕ್ಸ್‌ಪೋ 2025 – ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳ ಬಿಎ, ಬಿ.ಕಾಂ, ಬಿಬಿಎ, ಬಿ.ಎಸ್ಸಿ., ಬಿಸಿಎ, ಬಿಎಚ್‌ಎಂ, ಎಂ.ಕಾಂ, ಎಂಸಿಎ, ಎಂಬಿಎ, ಬಿಇ, ಬಿ.ಟೆಕ್., ಮತ್ತು ಎಂ.ಟೆಕ್ ಸ್ಟ್ರೀಮ್‌ಗಳ ಹೊಸ ಪದವೀಧರರಿಗೆ ಮುಕ್ತವಾಗಿದೆ, ಅವರು ಉತ್ತಮ ಉದ್ಯೋಗಾವ ಕಾಶಗಳನ್ನು ಅನ್ವೇಷಿಸಲು ತಮ್ಮ ಸಿವಿ ಮತ್ತು ಪ್ರಮಾಣಪತ್ರಗಳೊಂದಿಗೆ ಹಾಜರಾಗಬಹುದು. […]

ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ: ರೂ.9.51 ಕೋಟಿ ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ.

ಮಂಗಳೂರು: 2024–25ನೇ ಹಣಕಾಸು ವರ್ಷದಲ್ಲಿ ಎಂ.ಸಿ.ಸಿ. ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ತನ್ನ ಷೇರುದಾರರಿಗೆ 10% ಲಾಭಾಂಶವನ್ನು ಘೋಷಿಸಿದೆ. 2024–25ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ₹9.51 ಕೋಟಿಗಳ ಅಭೂತಪೂರ್ವ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳೀದರು. ಅವರು 2025 ಸಪ್ಟಂಬರ್ 21ರಂದು ನಡೆದ ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಎಂ.ಸಿ.ಸಿ. ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ […]

ಜಂಪ್ ರೋಪಿಂಗ್ ಸ್ಪರ್ಧೆ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರಿಯೇಟಿವ್ ನ ವಿದ್ಯಾರ್ಥಿಗಳು

ಕಾರ್ಕಳ: ಜಿಲ್ಲಾಮಟ್ಟದ ಜಂಪ್ ಹಗ್ಗ ಪಂದ್ಯಾವಳಿಯು ಬಾರಕೂರಿನ ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ನಡೆಯಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶಗಳೊಂದಿಗೆ ಜಯಗಳಿಸಿದ್ದಾರೆ. ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಪ್ರಥಮ ಪಿ ಸಿ ಎಂ ಬಿ ವಿಭಾಗದ ವೇದ ಎಂ. ಪಚ್ಚೆನ್ನವರ್ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ಸ್ಪರ್ಧೆಯಲ್ಲಿ ಕಂಚು, 30 ಸೆಕೆಂಡುಗಳ ಡಬಲ್ ಅಂಡರ್ ನಲ್ಲಿ ಪ್ರಥಮ ಪಿ ಸಿ ಎಂ ಬಿ ವಿಭಾಗದ ಶ್ರೇಷ್ಠ ಎಸ್. ಗೋಲ್ಡ್ ಮೆಡಲ್, ಉಚಿತ ಶೈಲಿಯಲ್ಲಿ […]

ಸಮಾಜಮುಖಿ ಕಾರ್ಯಗಳೇ ರಂಗಭೂಮಿಯ ಶಕ್ತಿ: ಡಾ. ಹೆಚ್.ಎಸ್.ಬಲ್ಲಾಳ್

ಉಡುಪಿ: 1965 ರಲ್ಲಿ ಆರಂಭಗೊಂಡು ನಿರಂತರವಾದ ಸಮಾಜಮುಖಿ ರಂಗ ಚಟುವಟಿಕೆಗಳೇ ರಂಗಭೂಮಿ ಸಂಸ್ಥೆಯನ್ನು ಆರು ದಶಕಗಳ ಕಾಲ ಉಳಿಸಿ ಬೆಳೆಸಿ ಮುನ್ನಡೆಸಿದೆ ಎಂದು ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಮಾಹೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು. ಉಡುಪಿಯ ಹೋಟೆಲ್ ಡಯಾನದಲ್ಲಿ ಸೆ.20ರಂದು ನಡೆದ ರಂಗಭೂಮಿಯ ಸಂಸ್ಥೆಯ 60ನೇ ವಾರ್ಷಿಕ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಟಿ ಮಾಧವ ಎ ಪೈ ಅವರ ಕಾಲದಿಂದಲೂ ರಂಗಭೂಮಿ ಸಂಸ್ಥೆಗೆ ನಿರಂತರವಾಗಿ ಮಣಿಪಾಲದ […]

ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ: ಅದಮಾರುಶ್ರೀ

ಉಡುಪಿ: ನೀರು ವಿದ್ಯುತ್ ಗೆ ಸರಕಾರಕ್ಕೆ ತೆರಿಗೆ ನೀಡುವ ನಾವು ಜಗತ್ತಿಗೆ ವಾಯು ಬೆಳಕು ನೀರು ನೀಡುವ ದೇವರಿಗೆ ಕೃತಜ್ಞರಾಗಿರಬೇಕು. ಅಗತ್ಯವಿದ್ದವರಿಗೆ ಅಗತ್ಯವಿರುವುದನ್ನು ಅಗತ್ಯವಿದ್ದ ಸಮಯದಲ್ಲಿ ನೀಡುವುದೇ ನಾವು ದೇವರಿಗೆ ನೀಡುವ ತೆರಿಗೆ. ಈ ಸಂಸ್ಕಾರವನ್ನು‌ ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿದರೆ ಬಲಿಷ್ಠ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು. ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಸೆ.20ರಿಂದ ನಾಲ್ಕು ದಿನಗಳ ಕಾಲ‌ ನಡೆಯಲಿರುವ ರಾಜ್ಯಮಟ್ಟದ ಕಬ್ ಬುಲ್ ಬುಲ್ ಉತ್ಸವ ಉದ್ಘಾಟಿಸಿ […]