ನ.23ರಂದು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್‌ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಉದ್ಘಾಟನೆ ಕಾರ್ಯಕ್ರಮ ನ.23ರಂದು ಬೆಳಿಗ್ಗೆ 6.30ಕ್ಕೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ. ಗುರುರಾಜ್ ಕೆ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಾಸಕ ಯಶ್ ಪಾಲ್ ಸುವರ್ಣ ಅವರು ನೂತನ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್‌ ಅನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸೈಕ್ಲೋಥಾನ್ ಆರಂಭವಾಗಲಿದ್ದು, ಜಿಲ್ಲೆಯ ವಿದ್ಯಾರ್ಥಿಗಳು, ಅಮೆಚೂರ್ ಸೈಕ್ಲಿಸ್ಟ್ ಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಖಜಾಂಚಿ ದೀಪಕ್ ಕುಮಾರ್ ವೈ., […]

ಸಮಾಜದಲ್ಲಿ ಧನಾತ್ಮಕತೆ ಹೆಚ್ಚಲಿ- ಮಾಣಿಲ ಸ್ವಾಮೀಜಿ

ಉಡುಪಿ: ಸಮಾಜದಲ್ಲಿ ಋಣಾತ್ಮಕ ದೌರ್ಬಲ್ಯ ಕಡಿಮೆಯಾಗಿ ಧನಾತ್ಮಕತೆ ಹೆಚ್ಚಬೇಕು. ಜಗತ್ತು ಭಗವಂತನ ಸಾಮ್ರಾಜ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದು ಶ್ರೀ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ನಡೆದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.ವಿಶ್ವಶಾಂತಿ, ಲೋಕದ ಹಿತಕ್ಕೆ ಸಂತರ ಮನಸ್ಸು ಒಂದಾಗಬೇಕು ಎನ್ನುವ ನೆಲೆಯಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಹಳದೊಡ್ಡ […]

ಗಂಟಲು ನೋವಿಗೆ ಔಷಧಿ ಬಳಸುವುದಕ್ಕಿಂತ ಈ ನಾಲ್ಕು ಮನೆಮದ್ದು ಬಳಸುವುದು ಉತ್ತಮ!

ಚಳಿಗಾಲ, ಧೂಳು, ಶೀತ–ಜ್ವರ ಅಥವಾ ಧ್ವನಿ ಹೆಚ್ಚು ಬಳಸುವ ಅಭ್ಯಾಸದಿಂದ ಗಂಟಲು ನೋವು ಕಾಣಿಸಿಕೊಳ್ಳಬಹುದು. ಮಾತನಾಡಲು ಕಷ್ಟ, ಆಹಾರ ನುಂಗುವಾಗ ನೋವು, ಗಂಟಲಿನಲ್ಲಿ ಕೆರೆತ, ಅಥವಾ ಕಿರಿಕಿರಿ ಇವು ಸಾಮಾನ್ಯ ಲಕ್ಷಣಗಳು. ಔಷಧಿ ಬಳಸುವುದಕ್ಕಿಂತ ಮೊದಲು ಮನೆಯಲ್ಲಿ ಲಭ್ಯವಿರುವ ಕೆಲವು ಮನೆಮದ್ದುಗಳು ಗಂಟಲು ನೋವನ್ನು ಬೇಗ ನಿವಾರಿಸುತ್ತದೆ. ಬಿಸಿ ನೀರಿಗೆ ಅರ್ಧ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ: ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಟೀಸ್ಪೂನ್ ಉಪ್ಪು ಹಾಕಿ ದಿನಕ್ಕೆ 2–3 ಬಾರಿ ಬಾಯಿ ಮುಕ್ಕಳಿಸಿದರೆ ಗಂಟಲಿನಲ್ಲಿ […]

ನಾಯಕತ್ವದ ಬದಲಾವಣೆಯ ಬಗ್ಗೆ ಹೈ ಕಮಾಂಡ್​ ನಾಯಕರ ತೀರ್ಮಾನವೇ ಅಂತಿಮ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹೈ ಕಮಾಂಡ್​ ನಾಯಕರು ಹೇಳುವ ಮಾತೇ ಅಂತಿಮವಾಗಿದ್ದು, ನಾನಾಗಲಿ, ಡಿಸಿಎಂ ಡಿಕೆ ಶಿವಕುಮಾರ ಆಗಲಿ ವರಿಷ್ಠರು ಹೇಳಿದ್ದನ್ನು ಪಾಲಿಸುತ್ತೇವೆ, ಅಲ್ಲಿಯವರೆಗೆ ನಾನೇ ಮುಂದುವರೆಯುತ್ತೇನೆ, ಬಜೆಟ್​ ಕೂಡ ನಾನೇ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಾಯಕತ್ವದ ಬದಲಾವಣೆಯ ಬಗ್ಗೆ ಹೈ ಕಮಾಂಡ್​ ನಾಯಕರು ಮಾತನಾಡಿದ್ದಾರಾ..? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದು, ಅವರೇ ಹೇಳದಿದ್ದ ಮೇಲೆ ಈ ಚರ್ಚೆ ಅನಾವಶ್ಯಕ, ದೆಹಲಿಗೆ ಹೋಗುವವರು ಹೋಗಲಿ ಎಂದು ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್​ನ ಕೆಲ ಶಾಸಕರು […]

ನವೆಂಬರ್ 21 ರಿಂದ 23: ಹೆಬ್ರಿಯಲ್ಲಿ ತೋಟಗಾರಿಕಾ ಸಸ್ಯ ಮೇಳ

ಹೆಬ್ರಿ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ ವತಿಯಿಂದ ಹೆಬ್ರಿಯಲ್ಲಿ ನವೆಂಬ‌ರ್ 21ರಿಂದ 23 ವರೆಗೆ ಮೂರು ದಿನಗಳ ಕಾಲ ತೋಟಗಾರಿಕಾ ಸಸ್ಯ ಮೇಳವು ಹೆಬ್ರಿ ಪ್ರವಾಸಿ ಮಂದಿರದ ಬಳಿ ನಡೆಯಲಿದೆ. ಸಸ್ಯ ಪ್ರದರ್ಶನ ಮತ್ತು ಮಾರಾಟ ವಸ್ತು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ.