ಉಡುಪಿ ಜಿಲ್ಲೆಯಾದ್ಯಂತ ಆರ್ಟಿಫಿಶಲ್ ಇಂಟಲಿಜೆನ್ಸ್ ಸಂಚಾರ ವ್ಯವಸ್ಥೆ ಜಾರಿ: ಉಡುಪಿ ಎಸ್ ಪಿ

ಉಡುಪಿ: ಉಡುಪಿ ನಗರ ಹಾಗೂ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಆರ್ಟಿಫಿಶಲ್ ಇಂಟೆಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ ಮೂಲಕ ದಂಡ ವಿಧಿಸುವ ಹಾಗೂ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಮಣಿಪಾಲದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ನಗರದಲ್ಲಿ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಮೂರು ಪ್ರಾಜೆಕ್ಟ್ಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೆಜ್ಮೆಂಟ್ ಸಿಸ್ಟಮ್ ನಡಿ […]
ನಂದಿನಿ ಪಾರ್ಲರ್’ಗಳಲ್ಲಿ ಬೇರೆ ಬ್ರಾಂಡ್ ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದು: ಕೆಎಂಎಫ್ ಖಡಕ್ ಎಚ್ಚರಿಕೆ!

ನಂದಿನಿ ಪಾರ್ಲರ್ಗಳಲ್ಲಿ ಬೇರೆ ಬೇರೆ ಬ್ರ್ಯಾಂಡ್ ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಲೈಸೆನ್ಸ್ ರದ್ದು ಮಾಡೋದಾಗಿ ಖಡಕ್ ಎಚ್ಚರಿಕೆ ನೀಡಿದೆ. ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಂಧನದ ನಂತರ ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಮತ್ತಷ್ಟು ಖಡಕ್ ಆಗಿ ನಕಲಿ ಶೂರರ ಹೆಡೆಮುರಿ ಕಟ್ಟಲು ನಿರ್ಧರಿಸಿದೆ. ಸಿಸಿಬಿ ಪೊಲೀಸರು ಮತ್ತು ಕೆಎಂಎಫ್ನ ಜಾಗೃತ ದಳ ನಡೆಸಿದ ಕಾರ್ಯಾಚರಣೆಯಲ್ಲಿ ನಕಲಿ ತುಪ್ಪದ ಜಾಲ […]
ಉಡುಪಿ:ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆಯೊಂದಿಗೆ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗದಿಂದ ಕರ್ನಾಟಕದ ಮೊದಲ ಲೇಸರ್ ಆಂಜಿಯೋಪ್ಲ್ಯಾಸ್ಟಿ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮಹತ್ವದ ಮೈಲಿಗಲ್ಲು ತಲುಪಿದ್ದು, ಹೃದಯಾಘಾತಗಳಿಗೆ ಚಿಕಿತ್ಸೆ ನೀಡಲು ಎಕ್ಸೈಮರ್ ಲೇಸರ್ ಕರೋನರಿ ಆಂಜಿಯೋಪ್ಲ್ಯಾಸ್ಟಿ (ELCA) ಅತ್ಯಾಧುನಿಕ ತಂತ್ರಜ್ಞಾನವನ್ನು ನಿರ್ವಹಿಸುವ ಕರ್ನಾಟಕದ ಮೊದಲ ಕೇಂದ್ರವಾಗಿ ಹೊರಹೊಮ್ಮಿದೆ, ಇದಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆ ನೀಡಿದೆ. ಮೊದಲ ಕಾರ್ಯವಿಧಾನ ಡಿಸೆಂಬರ್ 13, 2024 ರಂದು ಯಶಸ್ವಿಯಾಗಿ ನಿರ್ವಹಿಸಲಾಯಿತು. ಲೇಸರ್ ಆಂಜಿಯೋಪ್ಲ್ಯಾಸ್ಟಿ ಎಂಬುದು ಮುಚ್ಚಿಹೋಗಿರುವ ಹೃದಯ ಅಪಧಮನಿಗಳನ್ನು ತೆರೆಯಲು ಒಂದು ನವೀನ ಚಿಕಿತ್ಸಾ ವಿಧಾನವಾಗಿದೆ, ವಿಶೇಷವಾಗಿ ಸಾಮಾನ್ಯ ಆಂಜಿಯೋಪ್ಲ್ಯಾಸ್ಟಿ ಅಥವಾ ಬೈಪಾಸ್ […]
ಮಂಗಳೂರು: ಕ್ಯಾಂಪ್ಕೊ ಅಧ್ಯಕ್ಷರಾಗಿ ಎಸ್.ಆರ್.ಸತೀಶ್ಚಂದ್ರ ಆಯ್ಕೆ.

ಮಂಗಳೂರು: ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಯಾದ ಕ್ಯಾಂಪ್ಕೊ 2025–30ರ ಅವಧಿಗೆ ಅಧ್ಯಕ್ಷರಾಗಿ ಸತೀಶ್ಚಂದ್ರ ಎಸ್.ಆರ್, ಉಪಾಧ್ಯಕ್ಷರಾಗಿ ಪದ್ಮರಾಜ್ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾದರು.ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮ ಸತೀಶ್ಚಂದ್ರ, 2015–20ರ ಅವಧಿಯಲ್ಲಿ ಕ್ಯಾಂಪ್ಕೊ ಅಧ್ಯಕ್ಷರಾಗಿ ಅನುಭವ ಹೊಂದಿರುವವರು. ಹಿಂದಿನ ಅವಧಿಯಲ್ಲಿ ಸಂಸ್ಥೆಯ ನಿರ್ದೇಶಕರಾಗಿದ್ದರು. ಕಾಸರಗೋಡಿನ ಪಟ್ಟಾಜೆ ಬದಿಯಡ್ಕದ ಪ್ರಗತಿಪರ ಕೃಷಿಕ ಪದ್ಮರಾಜ್ ಪಟ್ಟಾಜೆ ಸತತ ಎರಡು ಅವಧಿಗೆ ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಆಯ್ಕೆಯು ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಅಡಿಯಲ್ಲಿ ಬರುವ ಸಹಕಾರಿ ಚುನಾವಣಾ […]
ಬ್ರಹ್ಮಾವರ: ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ.

ಬ್ರಹ್ಮಾವರ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಕೋಟೆಯ ನಡುಹಿತ್ಲು ನಿವಾಸಿ ಶ್ರೇಯಾ(21) ಎಂಬವರಿಗೆ ನ.24ರಂದು ಟೆಲಿಗ್ರಾಂ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬ ಲಿಂಕ್ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅದರಂತೆ ಶ್ರೇಯಾ ತನ್ನ ಖಾತೆಯಿಂದ ಆರೋಪಿ ತಿಳಿಸಿದ ಖಾತೆಗೆ ಒಟ್ಟು 1,05,000ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ ಶ್ರೇಯಾ ಅವರಿಗೆ […]