ಗಣಪನಿಗೆ ರೂಪ ನೀಡುವ ಕೈಗಳಿಗೆ ಮಣ್ಣಿನ ಕೊರತೆಯ ಸಂಕಷ್ಟ

ಉಡುಪಿ: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಘ್ನವಿನಾಶಕ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಗಣಪನಿಗೆ ರೂಪ ನೀಡುವ ಕುಶಲಕರ್ಮಿಗಳಿಗೆ ಮಾತ್ರ ಅಗತ್ಯವಾದ ಮಣ್ಣಿನ ಕೊರತೆ ಎದುರಾಗಿದೆ. ಉಡುಪಿಯ ಕಿದಿಯೂರಿನ ಭಾಸ್ಕರ್ ಕೋಟ್ಯಾನ್ ಕುಟುಂಬ ಕಳೆದ 35 ವರ್ಷಗಳಿಂದ ಗಣಪತಿ ಮೂರ್ತಿ ನಿರ್ಮಾಣದ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಪ್ರತಿ ವರ್ಷ 10ರಿಂದ 15ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ನಿರ್ಮಿಸುವ ಈ ಕುಟುಂಬಕ್ಕೆ, ಈ ಬಾರಿ ಅಗತ್ಯ ಪ್ರಮಾಣದ ಜೆಡಿ ಮಣ್ಣು ದೊರೆಯದೆ ಸಂಕಷ್ಟ ಎದುರಾಗಿದೆ. ಮಣ್ಣಿಗೆ ರೂಪ […]
ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಯಕೃತ್ತು ಕಸಿ ತಜ್ಞ ವೈದ್ಯರು ಸೆ.11ರಂದು ಸಮಾಲೋಚನೆಗೆ ಲಭ್ಯ

ಉಡುಪಿ: ಪ್ರಸಿದ್ಧ ಯಕೃತ್ತು ಕಸಿ ಹಾಗೂ ಹೆಪಟೋಬಿಲಿಯರಿ-ಪ್ಯಾಂಕ್ರಿಯಾಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ನಿಖಿಲ್ ಸುರೇಶ್ ಅವರು ಸೆಪ್ಟೆಂಬರ್ 11ರಂದು ಉಡುಪಿಯಲ್ಲಿ ರೋಗಿಗಳ ಸಮಾಲೋಚನೆಗೆ ಲಭ್ಯವಿರಲಿದ್ದಾರೆ. 10ಕ್ಕೂ ಹೆಚ್ಚು ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಡಾ. ನಿಖಿಲ್ ಸುರೇಶ್ ಅವರು Consultant – Hepatobiliary, Pancreatic & Liver Transplant Surgery ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು MBBS (Hons), MRCS (Edinburgh), MS (General Surgery), MCh (Surgical Oncology), FEBS (Liver Transplant) ಹಾಗೂ FRCS […]
ಈ ಸಲ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ: ಹಸಿರು ಸಂಕಲ್ಪದೊಂದಿಗೆ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ

-ಸಂಯೋಜಕ ಹಸಿರು ಸಂವಾದ ಅಭಿಯಾನ ಮಂಗಳೂರು ಭಕ್ತಿ, ಭಾವ ಹಾಗೂ ಸಡಗರದ ಸಂಕೇತವಾಗಿರುವ ಗಣೇಶ ಚತುರ್ಥಿ ಹಬ್ಬವು ಹತ್ತಿರವಾಗುತ್ತಿದೆ. ಆದರೆ ಹಬ್ಬದ ಆಚರಣೆಯ ನೆಪದಲ್ಲಿ ಬಳಸುವ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು ನಮ್ಮ ಪರಿಸರವನ್ನು ದಿನೇ ದಿನೇ ಕಲುಷಿತಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಪ್ರಕೃತಿಯನ್ನು ರಕ್ಷಿಸುತ್ತಾ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಲು “ಹಸಿರು ಗಣೇಶೋತ್ಸವ” ಆಂದೋಲನವು ಇಂದಿನ ತುರ್ತು ಅಗತ್ಯವಾಗಿದೆ. ಭಕ್ತಿಯೊಂದಿಗೆ ಪರಿಸರವನ್ನೂ ಉಳಿಸುವ ದೃಢ ಸಂಕಲ್ಪವನ್ನು ಪ್ರತಿಯೊಬ್ಬ ನಾಗರಿಕನೂ ಮಾಡಬೇಕಾಗಿದೆ. ಹಸಿರು ಗಣೇಶೋತ್ಸವದ ಯಶಸ್ಸಿಗೆ ನಾವು ನಮ್ಮ ದೈನಂದಿನ […]
ಪರಿಚಯಸ್ಥ ಮಹಿಳೆಗೆ ಲೈಂಗಿಕ ಕಿರುಕುಳ: ಆಟೋ ಚಾಲಕ ವಶಕ್ಕೆ

ಮಂಗಳೂರು: ಕೆಲಸದ ನಿಮಿತ್ತ ಪುತ್ತೂರು ಪೇಟೆಗೆ ತೆರಳಲು ಪರಿಚಯಸ್ಥ ಆಟೋ ಚಾಲಕನ ರಿಕ್ಷಾ ಹತ್ತಿದ್ದ ಮಹಿಳೆಯೊಬ್ಬರಿಗೆ ಮಾರ್ಗ ಬದಲಿಸಿ ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಆಟೋ ಚಾಲಕನನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಶಕ್ಕೆ ಪಡೆದ ಆರೋಪಿಯನ್ನು ಆಟೋ ಚಾಲಕ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ದೂರಿನಲ್ಲಿ ಏನಿದೆ? ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ […]
ರಾಷ್ಟ್ರೀಯ ಮಟ್ಟದ ವಿಎಲ್ಎಸ್ಐ ಹ್ಯಾಕಥಾನ್ನಲ್ಲಿ ಪ್ರಥಮ ಸ್ಥಾನ ಪಡೆದ ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು

ನಿಟ್ಟೆ: ತಮಿಳುನಾಡಿನ ಕೊಯಮತ್ತೂರಿನ ಶ್ರೀ ಶಕ್ತಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗ – ವಿಎಲ್ಎಸ್ಐ ಡಿಸೈನ್ ಮತ್ತು ಟೆಕ್ನಾಲಜಿ ವಿಭಾಗವು ಆಯೋಜಿಸಿದ್ದ 24 ಗಂಟೆಗಳ ರಾಷ್ಟ್ರೀಯ ಮಟ್ಟದ ವಿಎಲ್ಎಸ್ಐ ಹ್ಯಾಕಥಾನ್ ‘ವೆಲ್ಟ್ರಾಕ್ಸ್’26’ ನಲ್ಲಿ ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಐದನೇ ಸೆಮಿಸ್ಟರ್ B.Tech ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದಿದ್ದಾರೆ. ವಿಜೇತ ತಂಡದಲ್ಲಿ B.Tech ವಿಎಲ್ಎಸ್ಐ ಡಿಸೈನ್ ಮತ್ತು ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳಾದ ಪ್ರಜ್ಞಾ ಮಹಾಬಲೇಶ್ವರ ಹೆಗ್ಡೆ, ಸೃಜನ್ ಶ್ರೀನಿವಾಸಮೂರ್ತಿ […]