ಹಿರಿಯಡ್ಕ: ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಹಿರಿಯಡ್ಕ: ನಾಲ್ಕು ತಿಂಗಳ ಹಿಂದೆ ಅಂಜಾರು ಗ್ರಾಮದ ಅರಂತಬೆಟ್ಟು ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೊಮ್ಮರಬೆಟ್ಟು ಗ್ರಾಮದ ಪಡ್ಡಾಂ ನಿವಾಸಿ ದಯಾನಂದ ನಾಯ್ಕ್ ಎಂಬವರ ಮಗ ಸಂದೇಶ(18) ಎಂದು ಗುರುತಿಸಲಾಗಿದೆ. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಇವರು, ಆ.7ರಂದು ಅರಂತಬೆಟ್ಟು ಕ್ರಾಸ್ ಬಳಿ ಬೈಕ್ ಅಪಗಾತದಲ್ಲಿ ಗಾಯಗೊಂಡಿದ್ದರು. ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ಸಂದೇಶ್ ನಾಯ್ಕ್ ಗೆ […]

ಉಡುಪಿ:ಕೊಂಕಣ ರೈಲ್ವೆ ಮಾರ್ಗದ ದ್ವಿಪಥಕ್ಕೆ ಸಂಸದ ಕೋಟ ಆಗ್ರಹ

ಉಡುಪಿ: ಕೇರಳ, ಮಂಗಳೂರು, ಗೋವಾ ಮೂಲಕ ಮಹಾರಾಷ್ಟ್ರದ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೆ ಮಾರ್ಗ ಅಭಿವೃದ್ಧಿ ಪಡಿಸಿ ಪೂರ್ಣಮಾರ್ಗವನ್ನು ದ್ವಿಪಥಗೊಳಿಸಲು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇರಳ, ಗೋವಾ ಸರಕಾರಗಳು ಈಗಾಗಲೇ ಒಪ್ಪಿಗೆ ನೀಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಕೂಡ ಸಮ್ಮತಿಸಿದ ಬಗ್ಗೆ ಮಾಹಿತಿ ಇದೆ. ಆದರೂ ಈ ವಿಲೀನ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಕೊಂಕಣ ರೈಲ್ವೆ ಮಾರ್ಗ ಮತ್ತು […]

ಉಡುಪಿ- ಮಂಗಳೂರಿನ ಅತಿದೊಡ್ಡ ಕಾರುಗಳ ಶೋರೂಮ್ ನಲ್ಲಿ ಉದ್ಯೋಗವಕಾಶ!

ಉಡುಪಿ: ಉಡುಪಿ- ಮಂಗಳೂರಿನ ಅತಿದೊಡ್ಡ ಕಾರುಗಳ ಶೋರೂಮ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ಆಕರ್ಷಕ ವೇತನದೊಂದಿಗೆ, ಭತ್ಯೆಗಳು ಪ್ರತ್ಯೇಕವಾಗಿರುತ್ತದೆ. 7019891796, 7975861846

ಉಡುಪಿ:ಜಪಾನ್ ನ ಒಸಾಕಾ ಕ್ಯಾನ್ಸರ್ ಕೇಂದ್ರದಲ್ಲಿ ಎಂಡೋಸ್ಕೋಪಿ ಕಾರ್ಯಾಗಾರ

ಮಣಿಪಾಲ್: ವಿಶ್ವಪ್ರಸಿದ್ಧ ವಿಜ್ಞಾನಿ ಮತ್ತು ಎಂಡೋಸ್ಕೋಪಿಸ್ಟ್ ಪ್ರೊ. ನೊರಿಯೊ ಉಡಿಯೊ ಅವರ ಮಾರ್ಗದರ್ಶನದಲ್ಲಿ ಡಾ. ಶಿರನ್ ಶೆಟ್ಟಿ ಜಪಾನ್‌ನ ಒಸಾಕಾ ಕ್ಯಾನ್ಸರ್ ಕೇಂದ್ರದಲ್ಲಿ ಪ್ರತಿಷ್ಠಿತ ಸುಧಾರಿತ ಎಂಡೋಸ್ಕೋಪಿ ಕಾರ್ಯಾಗಾರವನ್ನು ಪೂರ್ಣಗೊಳಿಸಿದ್ದಾರೆ. ಈ ಕಾರ್ಯಕ್ರಮವು ಆರಂಭಿಕ ಕ್ಯಾನ್ಸರ್ ಪತ್ತೆ ಮತ್ತು ಕನಿಷ್ಠ ಆಕ್ರಮಣಕಾರಿ ಎಂಡೋಸ್ಕೋಪಿಕ್ ಚಿಕಿತ್ಸೆಯಲ್ಲಿ ಇತ್ತೀಚಿನ ತಂತ್ರಗಳ ಮೇಲೆ ಕೇಂದ್ರೀಕರಿಸಿದೆ, ಇದು ಕಸ್ತೂರ್ಬಾ ಆಸ್ಪತ್ರೆಯು ಭಾರತಕ್ಕೆ ಜಾಗತಿಕ ಗುಣಮಟ್ಟದ ಆರೈಕೆಯನ್ನು ತರುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ತರಬೇತಿಯ ಸಮಯದಲ್ಲಿ, ಡಾ. ಶೆಟ್ಟಿ ಮುಂದಿನ ಪೀಳಿಗೆಯ ಇಮೇಜ್-ವರ್ಧಿತ ಎಂಡೋಸ್ಕೋಪಿಯನ್ನು ಕರಗತ […]

ಉಡುಪಿ:ಡಿ.15 ರಂದು, ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ

ಉಡುಪಿ: ಉಡುಪಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ) ನಲ್ಲಿ ಉಡುಪಿ ಜಿಲ್ಲಾ ಮಟ್ಟದ ಶಿಶಿಕ್ಷರ ಮೇಳವನ್ನು ಡಿಸೆಂಬರ್ 15 ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ. ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳುಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ವೆಬ್‌ಸೈಟ್ https://www.apprenticeshipindia.gov.in/candidate-login ಲಿಂಕ್ ಮೂಲಕ ಹಾಗೂ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿ ನೀಡಲು ಇಚ್ಛಿಸುವ ಕಂಪನಿಗಳು ಹಾಗೂ ಕೈಗಾರಿಕೆಗಳು ಮೇಳದಲ್ಲಿ ಭಾಗವಹಿಸಲು https://www.apprenticeshipindia.gov.in/establishment-registration ಲಿಂಕ್ ಮೂಲಕ ಅಥವಾ ಶಿಕ್ಷಕರಮೇಳ ನಡೆಯುವ ದಿನದಂದು […]