ಪ್ಯಾಲಿಯೇಟಿವ್‌ ಕೇರ್‌ಗೆ ಕೊಡುಗೆ ನೀಡಿದ ಹಳೆಯ ವಿದ್ಯಾರ್ಥಿ: ಮಾಹೆಯಲ್ಲಿ ಎಚ್‌ಬಿಎಸ್‌ಎಫ್ ನೂತನ ಚಿಕಿತ್ಸಾ ವಿಭಾಗ ಉದ್ಘಾಟನೆ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ, ಮಣಿಪಾಲ್ ಹಾಸ್ಪಿಸ್ ಮತ್ತು ರೆಸ್ಪೈಟ್ ಸೆಂಟರ್ನಲ್ಲಿ (ಎಂಎಚ್‌ಆರ್‌ಸಿ) ನೂತನವಾಗಿ ನಿರ್ಮಿಸಲಾದ ‘ಹರೀಶ್ ಮತ್ತು ಬೀನಾ ಶಾ ಫೌಂಡೇಶನ್ ಕ್ಲಿನಿಕಲ್ ಬ್ಲಾಕ್’ ಬುಧವಾರ ಲೋಕಾರ್ಪಣೆಗೊಂಡಿತು. ಆರೋಗ್ಯವಲಯದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಾನವೀಯ ಸೇವೆಗೆ ಮಾಹೆ ಸದಾ ಬದ್ಧವಾಗಿದ್ದು, ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು ಈ ಮಹತ್ವದ ಕಾರ್ಯಕ್ಕೆ ಬೆಂಬಲ ನೀಡಿರುವುದು ಮಹತ್ವದ ಸಂಗತಿಯಾಗಿದೆ. ಈ ನೂತನ ಬ್ಲಾಕ್ ಉದ್ಘಾಟನೆಯ ಮುಖ್ಯ ಅತಿಥಿಯಾಗಿ ಮಣಿಪಾಲ್ […]

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಯಶಸ್ವಿಯಾಗಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ: ಮೆದುಳಿಗೆ ಪೇಸ್‌ಮೇಕರ್ ಅಳವಡಿಕೆ

ಮಣಿಪಾಲ, ಡಿ.18: ಚಲನೆಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸಾವಿರಾರು ಜನರಿಗೆ, ಒಂದು ಕಪ್ ಚಹಾ ಹಿಡಿಯುವುದು, ಶರ್ಟ್ ಬಟನ್ ಹಾಕುವುದು ಅಥವಾ ಸರಳವಾಗಿ ನಡೆಯುವುದು ಮುಂತಾದ ಸರಳ ಚಟುವಟಿಕೆಗಳು ದೈನಂದಿನ ಹೋರಾಟವಾಗುತ್ತವೆ. ಆರಂಭಿಕ ಹಂತಗಳಲ್ಲಿ ಔಷಧಿಗಳು ಪರಿಹಾರವನ್ನು ನೀಡಬಹುದಾದರೂ, ಅವುಗಳ ಪರಿಣಾಮಕಾರಿತ್ವವು ಕಾಲಾನಂತರದಲ್ಲಿ ಮಸುಕಾಗುತ್ತದೆ. ಮೆದುಳಿಗೆ ಪೇಸ್‌ಮೇಕರ್ ಎಂದೂ ಕರೆಯಲ್ಪಡುವ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (ಡಿಬಿಎಸ್) ಜೀವನವನ್ನು ಬದಲಾಯಿಸುವ ಚಿಕಿತ್ಸಾ ಆಯ್ಕೆಯಾಗಿ ಇಲ್ಲಿಯೇ ಹೆಜ್ಜೆ ಹಾಕುತ್ತದೆ. ಇದು ನಿರ್ದಿಷ್ಟ ನರವೈಜ್ಞಾನಿಕ ಪರಿಸ್ಥಿತಿಗಳಿಗೆ, ಮುಖ್ಯವಾಗಿ ಪಾರ್ಕಿನ್ಸನ್ ಕಾಯಿಲೆಯಂತಹ ಚಲನೆಯ ಅಸ್ವಸ್ಥತೆಗಳಿಗೆ […]

ಉಡುಪಿ:ಸಂತ ಸಿಸಿಲಿ ವಾರ್ಡ್‌ನ ಸದಸ್ಯರಿಂದ ‘ಸ್ವಚ್ಛ ಭಾರತ -ಸ್ವಚ್ಛ ಉಡುಪಿ’ ಅಭಿಯಾನ

ಉಡುಪಿ: ನಗರದ ಶೋಕ ಮಾತೆ ಚರ್ಚ್‌ನ ಸಂತ ಸಿಸಿಲಿ ವಾರ್ಡ್‌ನ ಸದಸ್ಯರು ಸ್ವಚ್ಛ ಭಾರತ -ಸ್ವಚ್ಛ ಉಡುಪಿ’ ಅಭಿಯಾನ ದೊಂದಿಗೆ ತಮ್ಮ ವಾರ್ಡ್‌ನ ಬೀದಿಗಳಲ್ಲಿ ಬಿದ್ದ ಕಸಕಡ್ಡಿ ಪ್ಲಾಸ್ಟಿಕ್ ಬಾಟಲಿ ಸೇರಿ 10 ಗೋಣಿಗೂ ಮಿಕ್ಕಿ ಕಸ ಸಂಗ್ರಹ ಮಾಡಿದ್ದಾರೆ.

ಕೂಡ್ಲು ಫಾಲ್ಸ್ ಬಂಡೆಯಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು.

ಹೆಬ್ರಿ: ಪ್ರವಾಸಿ ತಾಣ ಹೆಬ್ರಿಯ ಕೂಡ್ಲು ಫಾಲ್ಸ್‌ನ ಬಂಡೆಯ ಮೇಲಿನಿಂದ ಬಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆವರದಿಯಾಗಿದೆ. ಮೃತರನ್ನು ಉಡುಪಿಯ ಕೊಂಜಾಡಿ ಮೂಲದ ಬೆಂಗಳೂರು ನಿವಾಸಿ ಸವಿತಾ ಪಿ. ಶೆಟ್ಟಿ ಎಂಬವರ ಮಗ ಮನ್ವಿತ್ (25) ಎಂದು ಗುರುತಿಸಲಾಗಿದೆ. ಮನ್ವಿತ್ ಡಿ.12ರಂದು ತಮ್ಮ ಸ್ವಂತ ಮನೆಯಾದ ಕೊಂಜಾಡಿಗೆ ಬಂದಿದ್ದು, ಡಿ.14ರಂದು ತನ್ನ ಸ್ನೇಹಿತರೊಂದಿಗೆ ಹೆಬ್ರಿಯ ಕೂಡ್ಲು ಫಾಲ್ಸ್‌ಗೆ ಹೋಗಿದ್ದರು. ಅಲ್ಲಿ ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಮನ್ವಿತ್ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಅವರು […]

ಉಡುಪಿ:ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ ವಿಧಾನಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭರವಸೆ

ಉಡುಪಿ: ಕುಂದಾಪುರ ತಾಲೂಕಿನ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದುಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಭರವಸೆ ನೀಡಿದರು. ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.ಕುಂದಾಪುರ ತಾಲೂಕಿನ ಇಎಸಐ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಹುದ್ದೆಯನ್ನು ಮಂಜೂರು ಮಾಡಲಾಗಿತ್ತು. ಆದರೆ 2015 ರಿಂದಒಬ್ಬರೇ ಒಬ್ಬರು ಖಾಯಂ ವೈದ್ಯರು ಇಲ್ಲ. ಬೇರೆ ಕಡೆಯಿಂದ ನಿಯೋಜನೆ ಮೇರೆಗೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದಕಾರ್ಮಿಕರಿಗೆ […]