ಮೇ-7 ರಂದು ‘ಹೆವೆನ್ಲಿ ಸ್ಕೂಪ್’ ಐಸ್ ಕ್ರೀಂ ಪಾರ್ಲರ್ ಉದ್ಘಾಟನೆ

ಉಡುಪಿ: ಇಲ್ಲಿನ ಶಾಂತಿ ನಗರದ ಆಶಾ ನಿಲಯ ರಸ್ತೆಯಲ್ಲಿರುವ ಅನಂತ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಹೊಸದಾಗಿ ಪ್ರಾರಂಭವಾದ ‘ಹೆವೆನ್ಲಿ ಸ್ಕೂಪ್’ ಐಸ್ ಕ್ರೀಂ ಪಾರ್ಲರ್ ನ ಉದ್ಘಾಟನಾ ಸಮಾರಂಭವು ಮೇ. 7 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ಬೆಳ್ತಂಗಡಿ: ಕಮಲ ಪಡೆ ಸೇರಿದ ಕೈ ಪ್ರಮುಖರು

ಬೆಳ್ತಂಗಡಿ: ಇಲ್ಲಿನ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮೇ 5 ರಂದು ಕಮಲ ಪಡೆ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದ ರಾಜೇಶ್ ರಾವ್ ಅಳದಂಗಡಿ, ಕೃಷ್ಣ ಮೂಲ್ಯ ಸೋನಂದೂರು, ದಿನೇಶ್ ಮೂಲ್ಯ ಸೋನಂದೂರು, ದೇಜಪ್ಪ ಮೂಲ್ಯ ಸೋನಂದೂರು, ಸತೀಶ್ ಅಳದಂಗಡಿ, ಪ್ರಶಾಂತ್ ರಾವ್ ಅಳದಂಗಡಿ, ಹರೀಶ ಅಳದಂಗಡಿ, ಚಂದ್ರಶೇಖರ ಪೂಜಾರಿ ಕುತ್ಯಾಡಿ, ಆನಂದ ಪೂಜಾರಿ ಬಳಂಜ, ಚಂದು ಮೂಲ್ಯ ಶಿರ್ಲಾಲು, ಕುಟ್ಟಿ ಶೆಟ್ಟಿ ಅಳದಂಗಡಿ, ಮಾಲಿಂಗ ಸೂಳಬೆಟ್ಟು, ಚಂದು ನಾಯ್ಕ ಶಿರ್ಲಾಲು ಬಿಜೆಪಿಗೆ ಸೇರಿದರು.

ಬೈರಂಪಳ್ಳಿ ಗ್ರಾಮದ ಶಿರೂರು ಮೂಲಮಠ ಮುಖ್ಯಪ್ರಾಣ ದೇವಸ್ಥಾನಕ್ಕೆ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಭೇಟಿ..

ಹಿರಿಯಡಕ: ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದ ಬೈರಂಪಳ್ಳಿ ಗ್ರಾಮ ಪಂಚಾಯತ್ ಶಿರೂರು ಮೂಲಮಠ ಮುಖ್ಯಪ್ರಾಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಹಾಗೂ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗದ್ದಿಗೆ 41 ನೇ ಶಿರೂರು ಜಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಅನುಗ್ರಹ ಪಡೆದರು.

ಡೈಮಂಡ್ ಲೀಗ್ ಪಂದ್ಯ: ಮೊದಲ ಸುತ್ತಿನಲ್ಲಿ 88.67 ಮೀ ಎಸೆತದೊಂದಿಗೆ ಗೆಲುವು ದಾಖಲಿಸಿದ ನೀರಜ್ ಚೋಪ್ರಾ

ಡೈಮಂಡ್ ಲೀಗ್ ಪಂದ್ಯದ ಮೊದಲ ಸುತ್ತಿನಲ್ಲಿ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮೊದಲ ಗೆಲುವು ದಾಖಲಿಸಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಳೆದ ವರ್ಷ 2022 ಡೈಮಂಡ್ ಲೀಗ್ ಫೈನಲ್ ಟ್ರೋಫಿಯನ್ನು ಗೆದ್ದಿದ್ದ ಚೋಪ್ರಾ, ಶುಕ್ರವಾರ ರಾತ್ರಿ ಕತಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಘಟಾನುಘಟಿಗಳನ್ನು ಸೋಲಿಸಲು 88.67 ಮೀ ಅತ್ಯುತ್ತಮ ಎಸೆತದೊಂದಿಗೆ ಸೀಸನ್-ಆರಂಭದ ಮೊದಲ ಸುತ್ತನ್ನು ಗೆದ್ದಿದ್ದಾರೆ. ಇದು ತುಂಬಾ ಕಠಿಣ ಗೆಲುವು, ಆದರೆ ನನಗೆ ಸಂತೋಷವಾಗಿದೆ, ಇದು ನನಗೆ ಉತ್ತಮ ಆರಂಭವಾಗಿದೆ” ಎಂದು ಚೋಪ್ರಾ ಹೇಳಿದ್ದಾರೆ. […]

ಮನೆಯಿಂದಲೇ ಮತದಾನಕ್ಕೆ ಇಂದು ಕೊನೆ ದಿನ..!!!

ಬೆಂಗಳೂರು: ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮನೆಯಿಂದಲೇ ಮತದಾನ’ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದ್ದು, ಮನೆಯಿಂದಲೇ ಮತದಾನ ಮಾಡುವುದಕ್ಕೆ ಇಂದು ಕೊನೆಯ ದಿನವಾಗಿದೆ ಇದುವರೆಗೆ ರಾಜ್ಯದಲ್ಲಿ ಒಟ್ಟು 91,386 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದ ಮತದಾನದ ಅವಕಾಶ ಆಯೋಗ ಕಲ್ಪಿಸಿತ್ತು. ಒಟ್ಟು 99529ಮಂದಿ ಈ ಸೌಲಭ್ಯಕ್ಕೆ ಹೆಸರು […]