ಸ್ವಿಗ್ಗಿ ಸಂಸ್ಥೆಗೆ ಡೆಲಿವರಿ ಹುಡುಗರು ಬೇಕಾಗಿದ್ದಾರೆ

ಉಡುಪಿ/ ಮಂಗಳೂರು: ಮಂಗಳೂರು, ಪುತ್ತೂರು, ಬಂಟ್ವಾಳ, ಮೂಡಬಿದ್ರೆ, ಉಡುಪಿ, ಮಣಿಪಾಲ ಪರಿಸರದಲ್ಲಿ ಸ್ವಿಗ್ಗಿ ಸಂಸ್ಥೆಗೆ ಡೆಲಿವರಿ ಹುಡುಗರು ಬೇಕಾಗಿದ್ದಾರೆ. ಆಸಕ್ತರು 8951620203 ಅನ್ನು ಸಂಪರ್ಕಿಸಿ

ಕಲೆ ವಿಶ್ವ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ: ಮೆರ್ಲಿ ಬರ್ಲಾನ್

ಮಣಿಪಾಲ: ಕಲೆ ವಿಶ್ವದಾದ್ಯಂತ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವ ಶಾಂತಿಯ ಅಂತರರಾಷ್ಟ್ರೀಯ ಮಹಿಳಾ ಒಕ್ಕೂಟ (WFWPI) ಯುಎನ್ ಸಂಬಂಧಗಳ (ನ್ಯೂಯಾರ್ಕ್) ನಿರ್ದೇಶಕಿ ಮೆರ್ಲಿ ಬರ್ಲಾನ್ ಹೇಳಿದರು. ಅವರು ವಿಶ್ವ ಶಾಂತಿಯ ಅನ್ವೇಷಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ ಮಣಿಪಾಲದ ವಿಶೇಷಚೇತನ ಮಕ್ಕಳ ವಿಶೇಷ ಮನೆಯಾದ ‘ಆಸರೆ’ಯನ್ನು ಬೆಂಬಲಿಸುವ ಸಾಂಸ್ಕೃತಿಕ ಸಂಜೆ ‘ಆರ್ಟ್ ಫಾರ್ ಪೀಸ್’ […]

ಸಿಇಟಿ ಪರೀಕ್ಷೆ ಆರಂಭ; ಜಿಲ್ಲೆಯಲ್ಲಿ ಸಕಲ ಸಿದ್ದತೆ ಪೂರ್ಣ: ಜಿ.ಪಂ ಸಿಇಒ

ಉಡುಪಿ: ರಾಜ್ಯದಾದ್ಯಂತ ಸಿಇಟಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು ಮೇ 20 ಮತ್ತು 21 ರಂದು ನಡೆಯಲಿರುವ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಉಡುಪಿಯಲ್ಲಿ 6, ಕಾರ್ಕಳದಲ್ಲಿ 2, ಕುಂದಾಪುರದಲ್ಲಿ 2 ಹಾಗೂ ಬ್ರಹ್ಮಾವರದಲ್ಲಿ 2 ಸೇರಿದಂತೆ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 5712 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಸಿಇಟಿ ಪರೀಕ್ಷೆ ಕುರಿತು ಪ್ರಶ್ನೆಪತ್ರಿಕೆಯನ್ನು ಜಿಲ್ಲಾ ಖಜಾನೆಯಲ್ಲಿ ಸೂಕ್ತ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದೆ. ಖಜಾನೆಯಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸುವಂತೆ ಹಾಗೂ […]

ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ

ಉಡುಪಿ: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿ ಪೂಜಾ ಮಹೋತ್ಸವ ಮೇ 24ರ ತನಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕಿದಿಯೂರು ಉದಯ ಕುಮಾರ್ ಶೆಟ್ಟಿ ಮಂಗಳವಾರ ಹೇಳಿದರು. ದೇವಸ್ಥಾನದ ಸುತ್ತುಪೌಳಿ ಮತ್ತು ಅಗ್ರ ಸಭಾ ಮಂಟಪವನ್ನು ನವೀಕರಿಸಿ ತಾಮ್ರದ ಮುಚ್ಚಿಗೆ ಹಾಕುವ ಕಾರ್ಯಕ್ಕೆ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದು, ಗರ್ಭಗುಡಿಯ ಸುತ್ತು ಹಾಸು ಕಲ್ಲಿನ ನವೀಕರಣ ವ್ಯವಸ್ಥೆ, ಒಳ ಮತ್ತು […]

ಮುಂದಿನ 5 ವರ್ಷ ವಿಶ್ವದೆಲ್ಲೆಡೆ ತಾಪಮಾನ ಏರಿಕೆಯಾಗಲಿದೆ: ವಿಶ್ವಸಂಸ್ಥೆ ಎಚ್ಚರಿಕೆ.!!

ಮುಂದೆ ಬರುವ 2023-2027 ರ ವರೆಗಿನ 5 ವರ್ಷಗಳು ಇತ್ತೀಚಿನ ವರ್ಷಗಳಲ್ಲೇ ಅತೀ ಹೆಚ್ಚು ತಾಪಮಾನದಿಂದ ಕೂಡಿರುವ ವರ್ಷಗಳಾಗಿರಲಿವೆ ಎಂದು ವಿಶ್ವಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದೆ. ಹಸಿರುಮನೆ ಅನಿಲಗಳು ಮತ್ತು ಎಲ್‌ ನಿನೋ (ಸಾಗರದ ಮೇಲ್ಮೈ ಉಷ್ಣಾಂಶ)ದ ಏರಿಕೆಯಿಂದಾಗಿ ವಿಶ್ವದೆಲ್ಲೆಡೆ ತಾಪಮಾನ ಏರಿಕೆಯಾಗಲಿದೆ ಎಂದು ವಿಶ್ವ ಸಂಸ್ಥೆ ಹೇಳಿಕೆ ನೀಡಿದೆ. ಮುಂದಿನ 5 ವರ್ಷಗಳ ಅವಧಿಯಲ್ಲಿ ಪ್ಯಾರಿಸ್‌ ಹವಾಮಾನ ಒಪ್ಪಂದದ ಗುರಿಯನ್ನೂ ಮೀರಿ ಜಾಗತಿಕವಾಗಿ ತಾಪಮಾನ ಏರಿಕೆಯಾಗುವ ಎಲ್ಲಾ ಸಂಭವವಿದೆ ಎಂದು ವಿಶ್ವಸಂಸ್ಥೆಯ ಅಧೀನದಲ್ಲಿರುವ ವಿಶ್ವ ಹವಾಮಾನ […]