ಮಣಿಪಾಲ:ಶೀಘ್ರದಲ್ಲೇ ವಾರಾಂತ್ಯ ಯೋಗ ತರಗತಿಗಳು ಆರಂಭ

ಉಡುಪಿ:ಮಣಿಪಾಲದ ಪ್ರಿಸಂ ಸ್ಟುಡಿಯೋ (ಕ್ರಿಸ್ಟಲ್ ಬಿಸಿನೆಸ್ ಹಬ್, ಡಿಸಿ ಆಫೀಸ್ ಸಮೀಪ) ನಲ್ಲಿ ವಾರಾಂತ್ಯ ಯೋಗ ಕ್ಲಾಸ್ಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ. ದೇಹ–ಉಸಿರಾಟ–ಜಾಗೃತಿಯ ಸಮನ್ವಯದ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುವ ಈ ತರಗತಿಗಳನ್ನು ಡಾ. ಸ್ವರೂಪಾ ಮೊರೆ ನಡೆಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ತರಗತಿಗಳು ನಡೆಯಲಿದ್ದು, ನೋಂದಣಿಗಾಗಿ ಸಂಪರ್ಕಿಸಿ:📞 7676843931 / 8310159071
ಆರ್ ಎಸ್ ಎಸ್ ಶತಮಾನೋತ್ಸವ: ಜ.15 ರಿಂದ ದೇಶಾದ್ಯಂತ ‘ಹಿಂದೂ ಸಮಾಜೋತ್ಸವ’

ಮಥುರಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ಜನವರಿ 15ರಿಂದ ದೇಶಾದ್ಯಂತ ‘ಹಿಂದೂ ಸಮಾಜೋತ್ಸವ’ಗಳನ್ನು ಆಯೋಜಿಸಲಾಗುವುದು ಎಂದು ಬ್ರಜ್ ಪ್ರಾಂತ್ಯದ ಪ್ರಚಾರ ಪ್ರಮುಖ್ ಕೀರ್ತಿ ಕುಮಾರ್ ಭಾನುವಾರ ತಿಳಿಸಿದ್ದಾರೆ. ‘ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಸಮ್ಮೇಳನಗಳನ್ನು ನಡೆಸುವ ಗುರಿಯನ್ನು ಆರ್ಎಸ್ಎಸ್ ಹೊಂದಿದ್ದು, ಅದರಲ್ಲಿ ಸುಮಾರು 2000 ಸಮ್ಮೇಳನಗಳನ್ನು ಬ್ರಜ್ ಪ್ರದೇಶದಲ್ಲಿ ಆಯೋಜಿಸಲಾಗುವುದು. ಈ ಪ್ರದೇಶವು ಸುಮಾರು 3000 ನಗರ ಮತ್ತು ಗ್ರಾಮಗಳನ್ನು ಒಳಗೊಂಡಿದೆ’ ಎಂದು ಅವರು ಹೇಳಿದ್ದಾರೆ. ಶತಮಾನೋತ್ಸವವನ್ನು ‘ಸಮಾಜೋತ್ಸವ’ವಾಗಿ ಆಚರಿಸಲು ಮತ್ತು ಇಡೀ ಹಿಂದೂ […]
ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಿ ನಿರಾಕರಿಸಿದಕ್ಕೆ ಮಹಿಳೆಯ ಕೊಲೆ ಮಾಡಿದ ವಿದ್ಯಾರ್ಥಿ!

ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯ ಅಪಾರ್ಟ್ಮೆಂಟ್ನಲ್ಲಿ ಜನವರಿ 3ರಂದು ಉಸಿರುಗಟ್ಟಿ ಮೃತಪಟ್ಟ ಮಹಿಳಾ ಟೆಕ್ಕಿಯ ಸಾವಿನ ಪ್ರಕರಣಕ್ಕೆ ತಿರುವು ಲಭಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಕಾಣಿಸಿಕೊಂಡ ಹೊಗೆಯಿಂದ ಮಂಗಳೂರು ಮೂಲದ ಶರ್ಮಿಳಾ (35) ಉಸಿರುಗಟ್ಟಿ ಮೃತಪಟ್ಟಿದ್ದರು ಎನ್ನಲಾಗಿತ್ತು. ಆದರೆ ಇದೀಗ ತನಿಖೆ ವೇಳೆ ಸ್ಫೋಟಕ ರಹಸ್ಯ ಹೊರಬಿದ್ದಿದ್ದು, ಶರ್ಮಿಳಾ ಅವರನ್ನು ಪ್ರೀತಿಸುತ್ತಿದ್ದ18 ವರ್ಷದ ವಿದ್ಯಾರ್ಥಿ, ಕೇರಳ ಮೂಲದ ಕರ್ನಲ್ ಕುರೈ ಕೊಲೆ ಮಾಡಿ, ಸಾಕ್ಷ್ಯ ನಾಶಕ್ಕಾಗಿ […]
ಕಾರ್ಕಳ:ಕೌಡೂರು–ಬೈಲೂರು ಪ್ರದೇಶದಲ್ಲಿ ಪರಿವರ್ತಿತ ಸೈಟ್ಗಳು ಮಾರಾಟಕ್ಕೆ ಲಭ್ಯ

ಕಾರ್ಕಳ: ತಾಲ್ಲೂಕಿನ ಕೌಡೂರು–ಬೈಲೂರು ಪ್ರದೇಶದಲ್ಲಿರುವ ಲೌರ್ಡ್ ಚರ್ಚ್ ಸಮೀಪ ಕನ್ವರ್ಟೆಡ್ ಸೈಟ್ಗಳು ಮಾರಾಟಕ್ಕೆ ಲಭ್ಯ. 10 ರಿಂದ 12 ಸೆಂಟ್ಗಳ ವಿಸ್ತೀರ್ಣ ಹೊಂದಿರುವ ಈ ಸೈಟ್ಗಳ ಪ್ರತಿಸೆಂಟ್ ದರವನ್ನು ₹1,25,000 ಎಂದು ನಿಗದಿಪಡಿಸಲಾಗಿದೆ. ಸೂಕ್ತ ರಸ್ತೆ ಸಂಪರ್ಕ ಮತ್ತು ಸೌಲಭ್ಯಗಳಿರುವ ಈ ಪ್ರದೇಶದಲ್ಲಿ ಭೂಮಿ ಖರೀದಿಗೆ ಆಸಕ್ತರು ಸಂಪರ್ಕಿಸಲು ಕೋರಲಾಗಿದೆ.📞+91 81970 35017
ಉಡುಪಿ ಫುಡ್ ಕಾರ್ನಿವಲ್: ಇಂದು ಕೊನೆಯ ದಿನ

ಉಡುಪಿ:ಅಜ್ಜರಕಾಡು ಪಾರ್ಕ್ನಲ್ಲಿ ನಡೆಯುತ್ತಿರುವ ಫುಡ್ ಕಾರ್ನಿವಲ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು,ಇಂದು ಕೊನೆಯ ದಿನವಾಗಿದೆ. ವಿವಿಧ ಫುಡ್ ಟ್ರಕ್ಗಳು, ವಿಶಿಷ್ಟ ಭೋಜನ ಪದಾರ್ಥಗಳು ಮತ್ತು ಮನರಂಜನಾ ಕಾರ್ಯಕ್ರಮಗಳೊಂದಿಗೆ ಆಯೋಜನೆ ವಿಶೇಷ ಆಕರ್ಷಣೆಯಾಗಿದ್ದು, ಇಂದು ರಾತ್ರಿ 10 ಗಂಟೆವರೆಗೆ ಸಂದರ್ಶಿಸಲು ಅವಕಾಶ ಇದೆ. ಉಡುಪಿ ಪವರ್ (Platform of Women Entrepreneurs) ಸಂಘಟನೆ ಈ ಕಾರ್ನಿವಲ್ನ್ನು ಆಯೋಜಿಸಿದ್ದು, ಕುಟುಂಬ ಸಮೇತ ಭೇಟಿ ನೀಡುತ್ತಿರುವವರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.