ಉಡುಪಿ:ಪೆರಂಪಳ್ಳಿ ಸುಬ್ರಮಣ್ಯ ಹೆಬ್ಬಾರ್ ಇವರಿಗೆ “ವಿಶ್ವೇಶ ಸೇವಾ ಪ್ರಶಸ್ತಿ”

ಉಡುಪಿ:ಶ್ರೀ ವಿಶ್ವಶತೀರ್ಥ ಸೇವಾ ಸಂಘ ಹುಬ್ಬಳ್ಳಿ, ಭವಾನಿ ನಗರ ರಾಯರ ಮಠ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಯತಿಕುಲ ಚಕ್ರವರ್ತಿ ಪದ್ಮವಿಭೂಷಣ ಡಾ. ಶ್ರೀ ವಿಶ್ವಶತೀರ್ಥರ ಆರನೇ ಪಾದುಕಾ ಸಮಾರಾಧನೆ ಅಂಗವಾಗಿ ಉಡುಪಿ ಪೆರಂಪಳ್ಳಿ ಸುಬ್ರಮಣ್ಯ ಹೆಬ್ಬಾರ್ ಇವರಿಗೆ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು “ವಿಶ್ವೇಶ ಸೇವಾ ಪ್ರಶಸ್ತಿ” ನೀಡಿ ಗೌರವಿಸಿದರು.
ಮರ್ಣೆ: ಪಾಳುಬಿದ್ದ ಬಸ್ ನಿಲ್ದಾಣಕ್ಕೆ ರಂಗು ತುಂಬಿದ ಕಲಾವಿದ ಮಹೇಶ್ ಮರ್ಣೆ

ಉಡುಪಿ: ಉಡುಪಿಯ ಮರ್ಣೆ ಕಲಾವಿದರ ಊರು ಅಂತಲೇ ಪ್ರಸಿದ್ಧಿ. ಇಲ್ಲಿನ ಪ್ರಸಿದ್ಧ ಕಲಾವಿದ ಮಹೇಶ್ ಮರ್ಣೆ ತನ್ನ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಊರಿನಲ್ಲಿದ್ದ ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ಹೊಸ ಮೆರುಗು ನೀಡಿದರು. ತನ್ನ ಅಪೂರ್ವ ಪ್ರತಿಭೆಯಿಂದ ಬಸ್ ನಿಲ್ದಾಣವನ್ನು ಅಲಂಕರಿಸಿದರು. ಬಣ್ಣ ಬಣ್ಣದ ಚಿತ್ತಾರ ಬಿಡಿಸಿ ಆಕರ್ಷಕವಾಗಿಸಿದರು. ಈಗ ಬಸ್ ನಿಲ್ದಾಣದಲ್ಲಿ ನಿಂತರೆ ವಿಶಿಷ್ಟ ಅನುಭವ ಆಗುತ್ತೆ. ಈ ಕಲರ್ ಫುಲ್ ಬಸ್ ನಿಲ್ದಾಣ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ.
ಹೃದಯಾಘಾತದಿಂದ ಅಯ್ಯಪ್ಪ ಮಾಲಾಧಾರಿ ಮೃತ್ಯು!

ಉಳ್ಳಾಲ: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸೋಮೇಶ್ವರದ ಪಿಲಾರು ದೇಲಂತಬೆಟ್ಟು ನಿವಾಸಿ ಚಂದ್ರಹಾಸ್ ಶೆಟ್ಟಿ (55) ಕೇರಳದ ಎರಿಮಲೆ ಬೆಟ್ಟವನ್ನು ಸೋಮವಾರ ಏರುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅರ್ಕುಳ ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಕಾಡಿನ ದಾರಿಯಾಗಿ ಪಂಪೆಗೆ ಸಾಗುತ್ತಿದ್ದಾಗ ಕುಸಿದು ಬಿದ್ದರು. ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್ ಅವರು ಕೇರಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಂಗಳವಾರ ಬೆಳಗ್ಗೆ ಪಾರ್ಥಿವ ಶರೀರ ಉಳ್ಳಾಲ ತಲುಪಲಿದೆ. ಚಂದ್ರಹಾಸ್ ಅವರು ಮೂಲತಃ ಬಾಕ್ರಬೈಲ್ ನಿವಾಸಿಯಾಗಿದ್ದು, […]
ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಐಟಿಕೆ ವಿದ್ಯಾರ್ಥಿನಿ ಗೀತಾಂಜಲಿ ಸಾಧನೆ.

ಕುಂದಾಪುರ: ಕುಂದಾಪುರದ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಶಿವಗೊಂಡ ಚೌಗಲಾ ಅವರು ಮಲೇಷ್ಯಾದ ಕೌಲಾಲಂಪುರ್ ನಗರದಲ್ಲಿ ಅದ್ಧೂರಿಯಾಗಿ ನಡೆದ ಅತಿ ದೊಡ್ಡ ಯುವ ನಾಯಕತ್ವ ಸಮ್ಮೇಳನಗಳಲ್ಲಿ ಒಂದಾದ AYIMUN–2025 ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಈ ಸಮ್ಮೇಳನಕ್ಕೆ ಭಾರತದಿಂದ ಕೇವಲ ಏಳು ವಿದ್ಯಾರ್ಥಿಗಳು ಮಾತ್ರ ಆಯ್ಕೆಗೊಂಡಿದ್ದು, ಅವರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಗೌರವ ಗೀತಾಂಜಲಿಗೆ ದೊರಕಿದೆ. ಅವರ ಆಯ್ಕೆ ಶೈಕ್ಷಣಿಕ ಸಾಮರ್ಥ್ಯ ಹಾಗೂ ಸಂಶೋಧನಾ ಲೇಖನ ಆಧಾರದ ಮೇಲೆ […]
ಕುಂದಾಪುರ: ಮಹಿಷಮರ್ಧಿನಿ ಶಿಲ್ಪ ಪತ್ತೆ.

ಉಡುಪಿ: ಕುಂದಾಪುರ ತಾಲ್ಲೂಕಿನ ಕುಂದಬಾರಂದಾಡಿಯ ಜೀರ್ಣಾವಸ್ಥೆಯಲ್ಲಿರುವ ದೇವಾಲಯದಲ್ಲಿ ಅಪರೂಪದ ಮಹಿಷಮರ್ಧಿನಿಯ ಶಿಲ್ಪ ಕಂಡುಬಂದಿದೆ ಎಂದು ಪುರಾತತ್ತ್ವ ವಿದ್ವಾಂಸ ಹಾಗೂ ಆದಿಮ ಕಲಾ ಟ್ರಸ್ಟ್ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ. ಕುಂದಬಾರಂದಾಡಿಯ ಮಹಿಷಮರ್ಧಿನಿಯು, ಆರು ಕೈಗಳನ್ನು ಹೊಂದಿದ್ದು, ಬಲಭಾಗದ ಮೊದಲ ಕೈಯಲ್ಲಿ ತ್ರಿಶೂಲ, ಎರಡನೇ ಕೈಯಲ್ಲಿ ಖಡ್ಗ, ಮೂರನೇ ಕೈಯಲ್ಲಿ ಗಧೆಯನ್ನು ಹಿಡಿದಿದ್ದಾಳೆ. ಎಡಭಾಗದ ಮೊದಲ ಕೈಯನ್ನು ಮಹಿಷನ ಬೆನ್ನಿನ ಮೇಲೆ ಇರಿಸಲಾಗಿದೆ, ಎರಡನೇ ಕೈ ತುಂಡಾಗಿದ್ದು, ಮೂರನೇ ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದಾಳೆ. ತನ್ನ ಬಲಗಾಲನ್ನು ಮಹಿಷನ […]