ದೊಡ್ಡಣ್ಣಗುಡ್ಡೆ: ಜೂನ್ 22 ರಿಂದ 25 ರವರೆಗೆ ಹಲಸು ಮೇಳ-2023

ದೊಡ್ಡಣ್ಣಗುಡ್ಡೆ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈ.ಲಿ ಸಹಯೋಗದಲ್ಲಿ ಜೂನ್ 22 ರಿಂದ 25 ರವರೆಗೆ ದೊಡ್ಡಣ್ಣಗುಡ್ಡೆ ಪುಷ್ಪ ಹರಾಜು ಕೇಂದ್ರ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ಹಲಸು ಮೇಳ-2023 ಅನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಾತಿ ಹಲಸಿನ ಹಣ್ಣಿನ ಮಾರಾಟ, ಹಲಸಿನ ಖಾದ್ಯಗಳು, ಹಲಸಿನ ಗಿಡಗಳ ಮಾರಾಟ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಮಳಿಗೆಗಳನ್ನು ತೆರೆಯಲು ಇಚ್ಛಿಸುವ ರೈತರು ಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕ […]

ಕೋಡಿಬೆಂಗ್ರೆ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ: ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು

ಉಡುಪಿ: ಶಿಕ್ಷಕರ ವರ್ಗಾವಣೆ ವಿರೋಧಿಸಿ ಕೋಡಿ ಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತಗತಿವರೆಗೆ ಒಟ್ಟು ಎಂಭತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಇಷ್ಟು ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿದ್ದರು. ಇದೀಗ ಅವರಲ್ಲಿ ಒಬ್ಬರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇದಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಮುಖಂಡ ರಮೇಶ್ ತಿಂಗಳಾಯ, ಸರ್ಕಾರಿ ಶಾಲೆಯನ್ನು ನೇರವಾಗಿ ಮುಚ್ಚದೆ, ಹಿಂಬಾಗಿಲಿಂದ ಮುಚ್ಚಲು ಪ್ರಯತ್ನಿಸಲಾಗುತ್ತಿದೆ. ಶಿಕ್ಷಣಾಧಿಕಾರಿಗಳು, ಉದ್ಯಮಿಗಳು […]

ಬೆಕ್ಕಿನ ಮರಿಯನ್ನು ರಕ್ಷಿಸಲು 40 ಅಡಿ ಆಳದ ಬಾವಿಗೆ ಇಳಿದ ಪೇಜಾವರ ಸ್ವಾಮೀಜಿ

ಉಡುಪಿ: ಮುಚ್ಲಕೋಡಿನ ದೇವಸ್ಥಾನದಲ್ಲಿ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲು ಖುದ್ದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾವಿಗಿಳಿದಿರುವ ಘಟನೆ ನಡೆದಿದೆ. ಭಾನುವಾರದಂದು ಸ್ವಾಮೀಜಿಗಳು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬೆಕ್ಕಿನ ಮರಿ 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಕಂಡಿದ್ದಾರೆ. ಬೆಕ್ಕಿನ ಮರಿಯನ್ನು ಮೇಲೆತ್ತಲು ಬಕೆಟ್ ಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟಿದ್ದರೂ ಬೆಕ್ಕಿನ ಮರಿಗೆ ಬಕೆಟ್ ಒಳಗೆ ಬರಲು ಆಗಿರಲಿಲ್ಲ. ಕಟ್ಟಕಡೆಗೆ ಸ್ವಾಮೀಜಿಯವರೇ ಹಗ್ಗದ ಸಹಾಯದಿಂದ ಬಾವಿಗಿಳಿದು ಬೆಕ್ಕಿನ ಮರಿಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.

ಜೂ. 20-22 ರ ವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜೂನ್ 20 ರಿಂದ 22 ರ ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ 110 ಕೆ.ವಿ ಕೇಮಾರ್ ಬೇ, ಪಿಟಿ ಬೇ, ಪರಿವರ್ತಕ- 1 ಬೇ, ಹಿರಿಯಡ್ಕ ಬೇ, ಪರಿವರ್ತಕ- 2 ಬೇ, ಪರಿವರ್ತಕ 1 ಎಂಡ್ 2 ಮತ್ತು ಎಲ್ಲಾ 11 ಕೆ.ವಿ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ […]

ಕಾಶೀಮಠಾಧೀಶರಿಂದ ಶ್ರೀಲಕ್ಷ್ಮೀ ವೆಂಕಟೇಶ್ವರನಿಗೆ ಮಹಾಪೂಜೆ

ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಬೆಳ್ಳಿಗೆ ಪ್ರಧಾನ ದೇವರರಾದ ಶ್ರೀಲಕ್ಷ್ಮೀ ವೆಂಕಟೇಶನಿಗೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಮಹಾಪೂಜೆ ನಡೆಸಿ ಆರತಿ ಬೆಳಗಿಸಿ ಬಳಿಕ ಭಕ್ತರಿಗೆ ಪ್ರಸಾದ ನೀಡಿ ಅನುಗ್ರಹಸಿದರು. ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ , ಅರ್ಚಕ ಚೆಂಪಿ ಶ್ರೀಕಾಂತ್ ಭಟ್, ವಿನಾಯಕ ಭಟ್, ದೀಪಕ್ ಭಟ್, ಪುಂಡಲೀಕ ಕಾಮತ್ , ವಸಂತ್ ಕಿಣಿ, ರೋಹಿತಾಕ್ಷ ಪಡಿಯಾರ್, ಉಮೇಶ್ ಪೈ , ವಿಶಾಲ್ ಶೆಣೈ , ಸತೀಶ್ […]