ಉಡುಪಿ – ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗಲಿರುವ ಪಂಚಮ ವರ್ಷದ ಉಡುಪಿ- ಉಚ್ಚಿಲ ದಸರಾ 2026 ಇದರ ಆಮಂತ್ರಣ ಪತ್ರಿಕೆ ಯನ್ನು ರವಿವಾರ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ ಶಂಕರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಅ.11ರಿಂದ 21ರವರೆಗೆ ನಡೆಯುವ ದಸರಾ ಕಾರ್ಯಕ್ರಮವನ್ನು ಮುಜರಾಯಿ, ಬಂದರು ಹಾಗೂ ಮೀನು ಗಾರಿಕಾ ಸಚಿವ ಕೆ.ಎಸ್.ಬಸಂತಪ್ಪ ಉದ್ಘಾಟಿಸಲಿರುವರು. ಸಕ್ಕರೆ ಮತ್ತು ಜವಳಿ ಸಚಿವರಾದ ರುದ್ರಪ್ಪ ಎಂ.ಲಮಾಣಿ, ಜಿಲ್ಲಾ […]
ಉಡುಪಿ: ನಿವೃತ್ತ ಶಿಕ್ಷಕರ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ಗಣಪ; ಆವೆ ಮಣ್ಣಿನಿಂದ ಮೂರ್ತಿಗಳ ನಿರ್ಮಾಣ; ಒಂದೂವರೆ ಅಡಿಯಿಂದ ಐದು ಅಡಿ ಎತ್ತರದವರೆಗೆ ಗಣಪನಿಗೆ ರೂಪ.!

ಉಡುಪಿ: ಗಣೇಶೋತ್ಸವ ಬಂದರೆ ಸಾಕು ಉಡುಪಿಯ ಅಲೆವೂರಿನ ನಿವೃತ್ತ ಶಿಕ್ಷಕ ಶೇಖರ ಕಲ್ಮಾಡಿ ಅವರ ಮನೆಯಂಗಳದಲ್ಲಿ ವಿವಿಧ ವಿನ್ಯಾಸದ ಗಣಪತಿ ಮೂರ್ತಿಗಳ ನಿರ್ಮಾಣದ ಚಟುವಟಿಕೆ ಗರಿಗೆದರಿದೆ. ಹಲವು ವರ್ಷಗಳಿಂದ ಆವೆ ಮಣ್ಣಿನಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ನಿರ್ಮಿಸುತ್ತಿರುವ ಅವರು, ಈ ಬಾರಿಯೂ ತಮ್ಮ ಕಲಾ ಕೌಶಲದಿಂದ ಗಮನ ಸೆಳೆಯುತ್ತಿದ್ದಾರೆ.ಅಲೆವೂರು, ಮಣಿಪುರ, ಶಾಂತಿನಗರ, ಪ್ರಗತಿನಗರ, ಮಟ್ಟು ಸೇರಿದಂತೆ ವಿವಿಧೆಡೆಯ ಗಣೇಶೋತ್ಸವ ಸಮಿತಿಗಳು ಪ್ರತಿವರ್ಷ ಶೇಖರ ಕಲ್ಮಾಡಿ ಅವರು ನಿರ್ಮಿಸುವ ಮೂರ್ತಿಗಳನ್ನೇ ಕೊಂಡೊಯ್ಯುತ್ತವೆ.ಅಲೆವೂರಿನ ನೆಹರೂ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ, […]
ಬಡಗಬೆಟ್ಟು ಸೊಸೈಟಿಗೆ ₹15.09 ಕೋಟಿ ನಿವ್ವಳ ಲಾಭ; ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ- ಸತತ 20ನೇ ಜಿಲ್ಲಾ ಸಾಧನಾ ಪ್ರಶಸ್ತಿ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2025–26ನೇ ಸಾಲಿನಲ್ಲಿ ₹15.09 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆದ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸೊಸೈಟಿ 22,869 ಸದಸ್ಯರನ್ನು ಹೊಂದಿದ್ದು, ₹4.89 ಕೋಟಿ ಪಾಲು ಬಂಡವಾಳ ಹಾಗೂ […]
ಥ್ರೋಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಕುಂದಾಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಥ್ರೋಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಪ್ರಥಮ ಸ್ಥಾನದೊಂದಿಗೆ ವಿಜಯದ ಕಿರೀಟವನ್ನು ಧರಿಸಿ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಘವೇಂದ್ರ ಗಾಣಿಗ ತರಬೇತಿಯನ್ನು ನೀಡಿದ್ದಾರೆ. ಕ್ರೀಡಾಪಟುಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ […]
ಜಿಲ್ಲಾ ಮಟ್ಟದ ಕೋಕೋ ಪಂದ್ಯಾವಳಿಯಲ್ಲಿ ಎಸ್.ಎಂ.ಎಸ್. ತಂಡದ ಸಾಧನೆ; ಸತತ ಎರಡನೇ ವರ್ಷ ರಾಜ್ಯಮಟ್ಟಕ್ಕೆ ಆಯ್ಕೆ

ಬ್ರಹ್ಮಾವರ: ಜಿಲ್ಲಾ ಮಟ್ಟದ ಕೋಕೋ ಬಾಲಕರ ವಿಭಾಗದ ಪಂದ್ಯಾವಳಿಯಲ್ಲಿ ಬ್ರಹ್ಮಾವರದ ಎಸ್.ಎಂ.ಎಸ್. ಪದವಿಪೂರ್ವ ಕಾಲೇಜಿನ ತಂಡವು ಗಮನಾರ್ಹ ಸಾಧನೆ ಮಾಡಿ ಸತತ ಎರಡನೇ ವರ್ಷ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ.ತೀವ್ರ ಪೈಪೋಟಿಯಿಂದ ಕೂಡಿದ್ದ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಎಸ್.ಎಂ.ಎಸ್. ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿತು. ತಂಡದ ಆಟಗಾರರು ಉತ್ತಮ ಕೌಶಲ್ಯ, ಶಿಸ್ತು, ವೇಗ ಹಾಗೂ ತಂಡದ ಒಗ್ಗಟ್ಟಿನಿಂದ ಆಟವಾಡಿ ಈ ಯಶಸ್ಸನ್ನು ಸಾಧಿಸಿದರು. ಇದೇ ಸಂದರ್ಭದಲ್ಲಿ ಕೋಕೋ ಬಾಲಕರ ವಿಭಾಗದಲ್ಲಿ 6 ಮಂದಿ […]