ಸ್ವಚ್ಛ ಉಡುಪಿ – ಹಸಿರು ಉಡುಪಿ’ ಅಭಿಯಾನಕ್ಕೆ CREDAI ಉಡುಪಿ ಹಾಗೂ ACCEAಯಿಂದ ಮತ್ತೊಂದು ಮಹತ್ವದ ಕೊಡುಗೆ

ಉಡುಪಿ: ನಿರ್ಮಾಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ CREDAI ಉಡುಪಿ ಹಾಗೂ Association of Consulting Civil Engineers and Architects (ACCEA), Udupi ಸಂಸ್ಥೆಗಳು ಉಡುಪಿ ನಗರವನ್ನು ಇನ್ನಷ್ಟು ಸ್ವಚ್ಛ, ಹಸಿರು ಮತ್ತು ಸುಂದರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯೊಂದಿಗೆ ಕೈಜೋಡಿಸಿವೆ. ಇತ್ತೀಚೆಗೆ ಪರಿಸರ ದಿನಾಚರಣೆಯ ಅಂಗವಾಗಿ ಅಜ್ಜರಕಾಡಿನ ಸಸ್ಯಕಾಶೆಯಲ್ಲಿ ಗಿಡ ನೆಡುವ ಮೂಲಕ ‘ಸ್ವಚ್ಛ ಉಡುಪಿ – ಹಸಿರು ಉಡುಪಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನದ ಮುಂದುವರಿದ ಭಾಗವಾಗಿ, ಇಂದು ಇಂಜಿನಿಯರ್ಸ್ […]
3 ತಿಂಗಳ ಮಗುವಿನ ಯಕೃತ್ತಿನ ಕ್ಯಾನ್ಸರ್ ಗೆಡ್ಡೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ:ಮಗು ಕ್ಯಾನ್ಸರ್ ಮುಕ್ತ!

ಮಣಿಪಾಲ: ಕೇವಲ ಮೂರು ತಿಂಗಳ ಹಸುಗೂಸಿನ ಯಕೃತ್ತಿನಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಕ್ಯಾನ್ಸರ್ ಗೆಡ್ಡೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದೆ. ಚಿಕಿತ್ಸೆಯ ಬಳಿಕ ಮೂರು ವರ್ಷಗಳಿಗೂ ಹೆಚ್ಚು ಕಾಲದ ತಪಾಸಣೆಯಲ್ಲೂ ಯಾವುದೇ ಕ್ಯಾನ್ಸರ್ ಲಕ್ಷಣ ಕಂಡುಬಂದಿಲ್ಲ. ಮಗು ಇದೀಗ ಆರೋಗ್ಯವಾಗಿದ್ದು, ವಯೋಸಹಜ ಬೆಳವಣಿಗೆ ಹೊಂದಿದೆ. ಮಗುವಿಗೆ ಯಕೃತ್ತು ದೊಡ್ಡದಾಗಿರುವುದು ಹಾಗೂ ಯಕೃತ್ತಿನ ಕ್ಯಾನ್ಸರ್ನ ಪ್ರಮುಖ ಸೂಚಕವಾದ ಆಲ್ಫಾ-ಫೆಟೊಪ್ರೊಟೀನ್ (AFP) ಮಟ್ಟ ಹೆಚ್ಚಿರುವುದು ಪತ್ತೆಯಾಗಿತ್ತು. ಪರೀಕ್ಷೆಯಲ್ಲಿ ಹೆಪಟೊಬ್ಲಾಸ್ಟೋಮಾ ಎಂಬ ಅಪರೂಪದ ಯಕೃತ್ತಿನ ಕ್ಯಾನ್ಸರ್ […]
ಎ.ಜಿ. ಅಸೋಸಿಯೇಟ್ಸ್ ಉಡುಪಿ ವತಿಯಿಂದ ಎಂಜಿನಿಯರ್ ಡೇ ಆಚರಣೆ , ಸನ್ಮಾನ

ಎ.ಜಿ. ಅಸೋಸಿಯೇಟ್ಸ್ ಉಡುಪಿ ವತಿಯಿಂದ ಎಂಜಿನಿರ್ಸ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಎಂಜಿನಿರ್ಸ್ ದಿನಾಚರಣೆ ವಿಶೇಷ ಕಾರ್ಯಕ್ರಮವು ಬ್ರಹ್ಮಗಿರಿ ಸರ್ಕಲ್ ಸಮೀಪದ ನಾಯರ್ಕೆರೆ ಎ.ಜಿ. ಅಸೋಸಿಯೇಟ್ಸ್ನ ಎಜಿಎ ಕ್ಯಾಂಟಿಲೀವರ್ನಲ್ಲಿ ಮಂಗಳವಾರ ನಡೆಯಿತು.ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನಿರ್ದೇಶಕ ರಾಹುಲ್ ಕಲ್ಕೂರ ಹಾಗೂ ಎಸ್ಎಂವಿಟಿಯ ಸಿವಿಲ್ ಎಂಜಿನಿಯರ್ ಮತ್ತು ತರಬೇತಿ ಪ್ಲೇಸ್ಮೆಂಟ್ ಮುಖ್ಯಸ್ಥ ಎಂಜಿನಿಯರ್ ರೋಶನ್ ಎಸ್. ಕೋಟ್ಯಾನ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್ಎಂವಿಟಿಯ ಸಿವಿಲ್ ಎಂಜಿನಿಯರ್ ಮತ್ತು ತರಬೇತಿ ಪ್ಲೇಸ್ಮೆಂಟ್ ಮುಖ್ಯಸ್ಥ ಎಂಜಿನಿಯರ್ ರೋಶನ್ ಎಸ್. […]
ಕಸ್ತೂರಿರಂಗನ್ ಅಧಿಸೂಚನೆ ಹಿಂಪಡೆಯಿರಿ, ಸ್ಥಳೀಯರ ಭೂಹಕ್ಕಿಗೆ ಧಕ್ಕೆ ತರಬೇಡಿ- ಮುನಿಯಾಲು ಉದಯಕುಮಾರ್ ಶೆಟ್ಟಿ

ಉಡುಪಿ: ಪಶ್ಚಿಮಘಟ್ಟ ತಪ್ಪಲು ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿರುವ ಕಸ್ತೂರಿರಂಗನ್ ವರದಿ ಜಾರಿ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ಜಾರಿಯಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳ ನಿವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಸ್ಥಳೀಯರ ಭೂಹಕ್ಕಿಗೆ ಯಾವುದೇ ಧಕ್ಕೆ ಬರಬಾರದು. ಗ್ರಾಮಸಭೆ ನಡೆಸದೆ ಕೇವಲ ವೈಮಾನಿಕ ಸಮೀಕ್ಷೆ ಆಧರಿಸಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.ಸೆ.18ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ […]
ಸಿದ್ಧಾಂತ್ ಫೌಂಡೇಶನ್ ವತಿಯಿಂದ ಬೋಧನೆಯಲ್ಲಿ “ಕೃತಕ ಬುದ್ದಿ ಮತ್ತೆ ಯ (AI) ತರಬೇತಿ

ಮಂಗಳೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧಾಂತ್ ಫೌಂಡೇಶನ್ ಹಲವಾರುಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಂತೆ ಮಂಗಳೂರು ಹಾಗೂ ಸುತ್ತ ಮುತ್ತಲಿನ ಶಾಲಾ ಶಿಕ್ಷಕರಿಗಾಗಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ , ಬೋಧನೆಯಲ್ಲಿ ಕೃತಕ ಬುದ್ದಿಮತ್ತೆ (ಎ ಐ ) ಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ತ್ರಿಶಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾಂತ್ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀ ಸಿ ಎ ಗೋಪಾಲಕೃಷ್ಣ ಭಟ್ ಅವರು ವಹಿಸಿದ್ದರು.“ಅವರು ಟೆಕ್ನಾಲಜಿ […]