ಉಡುಪಿ: ಹಬ್ಬದ ಪ್ರಯುಕ್ತ “Brown Wood” ನಲ್ಲಿ ದೀಪಾವಳಿ ಧಮಾಕಾ ಸೇಲ್..!

ಉಡುಪಿ: ಉಡುಪಿ ಬ್ರಹ್ಮಗಿರಿ ಹತ್ತಿರವಿರುವ ಬ್ರೌನ್ ವುಡ್ ಫರ್ನಿಚರ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಧಮಾಕ ಸೇಲ್ ನಡೆಯುತ್ತಿದೆ. ಪ್ರತಿ ಖರೀದಿಯ ಮೇಲೆ ₹2,000/ ಲಕ್ಕಿ ಡ್ರಾ ಕೂಪನ್ ಹಾಗೂ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಪಡೆಯಿರಿ. ಇಲ್ಲಿ ನಿಮಗೆ ಬಂಪರ್ ಲಕ್ಕಿ ಡ್ರಾ,30% ವರೆಗೆ ರಿಯಾಯಿತಿ, O ಡೌನ್ ಪೇಮೆಂಟ್, ಕ್ಯಾಶ್ ಬ್ಯಾಕ್, 0% ಬಡ್ಡಿ, ಇಎಂಐ ಸೌಲಭ್ಯ ಹಾಗೂ ಸ್ಪಾಟ್ ಫೈನಾನ್ಸ್ ಮಾಡಿಕೊಡಲಾಗುವುದು. ಗ್ರಾಹಕರು ಪ್ರತಿ ಖರೀದಿಯೊಂದಿಗೆ ಖಚಿತವಾದ ಉಡುಗೊರೆಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ […]

ಬೈಂದೂರು:ಸ್ಕೂಟಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ; ಮಣ್ಣಿನಡಿ ಸಿಲುಕಿದ ಮಹಿಳೆಯ ರಕ್ಷಣೆ

ಉಡುಪಿ: ಸ್ಕೂಟಿಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು ಮಗುಚಿ ಬಿದ್ದು ಮಹಿಳೆ ಮಣ್ಣಿನಡಿ ಸಿಲುಕಿರುವ ಘಟನೆ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಣ್ಣಿನಡಿ ಸಿಲುಕಿದ ಮಹಿಳೆ ಉಪ್ರಳ್ಳಿಯ ಆರತಿ ಶೆಟ್ಟಿ ಎಂದು ತಿಳಿದುಬಂದಿದೆ. ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮಣ್ಣು ಸ್ಕೂಟ್ ರಲ್ಲಿದ್ದ ಮಹಿಳೆ ಮೇಲೆ ಬಿದ್ದು ಮಣ್ಣಿನಡಿಯಲ್ಲಿ ಮಹಿಳೆ ಸಿಲುಕಿಕೊಂಡಿದ್ದಾರೆ. […]

ಕೊಂಕಣಿ ಜಾನಪದ ಸಂಸ್ಕೃತಿ ಉಳಿಸುವ ಕಾರ್ಯವಾಗಬೇಕು: ಡೆನಿಸ್ ಡೆಸಾ

ಉಡುಪಿ: ನಮ್ಮಲ್ಲಿರುವ ಕೊಂಕಣಿ ಸಂಪ್ರದಾಯ, ಜಾನಪದ ಸಂಸ್ಕೃತಿ ವಿಶಿಷ್ಠ ಮತ್ತು ವೈವಿಧ್ಯಮಯವಾಗಿದ್ದು ಅದನ್ನು ಉಳಿಸಿ ಪೋಷಿಸುವ ಅಗತ್ಯತೆ ಇದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರ ಡೆನಿಸ್ ಡೆಸಾ ಹೇಳಿದರು. ಅವರು ಗುರುವಾರ ತೊಟ್ಟಂ ಚರ್ಚಿನ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಕಥೊಲಿಕ ವಿದ್ಯಾರ್ಥಿ ಸಂಚಾಲನ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವೈಸಿಎಸ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. […]

ಉಡುಪಿ: ಎಂಸಿಸಿ ಬ್ಯಾಂಕ್ ನ ಕರಾವಳಿ ಭಾಗದ ಶಾಖೆಗಳಾದ ಕುಂದಾಪುರ ಬ್ರಹ್ಮಾವರ ಹಾಗೂ ಉಡುಪಿ ಇವರ ಅತಿಥ್ಯದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಾರ್ಯಕ್ರಮ

ಉಡುಪಿ:ಉಡುಪಿ ಜಿಲ್ಲೆಯ ಎಂ.ಸಿ.ಸಿ ಬ್ಯಾಂಕಿನ ಕರಾವಳಿ ಭಾಗದ ಶಾಖೆಗಳಾದ ಕುಂದಾಪುರ ಬ್ರಹ್ಮಾವರ ಮತ್ತು ಉಡುಪಿ ಇವರ ಆಶ್ರಯದಲ್ಲಿ ಎಂ.ಸಿ.ಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ಆವರಣದಲ್ಲಿ ದೀಪಾವಳಿಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಎಂ.ಸಿ.ಸಿ ಬ್ಯಾಂಕಿನ ಸಿಬ್ಬಂದಿಯವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮದ ಮೇಲೆ ಶ್ರೀ ದೇವರ ಆಶ್ರಿವಾದಗಳನ್ನು ಬೇಡಿದರು.ಶ್ರೀಯುತ ಎಲ್ರೊಯ್ ಕಿರಣ್ ಕ್ರಾಸ್ತಾ ನಿರ್ದೇಶಕರು ಎಂ.ಸಿ.ಸಿ ಬ್ಯಾಂಕ್ ಕಾರ್ಯಕ್ರಮಕೆ ಆಗಮಿಸಿದ ಅತಿಥಿಗಳನ್ನು ಹಾಗೂ ಎಲ್ಲರನ್ನೂ ಸ್ವಾಗತಿಸಿದರು, ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ರವರು, ಹಾಗೂ ವೇದಿಕೆಯ ಮೇಲ್ಭಾಗದಲ್ಲಿರುವ […]

ಉಡುಪಿ: ‘ಸ್ಮರಣಿಕಾ’ದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಗೂಡುದೀಪಗಳ ಅಪಾರ ಸಂಗ್ರಹ..!

ಉಡುಪಿ:‌ ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ಸಾಂಪ್ರದಾಯಿಕ ಗೂಡು ದೀಪಗಳ ಅಪಾರ ಸಂಗ್ರಹ ಹೊಂದಿದ್ದು, ರಿಯಾಯಿತಿ ದರದಲ್ಲಿ ಸಿಗಲಿದೆ. ಪರಿಸರ ಸ್ನೇಹಿ ಗೂಡುದೀಪ: ಸಂಸ್ಥೆಯ ಮಳಿಗೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಾದೇಶಿಕ ಪಾರಂಪರಿಕ ಶೈಲಿಯ ಪರಿಸರಸ್ನೇಹಿ ಗೂಡುದೀಪಗಳ ಬೃಹತ್ ಸಂಗ್ರಹವನ್ನು ಹೊಂದಿದೆ. ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು […]